Bangalore: Shweta Maurya, a renowned social worker, half marathon runner, and model, received a Doctorate honor from the Global Research Foundation, USA, for her social work and humanitarian services. She’s already won several awards, including International Woman Achiever Award 2021,
ಪಡುಬಿದ್ರಿ:ಪಡುಬಿದ್ರಿಯ ದೀನ್ ಸ್ಟ್ರೀಟ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 48 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ಮೌಲ್ಯದ ರಾಡೋ ವಾಚನ್ನು ಕದ್ದೊಯ್ದ ಘಟನೆ ದಿನಾಂಕ 27/01/2026 ಮಂಗಳವಾರದಂದು ತಡರಾತ್ರಿ ನಡೆದಿದೆ. ಪಡುಬಿದ್ರಿಯ ದೀನ್ ಸ್ಟ್ರೀಟ್ ನಲ್ಲಿರುವ ಅಪ್ತಾಬ್ ಮಂಜಿಲ್ ಹೆಸರಿನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಹೊಂಚು ಹಾಕಿ ಬಾಗಿಲಿನ ಬೀಗ ಮುರಿದು ಒಳಗೆ ಹೊಕ್ಕ ಕಳ್ಳರು ಕಬ್ಬಿಣದ ಕಪಾಟಿನಲ್ಲಿದ್ದ 3.5 ಪವನ್
ಮಂಗಳೂರು ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಬಿಇ ವಿದ್ಯಾರ್ಥಿನಿ ಹಾಗೂ ಎನ್‌ಸಿಸಿ ಪಿಒ ಕ್ಯಾಡೆಟ್ ಲಿಷಾ ಡಿ. ಸುವರ್ಣ ಅವರಿಗೆ ರಾಷ್ಟ್ರ ಮಟ್ಟದ ಅತ್ಯುನ್ನತ ಗೌರವವಾದ ರಕ್ಷಣಾ ಸಚಿವರ ಪ್ರಶಂಸಾ ಪ್ರಶಸ್ತಿ ಪ್ರದಾನವಾಗಿದೆ. ಎನ್‌ಸಿಸಿ ಸಂಘಟನೆಯಲ್ಲಿ ಅವರು ತೋರಿದ ಅಪೂರ್ವ ನಾಯಕತ್ವ, ಶಿಸ್ತು, ಸಮರ್ಪಣೆ ಮತ್ತು ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಈ ಪ್ರತಿಷ್ಠಿತ
ಉಡುಪಿ: ಕರ್ನಾಟಕ ಗಮಕ ಕಲಾ ಪರಿಷತ್ (ರಿ )ಬೆಂಗಳೂರು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ಧರ್ಮಸ್ಥಳ ದಿಂದ ಮಂಜೂರಾದ 20 ಸಾವಿರ ಮೊತ್ತದ ಮಂಜೂರಾತಿ ಪತ್ರವನ್ನು ಕರ್ನಾಟಕ ಗಮಕ ಸಂಘ ಕಲಾ ಪರಿಷತ್ತಿನ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು ಇವರಿಗೆತಾಲೂಕು ಯೋಜನಾಧಿಕಾರಿಗಳಾದ ಮಮತಾ ಶೆಟ್ಟಿ ಹಸ್ತಾಂತರ ಮಾಡಿದರು.
ಮೂಡುಬಿದಿರೆ : ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ (PET) ಕಯ್ಯಾರು ಪ್ರಭಾಕರ ರೈ ಅವರು (ಪ್ರಾಯ: 85 ವರ್ಷ) ಮಂಗಳವಾರ ನಿಧನರಾದರು. ಮೃತರು ಪತ್ನಿ ಹಾಗೂ ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್) ನ ಹಿರಿಯ ವ್ಯವಸ್ಥಾಪಕ ಮಧುಸೂಧನ ರೈ ಸಹಿತ ಈರ್ವರು ಪುತ್ರರನ್ನು ಅಗಲಿರುತ್ತಾರೆ.ಬೆಂಗಳೂರಿನ ಗುಜರಾತಿ ವಿದ್ಯಾಲಯದಲ್ಲಿ ಆರಂಭಿಕ ವೃತ್ತಿ ಜೀವನ ನಡೆಸಿದ ಇವರು ಮುಂದೆ ಬೆಳುವಾಯಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಸಮುದಾಯ
ಕೇಂದ್ರ ಸರಕಾರವು ದೇಶದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಭಾಧ್ಯತೆಗಳನ್ನು ನಾಶ ಮಾಡಲು, ಕಾರ್ಮಿಕ ಚಳುವಳಿಯನ್ನೇ ಹತ್ತಿಕ್ಕಲು ಹಾಗೂ ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡಲು ದೇಶದ ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೊರೇಟ್ ಪರವಾದ 4 ಸಂಹಿತೆಗಳನ್ನು ರೂಪಿಸಿ ತಕ್ಷಣದಿಂದಲೇ ಜಾರಿಯಾಗುವಂತೆ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದೆ.ಆದ್ದರಿಂದ ಇದು ಕೇವಲ ಲೇಬರ್ ಕೋಡ್ ಅಲ್ಲ ಬದಲಾಗಿ
ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಜಿತ್ ಪವಾರ್ ಸೇರಿದಂತೆ ಪಿಎಸ್ಒ ಜಾಧವ್, ಓರ್ವ ಸಹಾಯಕ, ಇಬ್ಬರು ಪೈಲೈಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಖಚಿತಪಡಿಸಿದೆ. ಮಹಾರಾಷ್ಟ್ರದಲ್ಲಿ ನಿಗದಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ
ಪಾವಂಜೆ : ಓಂ ಕ್ರಿಕೆಟರ್ಸ ಪಾವಂಜೆ ಇದರ ವಾರ್ಷಿಕ ಮಹಾಸಭೆಯು ಸುಕೇಶ್ ಪಾವಂಜೆ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ಗಣೇಶ್ ದೇವಾಡಿಗರವರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾಗಿ ಪ್ರಮೋದ್, ಕಾರ್ಯದರ್ಶಿಯಾಗಿ ವರುಣ್, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್, ತಂಡದ ಕಪ್ತಾನರಾಗಿ ಕಾರ್ತಿಕ್, ಉಪ ಕಪ್ತಾನರಾಗಿ ಪ್ರವೀಣ್ ರವರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಒಟ್ಟು 40 ಸದಸ್ಯರು ಈ ನೂತನ ಪದಾಧಿಕಾರಿಗಳ ಆಯ್ಕೆ
ಉಡುಪಿ: ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ 77ನೆಯ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ಸಾಯಿ ರಾಧಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಹರ್ ಎಸ್. ಶೆಟ್ಟಿಯವರು ಮಾತನಾಡಿ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಅನೇಕ ಮಹಾನ್ ನಾಯಕರ ತ್ಯಾಗದ ಫಲದಿಂದ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರು. ತಾನು
ಶ್ರೀ ಬಾಲಾಂಜನೇಯ ದೇವರ ವಿಡಿಯೋ ಸಹಿತ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ ಹಾಡಿನ ರೆಕಾರ್ಡಿಂಗ್ ಕಾರ್ಯವು 27-01-2026 ಮಧ್ಯಾಹ್ನ ಕ್ಯಾಡ್ ಸ್ಟೂಡಿಯೋದಲ್ಲಿ ನಡೆಯಿತು. ಈ ಸಂದರ್ಭ ಗಾಯಕರಾದ ರವೀಂದ್ರ ಪ್ರಭು ಇವರೊಂದಿಗೆ ಗೀತೆ ರಚನೆಕಾರ ಯಶವಂತ ಬೋಳೂರು ಹಾಗು ದೇವಸ್ಥಾನದ ಅಧ್ಯಕ್ಷರಾದ ರಂಜನ್ ಕಾಂಚನ್ ಉಪಸ್ಥಿತರಿದ್ದರು.




























