ಮೂಡುಬಿದಿರೆ :ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಸರಸ್ವತಿ ಬಲ್ಲಾಳ್ ಮತ್ತು ಡಾ.ಸಿ.ಕೆ.ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಬಂಟ್ವಾಳದಲ್ಲಿ
ಮೂಡುಬಿದಿರೆಯ ಪೊನ್ನೆಚಾರಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದ ಸಮಿತಿಯು ಶಾರದಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಲಂಗಾರು ಶ್ರೀ ಈಶ್ವರ ಭಟ್ ಅವರನ್ನು ಶಾರದಾನುಗ್ರಹ -2024 ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪೊನ್ನೆಚಾರಿ ಲಕ್ಷ್ಮಿ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರರು ಪೊನ್ನೆಚಾರಿ ಶಾರದಾ ಪೂಜಾ ಮಹೋತ್ಸವ ಹಾಗೂ ಮೂಡುಬಿದಿರಿ ದಸರಾ ಉತ್ಸವದ ರೂವಾರಿ ಅಶೋಕ ಕಾಮತ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಐದು ಶತಮಾನಗಳ ಇತಿಹಾಸವನ್ನು ಹೊಂದಿರುವ ಪೊನ್ನಚಾರಿ
ಮೂಡುಬಿದಿರೆ : ಇಲ್ಲಿನ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ಅವರನ್ನು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡುವ ಸಿರಿಪುರ ಪ್ರಶಸ್ತಿ- 2024 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಅವರನ್ನು
ಮೂಡುಬಿದಿರೆ : ಪೊಲೀಸ್ ಪ್ರಕರಣ, ಮಾದಕ ವ್ಯಸನಗಳ ಸೇವನೆಗೆ ಬಲಿಯಾಗಿ ಬಂಗಾರದಂತಹ ಜೀವನವನ್ನು ಕಳೆದುಕೊಳ್ಳದೆ ಪಠ್ಯ ಪಠ್ಯೇತ್ತರ ಚಟುವಟಿಕೆಯೊಂದಿಗೆ ವಿದ್ಯಾರ್ಥಿಗಳು ಜೀವನದ ಪಾಠವನ್ನು ಕಲಿತು ಉತ್ತಮ ಗುರಿಯನ್ನು ತಲುಪಬೇಕು ಎಂದು ಪಣಂಬೂರು ಎಸಿಪಿ ಶ್ರೀಕಾಂತ್ ಅಭಿಪ್ರಾಯಪಟ್ಟರು. ಅವರು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ವಾಹನಗಳ ಬಳಕೆ ಸಂದರ್ಭ ಅತಿಯಾದ ಉತ್ಸಾಹವನ್ನು
ಮೂಡುಬಿದಿರೆ: ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮೂಡುಬಿದಿರೆ ತಾಲೂಕಿನ ಬನ್ನಡ್ಕದಲ್ಲಿ ಸಂಭವಿಸಿದೆ.ಪಡುಮಾರ್ನಾಡು ಗ್ರಾ.ಪಂ.ವ್ಯಾಪ್ತಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃತಪಟ್ಟ ದುರ್ದೈವಿ.ವಿದ್ಯಾರ್ಥಿ ಆದಿತ್ಯ ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ
ಮೂಡುಬಿದಿರೆ: ಮಾಜಿ ಸೈನಿಕ ಹೆನ್ರಿ ಲೋಬೋ (80) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಮಾಸ್ತಿಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.15 ವರ್ಷಗಳ ಸೈನಿಕನಾಗಿ ಸೇವೆ ಸಲ್ಲಿಸಿದ ಅವರು ನಂತರ 23 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಅವರು ಪತ್ನಿ ಅಲಿಸಾ ಲೋಬೋ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಮೂಡುಬಿದಿರೆ : ಹೊಟೇಲ್ ಉದ್ಯಮಿ, ಕಡಲಕೆರೆ ಸೃಷ್ಟಿ ಮಲ್ಟಿ ಪರ್ಪಸ್ ಹಾಲ್ ನ ಮಾಲಕ ಸುರೇಶ್ ಶೆಟ್ಟಿ ಅವರು ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅಲಂಗಾರು ಬಂಗೇರಬೆಟ್ಟು ನಿವಾಸಿಯಾಗಿರುವ ಸುರೇಶ್ ಶೆಟ್ಟಿ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕೆಲವು ದಿನಗಳ ಹಿಂದೆ ಅಸೌಖ್ಯಕ್ಕೊಳಗಾದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ
ಮೂಡುಬಿದಿರೆ: “ಸ್ವಚ್ಛತಾ ಹೀ ಸೇವಾ” ಆಂದೋಲನ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ‘ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ’ ಅಭಿಯಾನದಡಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಶ್ರಮದಾನ ಶನಿವಾರ ನಡೆಯಿತು. ಆಳ್ವಾಸ್ ಕಾಲೇಜಿನ ಎನ್‌ಎಸ್ ಎಸ್ ವಿದ್ಯಾರ್ಥಿಗಳೊಂದಿಗೆ ನಿರ್ಕೇರೆ ಅಶ್ವಥಪುರ ಹಾಗೂ ಮಿಜಾರಿನ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರ ಕಸಗಳನ್ನು ಹೆಕ್ಕಿ
ಮೂಡುಬಿದಿರೆ : ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಆ.15 ಮತ್ತು ಸೆ. 2ರಂದು ನಡೆದ ಮಹಿಳೆಯರ ಚಿನ್ನಾಭರಣ ಎಳೆದೊಯ್ದು ಪರಾರಿಯಾಗಿದ್ದ ಈರ್ವರು ಖದೀಮರನ್ನು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಲ ಪಂಡಿತ್(70 ವರ್ಷ) ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಮತ್ತು ಸೆ. 2ರಂದು ಮೂಡುಮಾರ್ನಾಡು ಗ್ರಾಮದ ಬಸದಿ ಬಳಿ ನಿವಾಸಿ
ಮೂಡುಬಿದಿರೆ ಅಲಂಗಾರು ಅಯ್ಯ ಜಗದ್ಗುರು ಮಠದಲ್ಲಿ ವಿಶ್ವಕರ್ಮ ಯಜ್ಞ ಹಾಗೂ ಪೂಜೆಯು ವ್ಯವಸ್ಥಾಪಕ ವಿಶ್ವನಾಥ ಪುರೋಹಿತ್ ಆಚಾರ್ಯತ್ವದಲ್ಲಿ ನಡೆಯಿತು. ಮೂಡುಬಿದಿರೆ ಕಲ್ಲಬೆಟ್ಟು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ 48ನೇ ವರ್ಷದ ವಿಶ್ವಕರ್ಮ ಪೂಜೆಯು ಗಂಟಾಲ್‌ಕಟ್ಟೆ ಕಾಳಿಕಾಂಬಾ ನಿಲಯದಲ್ಲಿ ನಡೆಯಿತು. ಮೂಡುಬಿದಿರೆ ಪುತ್ತಿಗೆ ಗುಡ್ಡೆಯಂಗಡಿ ಪಾಲಡ್ಕ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಪೂಜೆಯು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಬೆಳುವಾಯಿ




























