ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿನದು : ಪಣಂಬೂರು ಬೀಚಿನಲ್ಲಿ ತೇಲು ಸೇತುವೆ
ಪಣಂಬೂರು ಬೀಚಿಗೆ ಹೊಸ ಆಕರ್ಷಣೆ ಆಗಿರುವ ತೇಲುವ ಸೇತುವೆಯನ್ನು ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಸಾರ್ವಜನಿಕರಿಗೆ ತೆರೆದಿಟ್ಟರು.ಬೀಚ್ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸಲು ಪ್ರವಾಸೋದ್ಯಮ ಸಚಿವರ ಜೊತೆಗೆ ಮಾತನಾಡುವುದಾಗಿ ಈ ಸಂದರ್ಭದಲ್ಲಿ ಖಾದರ್ ಹೇಳಿದರು. 150 ಮೀಟರ್ ಉದ್ದ ಇರುವ ಈ ತೇಲು ಸೇತುವೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ಇದರ ಮೇಲೆ ನಿಂತು ಸೂರ್ಯ ಮುಳುಗುವುದನ್ನು ನೋಡಬಹುದು. ಸದಾ 12 ಮಂದಿ ಜೀವ ರಕ್ಷಕರು ಅಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಬೀಚ್ ನಿರ್ವಹಣಾ ಸಂಸ್ಥೆಗೆ ಸೇರಿದ ಲಕ್ಷ್ಮೀಶ ಭಂಡಾರಿ, ರಾಜೇಶ ಹುಕ್ಕೇರಿ ಉಪಸ್ಥಿತರಿದ್ದರು.