ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಹೇಮಾಂಶು ಪ್ರಕಾಶನ, ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸರಾದ ಡಾ. ವಾಮನ ನಂದಾವರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನಗರದ ತುಳು ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಯಿತು. ಆರದ ಎಣ್ಣೆ, ಮಾಸದ ಬತ್ತಿ, ಆರದ ದೀಪ ಎಂಬ ಹೆಸರಿನಲ್ಲಿ ನುಡಿನಮನ
ವಿಟ್ಲ: ಡ್ರೆಸ್ ಶಾಪ್‌ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ನವೀನ್ ಕುಂಪಲ ಮತ್ತು ಇತರ ಮೂರು ಜನ ಏಕಾಏಕಿ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ ಮತ್ತು ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಡೆದಿದೆ. ಮಾರ್ಚ್ ೧೮ ರ ಮಧ್ಯಾಹ್ನ ವೇಳೆ ಏಕಾಏಕಿ ಅಂಗಡಿಗೆ ಅಕ್ರಮ ಪ್ರವೇಶ ಮಾಡಿದ ನಾಲ್ಕು ಜನರ ತಂಡ ಅಂಗಡಿಯಲ್ಲಿರುವ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತನ್ನ ಬ್ಯಾಗಿನೊಳಗೆ ತುಂಬಿಸಿ ಕೊಂಡೋಯ್ಯಲು
ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಕರಿಯರ್ ಗೈಡೆನ್ಸ್ ಸೆಲ್ ಮತ್ತು ಐಕ್ಯುಎಸಿ ವತಿಯಿಂದ ವಿಜ್ಞಾನ ಸಂಘ ಮತ್ತು ನೇಚರ್ ಕ್ಲಬ್ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ಶಿಕ್ಷಣ ಮಾಹಿತಿ ಕಾರ್ಯಕ್ರಮವು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಟಾಟಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಇಲ್ಲಿನ ಮ್ಯಾನೇಜರ್ ಪೂರ್ಣಚಂದ್ರ ಬಿ ಪಿ ಯವರು ಮಾತನಾಡಿ ಟಾಟಾ ಎಜುಕೇಶನ್ ಟ್ರಸ್ಟ್ ನ ಮೂಲಕ ಸ್ಕಿಲ್ ಇಂಡಿಯಾ ಯೋಜನೆಯಂತೆ ವಿಜ್ಞಾನ ಪದವಿ ಮತ್ತು ಬಿಸಿಎ ಪದವಿ
ಮಂಗಳೂರು ಸಿಸಿಬಿ ಪೊಲೀಸರು ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಬೇಧಿಸಿರುವುದು ಪೊಲೀಸ್ ಇಲಾಖೆಯ ಬಗ್ಗೆ ಜಿಲ್ಲೆಯ ನಾಗರಿಕರು ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ವಿಧಾನ ಪರಿಷತ್ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಜಾಲದ ಕಬಂಧಬಾಹುಗಳಲ್ಲಿ ಬಂಧಿಯಾಗಿದ್ದು ಜನಸಾಮಾನ್ಯರು ಆತಂಕ ಪಡುವಂತಹ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಈ ಜಾಲದ ಬೆನ್ನುಬಿದ್ದ ಪೊಲೀಸರು ಅಂದಾಜು 75 ಕೋಟಿ
ಬೆಳ್ಳಾರೆ:ಶ್ರೀ ಕ್ಷೇತ್ರ ಧರ್ಮಸ್ಥಳ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಬೆಳ್ಳಾರೆ ಹಿಂದೂ ರುದ್ರ ಭೂಮಿ ಗೆ 1, 51,680/ ರೂಪಾಯಿ ಯ ಮೌಲ್ಯ ದ ಸಿಲಿಕಾನ್ ಚೆಂಬರ್ ನ ಮಂಜೂರಾತಿ ಪತ್ರ ವನ್ನು ತಾಲೂಕಿನ ಯೋಜನಾಧಿಕಾರಿಗಳು ಮಾದವ ಗೌಡ ರವರು ಪಂಚಾಯತ್ ಅಧ್ಯಕ್ಷರು ನಮಿತಾ /ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರು ಚಂದ್ರಶೇಖರ್ ಪನ್ನೆ,ವಲಯ ಅಧ್ಯಕ್ಷರು ವೇಧಾ ಯಲ್ ಯಚ್ ಶೆಟ್ಟಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ರೈತರಿಗೆ ಸಂಕಷ್ಟ ಉಂಟಾಗಿರುವ ವಿಚಾರ ಹಾಗೂ ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ತೋಟಗಾರಿಕಾ ಸಚಿವರಾದ ಶ್ರೀ ಎಸ್ ಎಸ್
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಾಟೆ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಹೆಮ್ಮಾಡಿ ಹೇಮಾಪುರ ಮಠದ ಸಮಿಪ ಅದೆ ಮಾರ್ಗದಲ್ಲಿಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದು ಕೊಂಡ ಸ್ಕೂಟಿ ಪಲ್ಟಿಯಾಗಿ ಹೆದ್ದಾರಿ ಬದಿಯಲ್ಲಿ ನಿಂತು ಕೊಂಡಿದ್ದ ಲಾರಿ ಅಡಿಗೆ ಸಿಲುಕಿದ ಘಟನೆ ನಡೆದಿದೆ. ಅಪಘಾತದಲ್ಲಿ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಸಹಿತ ಮಕ್ಕಳಿಬ್ಬರಿಗೆ ಗಾಯವಾಗಿದ್ದು ಪಾರಾಗಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್. ಕೋಡಿ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ದಿನಾಂಕ 15 .03.2025 ರಂದು ಪದ್ಮಾವತಿ ಲಾನ್ ಎಸ್ ಕೋಡಿ, ತೋಕೂರು ಇಲ್ಲಿ ನೆರವೇರಿಸಲಾಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗೋವಿಂದ ದಾಸ್ ಪದವಿಪೂರ್ವ ಕಾಲೇಜು ಸುರತ್ಕಲ್ ಇಲ್ಲಿನ ಉಪನ್ಯಾಸಕರಾದ ಶ್ರೀಮತಿ ಪಲ್ಲವಿ ರಾಜೇಶ್ ರವರು ದೀಪ ಪ್ರಜ್ವಲನೆಗೊಳಿಸಿ ನೆರವೇರಿಸಿದರು. “ಸಮಾಜದಲ್ಲಿ
ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ (81) ಅವರು ಮಾ.15ರ ಶನಿವಾರ ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಹೆಸರಾಂತ ಜಾನಪದ ವಿದ್ವಾಂಸರಾಗಿದ್ದರು. ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು, ಕಲಾವಿದರನ್ನು ರೂಪಿಸಿದ ಇವರು ಹಲವಾರು
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯ ಬಿ.ಸಿ.ಎ. ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಶ್ರೀರಾಮ್ ಇವರು 9ನೇ ರ್‍ಯಾಂಕ್ ಗಳಿಸಿರುತ್ತಾರೆ.ಇವರ ಸಾಧನೆಗೆ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಮತ್ತು ಸರ್ವ ಸದಸ್ಯರು, ಪ್ರಾಂಶುಪಾಲರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.




























