ಪೀಠೋಪಕರಣ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ತಮಾಮ್ ಫರ್ನೀಚರ್ ವರ್ಲ್ಡ್ ನೂತನ ಶೋರೂಂ ನಗರದ ಪಂಪ್‌ವೆಲ್‌ನ ಬಳಿ ಸಿಟಿ ಗೇಟ್ ಬಿಲ್ಡಿಂಗ್‌ನಲ್ಲಿ ಉದ್ಘಾಟನೆಗೊಂಡಿತು. ಹಿಂದುಸ್ತಾನ್ ಬಾವಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾದ ಬಾವಾ ಅಬ್ದುಲ್ ಖಾದರ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಮಂಜೇಶ್ವರ ಶಾಸಕರಾದ ಎ.ಕೆ.ಎಂ ಅಶ್ರಫ್ ಅವರು ಮಾತನಾಡಿ,
ಜನವರಿ 22ರ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ. ಮಂತ್ರಾಕ್ಷತೆಯನ್ನು. ರಾಜ್ಯದ ಎಲ್ಲಾ. ಗ್ರಾಮಗಳ ಪ್ರತಿ ಮನೆಗಳಿಗೆ ವಿತರಿಸುವ. ಅಭಿಯಾನ ಜನವರಿ 15ರವರೆಗೆ ನಡೆಯಲಿದೆ. ಅಯೋದ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಾಣಪ್ರತಿಷ್ಠಗೊಳ್ಳುವ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ ಹವನ ಸತ್ಸಂಗ, ಭಜನೆ , ಮುಂತಾದ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕೂಡ ಆಯಾಯ
ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬಿಗು ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. ಬೀಚ್, ಪಾರ್ಕ್ ಸಹಿತ ಹೊರಾಂಗಣಗಳಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಹೊಟೇಲ್, ಚರ್ಚ್, ರೆಸಾರ್ಟ್ ಮೊದಲಾದ ಒಳಾಂಗಣಗಳಲ್ಲಿ ರಾತ್ರಿ 12.30 ರವರೆಗೆ ಅವಕಾಶವಿದೆ ಎಂದರು. ವ್ಯಾಪಕ ಬಂದೋಬಸ್ತ್ ನಡೆಸಲಾಗುವುದು. ನಿಯಮ
ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ಮಾಡಿದರು. ಪ್ರಧಾನ ನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್‌ಗೆ ಶನಿವಾರ 12.13 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರಥಮ ಪ್ರಯಾಣ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು – ಮಡಗಾಂವ್ ಸೇರಿ 6 ವಂದೇ ಭಾರತ್ ಹಾಗೂ 2
ಮಂಗಳೂರಿನ ಕೊಟ್ಟಾರದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟರ್‌ಗೆ ಲಾರಿಯೊಂದು ಢಿಕ್ಕಿಯಾಗಿದ್ದು, ರಸ್ತೆಗೆ ಎಸೆಯಲ್ಪಟ್ಟ ಸ್ಕೂಟರ್ ಸವಾರನ ಮೇಲೆ ಲಾರಿ ಹರಿದು ಈ ದುರ್ಘಟನೆ ಸಂಭವಿಸಿದೆ.
ಪಣಂಬೂರು ಬೀಚಿಗೆ ಹೊಸ ಆಕರ್ಷಣೆ ಆಗಿರುವ ತೇಲುವ ಸೇತುವೆಯನ್ನು ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಸಾರ್ವಜನಿಕರಿಗೆ ತೆರೆದಿಟ್ಟರು.ಬೀಚ್ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸಲು ಪ್ರವಾಸೋದ್ಯಮ ಸಚಿವರ ಜೊತೆಗೆ ಮಾತನಾಡುವುದಾಗಿ ಈ ಸಂದರ್ಭದಲ್ಲಿ ಖಾದರ್ ಹೇಳಿದರು. 150 ಮೀಟರ್ ಉದ್ದ ಇರುವ ಈ ತೇಲು ಸೇತುವೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ಇದರ ಮೇಲೆ ನಿಂತು ಸೂರ್ಯ ಮುಳುಗುವುದನ್ನು ನೋಡಬಹುದು. ಸದಾ 12 ಮಂದಿ ಜೀವ ರಕ್ಷಕರು ಅಲ್ಲಿ
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವು ಪಾಂಡೇಶ್ವರದ ಡಿಎಆರ್ ಪೆರೇಡ್ ಮೈದಾನ ಜರುಗಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖ್ಯ ಅಗ್ನಿಶಾಮಕ ಅಧಿಕಾರಿಗಳಾದ ತಿರುಮಲೇಶ್ ಬಿ.ಎಂ., ಕ್ರೀಡಾಪಟುಗಳು ಬಹಳ ಆಸಕ್ತಿಯಿಂದ ಭಾಗವಹಿಸಿರುತ್ತಾರೆ. ಕ್ರೀಡೆಯಿಂದ ದೇಹ ಮತ್ತು ಮನಸ್ಸಿನ ನೆಮ್ಮದಿ ಮತ್ತು ಆರೋಗ್ಯಕ್ಕೆ ಒಳಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ
ವಿಜ್ಞಾನಿಗಳು ಜಗತ್ತಿನಲ್ಲಿ 3,90,900 ಹೂಬಿಡುವ ಸಸ್ಯಗಳನ್ನು ಗುರುತಿಸಿದ್ದಾರೆ. ಭಾರತದಲ್ಲಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ 46,000 ಹೂಬಿಡುವ ಸಸ್ಯಗಳನ್ನು ಗುರುತಿಸಿದೆ. ಸಸ್ಯಗಳಲ್ಲಿ ಸಾಮಾನ್ಯ ಮತ್ತು ಕ್ಷಣಿಕ ಅವಧಿಯವು ಎಂದು ಎರಡು ವಿಧ. ನಾವು ಕಾಡು ಗುಡ್ಡಗಳಲ್ಲಿ ಗುರುತೇ ಇಲ್ಲದ ಎಷ್ಟೋ ಹೂ ಗಿಡ ಕಾಯಿಗಳನ್ನು ಕಂಡಿದ್ದೇವೆ. ಮಂಗಳೂರಿನ ಯೆಯ್ಯಾಡಿ ಬಾರೆಬಯ್ಲು ರಸ್ತೆ ಬದಿ ಅರ್ಧ ಕಿಲೋಮೀಟರ್‍ನಲ್ಲಿ ಕಂಡ ಕೆಲವು ಹೆಸರು ತಿಳಿಯದ ಹೂವುಗಳು ಇವು.
ಮುಲ್ಕಿ ನಗರೋತ್ಧಾನ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದ ವಿಶೇಷ ಅನುದಾನದಲ್ಲಿ ಮುಲ್ಕಿ ನಗರ ಪಂಚಾಯತ್ ನೂತನ ಕಛೇರಿ ಕಟ್ಟಡದ ಶಂಕುಸ್ದಾಪನೆ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ. ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿ, ಸರಕಾರವು ರಾಜ್ಯದಲ್ಲಿ ಶಿಸ್ತು ಬದ್ದ ಹಾಗೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಯೋಜನೆಗಳನ್ನು ತಯಾರಿಸಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ ಎಂದರು. ಈ ಸಂದರ್ಭ
ಬೈಕ್‌ನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ನ ಹೊಸಬೆಟ್ಟು ಈಶ್ವರನಗರ ನಿವಾಸಿ ಅಣ್ಣಪ್ಪಸ್ವಾಮಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಡಜೇ ನಿವಾಸಿ ಮೊಹಮ್ಮದ್ ಜುನೈದ್ ಹಾಗೂ ಹೊಸಬೆಟ್ಟು ವಿನ ಪಡ್ಡಾಯಿ ನಿವಾಸಿ ಎಂ.ಕೆ ಆಕಾಶ ಬಂಧಿತರು. ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಗುರಪ್ಪ ಕಾಂತಿ ರವರು ಸಿಬ್ಬಂದಿಯವರ ಜೊತೆ ಬಜಪೆಯ ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜಪೆಯಿಂದ ಕಳವಾರು




























