ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ 2025-26ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾ ನಿಧಿ ವಿತರಣೆ ಕಾರ್ಯಕ್ರಮ ಆ. 24 ಆದಿತ್ಯವಾರ ಮಧ್ಯಾಹ್ನ ಗಂಟೆ 2 ಕ್ಕೆ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಲಿದೆ. ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷೆ ಶಶಿಕಲಾ
ಕಾಪು: 79 ನೇ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮೋತ್ಸವವು ಕಾಪು ಬ್ಲಾಕ್ ಕಾಂಗ್ರೆಸ್ ಕಚೇರಿ, ರಾಜೀವ್ ಭವನದಲ್ಲಿ ನಡೆಯಿತು. ಧ್ವಜಾರೋಹಣವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ನೆರವೇರಿಸಿದರು. ಭಾರತವು ಇಂದು 79 ನೇ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮೋತ್ಸವವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ವಿವಿಧ ಧರ್ಮ, ಜಾತಿಯ ಅನೇಕ ಮಹಾನ್ ನಾಯಕರು, ನಾಯಕಿಯರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿ ಹುತಾತ್ಮರಾಗಿರುವುದು
ಹೆಜಮಾಡಿ: 79ನೇ ಸ್ವತಂತ್ರ ದಿನಾಚರಣೆಯ ಶುಭ ಸಂದರ್ಭದಲ್ಲಿ ಭಾರತೀಯ ಸೇನೆಯ ಆರ್ಟಿಲರಿ ವಿಭಾಗದಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಮ್ಮ ಮಟ್ಟು ಗ್ರಾಮದ ಹೆಮ್ಮೆಯ ಯೋಧ ಚೇತನ್ ಶ್ರೀಯನ್ ರವರಿಗೆ ಕೋಟೆ ಮಟ್ಟು ಬಿಜೆಪಿ ವತಿಯಿಂದ ಮಂಡಲ ಪ್ರದಾನ ಕಾರ್ಯದರ್ಶಿ ಶ್ರೀ ಗೋಪಾಲ್ ಕೃಷ್ಣ ರಾವ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಯೋಧ ಚೇತನ್ ಶ್ರೀಯನ್ ರವರ ಬಗ್ಗೆ ಕೋಟೆ ಪಂಚಾಯತ್ ಉಪಾಧ್ಯಕ್ಷರಾದ ಯೋಗೀಶ್ ಸುವರ್ಣ ರವರು
ಪಡುಬಿದ್ರಿ: ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾ ಸಭೆಯು ನಡೆಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಮಾಜಿ ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ ಆಯ್ಕೆಯಾದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಕೋಟ್ಯಾನ್, ಜತೆ ಕಾರ್ಯದರ್ಶಿಯಾಗಿ ಯತೀಶ್ ದೇವಾಡಿಗ, ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಕೆ. ಕೋಟ್ಯಾನ್, ಜತೆ ಕೋಶಾಧಿಕಾರಿಯಾಗಿ
ಆಗಸ್ಟ್ 10, 2025 ರ ಭಾನುವಾರದಂದು ಸುರತ್ಕಲ್ ಶಾಖೆಯಲ್ಲಿ ತನ್ನ 10 ನೇ ಎಟಿಎಂ ಅನ್ನು ಉದ್ಘಾಟಿಸುವ ಮೂಲಕ ಎಂ.ಸಿ.ಸಿ. ಬ್ಯಾಂಕ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸಮಾರಂಭವು ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಆಸ್ಟಿನ್ ಪೀಟರ್ ಪೆರಿಸ್ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು, ಉಪಯೋಗಿಸಿದ ವಾಹನ ಮಾರಾಟ ಸಲಹೆಗಾರರಾದ ಶ್ರೀ ಮೊಹಮ್ಮದ್ ಹನೀಫ್ ಅವರು ಎಟಿಎಂ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಕ್ಕಾದ ಹೋಲಿ
ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನ ವತಿಯಿಂದ ಸಮವಸ್ತ್ರವನ್ನು ವಿತರಣ ಕಾರ್ಯಕ್ರಮ ನಡೆಯಿತು. “ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುವ ಯೋಗ ನಮಗೆ ದೊರಕಿದೆ. ಇದು ನಿಜಕ್ಕೂ ಸೌಭಾಗ್ಯ. ಶಾಲೆಯ ಋಣ ಬಹಳ ದೊಡ್ಡದು. ಈಗ ಈ ಮೂಲಕ ಋಣವನ್ನು ತೀರಿಸುವ ಅವಕಾಶ ದೊರೆತಿದೆ ” ಎಂದು
ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ)ಯಿಂದ 2024 ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಮತ್ತು ಎನ್‌ಸಿಸಿ ಮಾಜಿ ಕೆೆಡೆಟ್ ಆಗಿರುವ ಸಬ್ ಲೆಫ್ಟಿನೆಂಟ್ ಅನನ್ಯ ರಾವ್ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದಾರೆ. ಮಂಗಳೂರಿನ ಅನನ್ಯರವರು ನಿವೃತ್ತ ಟೆಲಿಕಾಂ ಅಧಿಕಾರಿ ಸತೀಶ್ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ. ಎಳಿಮಲದ ಭಾರತೀಯ ನೌಕಾ ಅಕಾಡೆಮಿಯಲ್ಲಿ 10 ತಿಂಗಳ ತೀವ್ರ ಮಿಲಿಟರಿ ತರಬೇತಿ ಕಾರ್ಯಕ್ರಮದ ನಂತರ, ಮೇ 31ರ, 2025 ರಂದು
ವಿದ್ಯೆ ಎನ್ನುವುದು ಅಭಿನಾಷಿಯಾದದ್ದು ವಿದ್ಯೆ ನಮ್ಮ ಬದುಕಿಗೆ ಕವಿದಿರುವ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡುತ್ತದೆ ಇಂತಹ ಉತ್ತಮ ಕೆಲಸವನ್ನು ಆಕಾಂಕ್ಷಿಗಳ ತಂಡ ಮಾಡುತ್ತಿದೆ.ಅಂಚೆ ಇಲಾಖೆಯ ಪದೋನ್ನತಿ ಪರೀಕ್ಷೆಗಳಿಗಾಗಿ ಆಯೋಜಿಸಿದ ಉಚಿತ ತರಬೇತಿ ಶಿಬಿರ ಶ್ಲಾಘನೀಯ. ವಿದ್ಯೆ ಕಲಿತಷ್ಟು ಮುಗಿಯದೇ ಇರುವಂಥದ್ದು. ಇಲಾಖೆಯೊಳಗೆ ಪದೋನ್ನತಿಯನ್ನು ಹೊಂದಿ ಉತ್ತಮ ಪದವಿಯನ್ನು ಏರುವುದಕ್ಕೆ ಈ ಒಂದು ಉಚಿತ ತರಬೇತಿ ಶಿಬಿರ ಕಾರಣವಾಗುತ್ತದೆ.ತಾಯಿ ದುರ್ಗಾದೇವಿ
ಮುಲ್ಕಿಯ ಬಪ್ಪನಾಡು ದೇವಳದ ಬಳಿಯಲ್ಲಿರುವ ಕಟ್ಪಾಡಿ ಮಹಾಮಾಯ ಸಿಲ್ಕ್ಸ್‌ನಲ್ಲಿ ಎ.18ರಿಂದ ಮೇ.17ರವರೆಗಿನ ಪ್ರತಿ 10,000 ಮೇಲ್ಪಟ್ಟ ಖರೀದಿಗೆ ಗ್ರಾಹಕರಿಗೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತಿದೆ. ಇಲ್ಲಿ ಮದುವೆ ಸೀರೆಗಳು, ಸಿಲ್ಕ್ಸ್ ಮತ್ತು ಕಾಂಜೀವರಂ, ಕಾಟನ್ ಹೀಗೆ ವಿವಿಧ ಶೈಲಿಯ ಸಾರಿಗಳು,ಪುರುಷರ, ಮಹಿಳೆಯರ ಹಾಗೂ ಮಕ್ಕಳ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ನವನವೀನ ರೀತಿಯ ಉಡುಪುಗಳು ಲಭ್ಯವಿದೆ.ಲಕ್ಕಿ ಕೂಪನ್ ವಿಜೇತರ ಹೆಸರನ್ನು ಮೇ.18ರಂದು ನಡೆಯುವ
ನಂದಿನಿ ಕ್ರಿಕೆಟರ್ಸ್ ಅರಂದ್ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಕೆಡ್ಡಸ ಹಾಗೂ ಸಂಘಟನೆಯ ವಾರ್ಷಿಕೋತ್ಸವವನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್ ಪೂಜಾರಿ ಚೇಳಾಯರುರವರು ವಹಿಸಿ ಹಿರಿಯರು ನಡೆಸುತ್ತಾ ಬಂದ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳುವ ಯುವ ಸಂಘಟನೆಯ ಪಾತ್ರ ನಿಜಕ್ಕೂ ಶ್ಲಾಘನೀಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದೇವಿ ದಯಾಳ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕರಾದ ಶ್ರೀ ದೇವಿ ದಯಾಳ್ ಶೆಟ್ಟಿಯವರು