Home ಕರಾವಳಿ Archive by category ಮಂಗಳೂರು (Page 8)

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಇದರ ವತಿಯಿಂದ ದ್ವಿತೀಯ ಮತ್ತು ತ್ರಿತೀಯ ಪದವಿ ವಿದ್ಯಾರ್ಥಿಗಳಿಗೆ “ಬ್ಯಾಂಕಿಂಗ್ ಹಾಗು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ” ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ಮಾರ್ಟ್ ಕ್ಲಾಸ್ಸಸ್ ಅಕಾಡೆಮಿ ಇದರ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಂ. ಬಿ. ಎ ಪದವಿ ಪರೀಕ್ಷೆಯಲ್ಲಿ ಪ್ರಥಮ Rank ಪಡೆದ ಉಷಾ ನಾಯಕ್

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಳೆದ 2023 ರ ಸಾಲಿನಲ್ಲಿ ನಡೆಸಿದ ಅಂತಿಮ ಎಂ. ಬಿ. ಎ ಪರೀಕ್ಷೆಯಲ್ಲಿ ಉಷಾ ನಾಯಕ್ ಇವರು ಪ್ರಥಮ Rank ಹಾಗೂ ನಗದು ಪುರಸ್ಕಾರವನ್ನು ಪಡೆದಿದ್ದಾರೆ.ಬಾಲ್ಯದಿಂದಲೂ ತಂದೆಯ ಆಸೆಯನ್ನು ನೆರವೇರಿಸ ಬೇಕೆಂಬ ಛಲ, ಸತತ ಪ್ರಯತ್ನ, ಆತ್ಮ ವಿಶ್ವಾಸ ಹೊಂದಿರುವ ಈಕೆ ನಗರದ ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರು

ಮಕ್ಕಳ ಚೆಸ್ ಕಾರ್ನಿವಾಲ್ 2024 : ಗೊನ್ಝಾಗ ಶಾಲೆಗೆ ದ್ವಿತೀಯ ಸ್ಥಾನ

ಮಂಗಳೂರಿನ ಡೆರೆಕ್ ಚೆಸ್ ಸ್ಕೂಲ್ ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು ಇಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳ ಚೆಸ್ ಕಾರ್ನಿವಾಲ್ 2024 ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಗೊನ್ಝಾಗ ಶಾಲೆಯ 5ನೇ ತರಗತಿಯ ವಿಹಾನ್ ಆದರ್ಶ ಲೋಬೊ, 6ನೇ ತರಗತಿಯ ಝರಾ ಖಾಜಿ, 2ನೇ ತರಗತಿಯ ಮಾರ್ಕ್ ಬ್ಲೇಸಿಯಸ್ ಡಿ’ಸೋಜಾ ಮತ್ತು 2ನೇ ತರಗತಿಯ ಮಾನ್ವಿ ಸಾಯಿ ಕುಡ್ವ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ

14 ಮಂದಿ ಜನಪದಿಯರಿಗೆ ಕರ್ನಾಟಕ ಜನಪದ ಪರಿಷತ್ ಪ್ರಶಸ್ತಿ

ಮಾರ್ಚ್ 1ರಿಂದ 3 ರವರೆಗೆ ನಡೆಯುವ ಜಾನಪದ ಕಡಲೊತ್ಸವ -2024 ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು, ದೈವನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾರ್ಚ್ 2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ.

ಮಂಗಳೂರು : ಫೆ.24ರಂದು ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ

ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ , ಭಾಷಾ ತಜ್ಞ, ಶಿಕ್ಷಕ ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಫೆ.24 ರ ಶನಿವಾರ ಅಪರಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಲಿದೆ.‌ಕೆ.ಟಿ.ಗಟ್ಟಿಯವರ ಅಭಿಮಾನಿಗಳು, ಸಾಹಿತ್ಯ, ಸಾಮಾಜಿಕ, ರಾಜಕೀಯ , ಶೈಕ್ಷಣಿಕ ಕ್ಷೇತ್ರದವರೆಲ್ಲರೂ ಜೊತೆಯಾಗಿ ಗೌರವಪೂರ್ಣ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಳು

ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಮಂಗಳೂರಿನ ಯುವಕರು

ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್- 2023 ಆಗಿ ಹೊರಹೊಮ್ಮಿದರು. ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾದಿಂದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ – 2023 ಕಿರೀಟವನ್ನು ಪಡೆದರು.ಈ ಮಟ್ಟದ ಮೋಟಾರ್‌ಸ್ಪೋರ್ಟ್‌ನಲ್ಲಿ ಮಂಗಳೂರಿನ ಯುವಕನೊಬ್ಬ ಚಾಲಕರ ವಿಭಾಗದಲ್ಲಿ

ಮಂಗಳೂರು: ನೆಕ್ಸಾ ಶೋರೂಂನಲ್ಲಿ ಮೇಘಾ ಎಕ್ಸ್‌ಚೇಂಜ್ ಆಫರ್ ಮೇಳ

ಮಾರುತಿ ಸುಜುಕಿಯ ಗ್ರಾಂಡ್ ವಿತಾರ ಕಾರು ಒಂದು ಫುಲ್ ಟ್ಯಾಂಕ್‌ನಲ್ಲಿ 1436 ಕಿ.ಮೀ ಮೈಲೇಜು ನೀಡುವುದರೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ದಾಖಲೆ ಬರೆದಿದ್ದು, ಮಂಗಳೂರಿನ ನೆಕ್ಸಾ ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಶೋರೂಂನಲ್ಲಿ ಮೇಘಾ ಎಕ್ಸ್‌ಚೇಂಜ್ ಆಫರ್‌ಗಳು ಘೋಷಿಸಲಾಗಿದೆ.ಪ್ರತಿ ಖರೀದಿಯ ಮೇಲೆ ರೂ.79100ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ನಗರದ ಮೇರಿಹಿಲ್ ಏಪೋರ್ಟ್ ರಸ್ತೆಯ ಸುಮಿತ್ ಅಪಾರ್ಟ್‌ಮೆಂಟ್

ಸಂತ ಜೆರೋಸಾ ಶಾಲೆಯ ಜೊತೆಗೆ ನಿಂತ ಕಾನ್ಫರೆನ್ಸ್ ಆಫ್ ರಿಲಿಜಿಯಸ್ ಆಫ್ ಇಂಡಿಯಾ ( CRI )

ಫೆಬ್ರವರಿ 10, 2024 ರಂದು ತೆರೆದುಕೊಂಡ ದುರದೃಷ್ಟಕರ ಮತ್ತು ದುಃಖಕರ ಘಟನೆಗಳ ಮಧ್ಯೆ, CRI ಮಂಗಳೂರು ಘಟಕವು ಸೇಂಟ್ ಜೆರೋಸಾ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆ ಮತ್ತು ಅದರ ಆಡಳಿತದ ಜತೆಗೆ ಇದೆ. ಸೇಂಟ್ ಜೆರೋಸಾ ಶಾಲೆಯು ಇಂಗ್ಲಿಷ್ ಶಿಕ್ಷಕರ ವಿರುದ್ಧ ಆಧಾರರಹಿತ ಆರೋಪಗಳನ್ನು ಎದುರಿಸಿತು ಹಾಗೂ ಶಾಲಾ ಸಮುದಾಯಕ್ಕೆ ಸವಾಲಿನ ವಾತಾವರಣವನ್ನು ಸೃಷ್ಟಿಸಿತು.CRI ಮಂಗಳೂರು ಘಟಕವು ಯಾವುದೇ ರೀತಿಯ ಅನ್ಯಾಯದ ವರ್ತನೆಯನ್ನು ಖಂಡಿಸುತ್ತದೆ ಮತ್ತು ಸತ್ಯ ಮತ್ತು

ಮಂಗಳೂರು ಡೆಡ್ ಸಿಟಿಯಾಗಿದೆ-ಜಿಲ್ಲೆಯ ಅಭಿವೃದ್ಧಿಗೆ ಹೊಸ ಅಲೋಚನೆ ಇದೆ -ಡಿಸಿಎಂ ಡಿಕೆಶಿ

ಮಂಗಳೂರು ಸಂಜೆ ಏಳು ಗಂಟೆಯ ನಂತರ ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್‌ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಮಂಗಳೂರಿನಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಇಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಆಲೋಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ಅವರು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಮೈದಾನದ ಬಳಿ ಮಾತನಾಡಿದರು. ಇಲ್ಲಿನ

ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆಯೇರಿಕೆ ಇಳಿಸಲು,ದುಡಿಯುವ ಜನರ ಶೋಷಣೆ ತಪ್ಪಿಸಲು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು,ಉದ್ಯೋಗ ಸ್ರಷ್ಠಿಸಲು ಆಗ್ರಹಿಸಿ,ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರೈತ – ಕಾರ್ಮಿಕ – ಕ್ರಷಿ ಕೂಲಿಕಾರರಿಂದ ಇಂದು ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CITU ಜಿಲ್ಲಾಧ್ಯಕ್ಷರಾದ