Home Archive by category Fresh News (Page 130)

ಮಂಗಳೂರು : ಚೀನಾದ ಹಾರ್ಬಿನ್‌ನಲ್ಲಿ ನಡೆಯಲಿರುವ ಏಷ್ಯಾನ್ ವಿಂಟರ್ ಗೇಮ್ಸ್-2025: ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾದ ಡೇನಿಯಲ್, ಡ್ಯಾಶಿಯಲ್

ಚೀನಾದ ಹಾರ್ಬಿನ್‌ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಏಷ್ಯನ್ ವಿಂಟರ್ ಗೇಮ್ಸ್ 2025ಕ್ಕೆ ಮಂಗಳೂರಿನ ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಟೀಮ್ ಇಂಡಿಯಾ-ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವವರು ಅನೇಕರಿದ್ದಾರೆ. ಅದೇ ಸಾಲಿಗೆ ಮಂಗಳೂರಿನ ಸಹೋದರ ಮತ್ತು

ಉಡುಪಿ: ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗತಿ

ಉಡುಪಿ ಜಿಲ್ಲೆಯ ಆರೋಪಿತ ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗಿದ್ದಾಳೆ. ಈ ಮೂಲಕ ಕರ್ನಾಟಕ ಮೂಲದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಲಕ್ಷ್ಮಿ ಸ್ವಇಚ್ಛೆಯಿಂದ ಶರಣಾಗಿದ್ದು ಆಕೆಯನ್ನು ’ ’ಎ’ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ನೀಡಲು ಜಿಲ್ಲಾಡಳಿತ ಶಿಫಾರಸು ಮಾಡಿದೆ. ಉಡುಪಿಯಲ್ಲಿ ಒಂದು ಅಪರೂಪದ ನಕ್ಸಲ್ ಶರಣಾಗತಿ ನಡೆಯಿತು. ಕಳೆದ ಒಂದು ದಶಕದಿಂದ ಮುಖ್ಯ ವಾಹಿನಿಯಲ್ಲಿ ಇದ್ದರೂ ಕರ್ನಾಟಕದಲ್ಲಿ ಕಾಣಿಸಿಕೊಳ್ಳದ ಉಡುಪಿ ಮೂಲದ ಲಕ್ಷ್ಮಿ ಜಿಲ್ಲಾಡಳಿತದ ಮುಂದೆ

ಕಾರ್ಕಳ: ಫೆ.6ರಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾರ್ಕಳ, ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಜನವಿರೋಧಿ ನೀತಿ ಖಂಡಿಸಿ ಫೆಬ್ರವರಿ 6 ರಂದು ತಾಲೂಕು ಕಚೇರಿ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ಸಭೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ಮಾಹಿತಿ ನೀಡಿದರು.  ಕಳೆದ ಎರಡು ವರ್ಷಗಳಲ್ಲಿ ಆಡಳಿತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಗ್ರಾಮೀಣ ಭಾಗದ ಜನರ ನಿತ್ಯ ಜೀವನಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಹಿಂದೂ ಕಾರ್ಯಕರ್ತರಿಗೆ

ಮಂಗಳೂರು: ಧರ್ಮ ಭಗಿನಿಯರು ಪುಸ್ತಕ ಬಿಡುಗಡೆ-ಮಹಿಳೆ ಮತ್ತು ಸನ್ಯಾಸ ವಿಚಾರ ಸಂಕಿರಣ

ಮಂಗಳೂರಿನ ಉರ್ವ ಸ್ಟೋರ್‌ನ ಕರಾವಳಿ ಲೇಖಕಿಯರ ವಾಚಕರ ಸಂಘದ ಹಾಲ್‌ನಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಸಹಯೋಗದೊಂದಿಗೆ ’ಧರ್ಮ ಭಗಿನಿಯರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಸನ್ಯಾಸ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಸಹ ನಡೆಯಿತು. ಜಗತ್ತಿನಲ್ಲಿ ಹಿಸ್ ಸ್ಟೋರಿ ಇದೆ, ಹರ್ ಸ್ಟೋರಿಯನ್ನು ನಾವೇ ಬರೆಯಬೇಕಾಗಿದೆ. ಹೆಣ್ಣುಮಕ್ಕಳನ್ನು ಅಡುಗೆ ಕೋಣೆ, ಹೆರಿಗೆ ಕೋಣೆಗೆ ಸೀಮಿತಗೊಳಿಸಿದ್ದ ಸಮಾಜದಲ್ಲಿ ನಮ್ಮದು ಹೋರಾಟದ,

ಕೇಂದ್ರದ ಬಜೆಟ್ -ಕರ್ನಾಟಕಕ್ಕೆ ಮತ್ತೆ ಮೋಸ, ಮತ್ತೊಮ್ಮೆ ಕರ್ನಾಟಕಕ್ಕೆ ಮಲತಾಯಿ ಧೋರಣೆ : ರಕ್ಷಿತ್ ಶಿವರಾಂ

ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮೋಸ, ಮತ್ತೊಮ್ಮೆ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು. ಸಾಲಮಾಡಿಯಾದ್ರು ತುಪ್ಪ ತಿನ್ನು ಎನ್ನುವಹಾಗೆ ಒಟ್ಟು ಬಜೆಟ್ ನಲ್ಲಿ 24% ರಷ್ಟು ಸಾಲ 15.68 ಲಕ್ಷ ಕೋಟಿ ಸಾಲ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ. ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿ 31.47 ಲಕ್ಷ ಮತ್ತು ಒಟ್ಟು ತೆರಿಗೆ

ಸುಬ್ರಹ್ಮಣ್ಯ: ಕುಕ್ಕೆ ದೇವಳಕ್ಕೆ ತಮಿಳು ಚಿತ್ರ ನಿರ್ದೇಶಕ ಅತ್ಲೇ ಭೇಟಿ, ಅನ್ನದಾನಕ್ಕೆ ದೇಣಿಗೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳುನಾಡಿನ ಖ್ಯಾತ ಚಿತ್ರ ನಿರ್ದೇಶಕ ಅತ್ಲೇ ಅವರು ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ತದನಂತರ ಶ್ರೀ ದೇವಳದ ಕಚೇರಿಯಲ್ಲಿ ಭಕ್ತಾದಿಗಳ ಅನ್ನದಾನಕ್ಕಾಗಿ ರೂಪಾಯಿ 10 ಲಕ್ಷದ ಬ್ಯಾಂಕ್ ಚೆಕ್ ಅನ್ನು ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಿರುವರು. ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅತ್ಲೇ ಅವರನ್ನು ಶಾಲು ಹೊಂದಿಸಿ ಸ್ಮರಣೆಗೆ

ಉಳ್ಳಾಲ: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ – ಮತ್ತೊಬ್ಬ ಆರೋಪಿಗೆ ಶೂಟೌಟ್

ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ ಎಂದು ಹೇಳಲಾದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ ಘಟ ನೆ ನಡೆದಿದೆ. ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ಧಾರಾವಿಯ ಮುರುಗಂಡಿ ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ಇಳಿಸಿದ್ದಾರೆ. ಕೋಟೆಕಾರು ಅಜ್ಜಿನಡ್ಕ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಪೊಲೀಸರು ಸ್ಥಳ ಮಹಜರು ನಡೆಸಲು ಆರೋಪಿ ಮುರುಗಂಡಿಯನ್ನು ಕೋಟೆಕಾರಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ

ಬಹುನಿರೀಕ್ಷಿತ “ಮಿಡಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಅದ್ಧೂರಿ ಬಿಡುಗಡೆ

ಮಂಗಳೂರು: ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲಂಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್. ಕುಂಪಲರವರ ನಿರ್ಮಾಣದಲ್ಲಿ ತಯಾರಾದ ‘ಮಿಡ್ಸ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಶುಕ್ರವಾರ ಭಾರತ್ ಮಾಲ್ ನಲ್ಲಿ ನಡೆದ ಅದ್ಧೂರಿ ಸಮಾರಂಭದ ಮೂಲಕ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ಪ್ರಾಸ್ತಾವಿಕ ಮಾತನ್ನಾಡಿದ ನಟ ವಿನೀತ್ ಕುಮಾರ್ ಅವರು, “ರಾಜ್

ಮಂಗಳೂರು:ಜನ್ಮಜಾತ ಹೃದಯದೋಷಕ್ಕೆ ಶಸ್ತ್ರಚಿಕಿತ್ಸೆಯಿಲ್ಲದೆ ಯಶಸ್ವಿ ಚಿಕಿತ್ಸೆ: ಎ.ಜೆ. ಆಸ್ಪತ್ರೆಯ ವಿಶೇಷ ಸಾಧನೆ

ಎ.ಜೆ. ಆಸ್ಪತ್ರೆಯಲ್ಲಿ ಹೊಸದಾಗಿ ಹುಟ್ಟಿದ ಶಿಶುವಿಗೆ ತೀವ್ರ ಪಲ್ಮೊನರಿ ಸ್ಟೆನೋಸಿಸ್ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು.ಲೋವರ್ಸೆಗ್ಮೆಂಟ್ಸಿಸೇರಿಯನ್ (ಐSಅS) ಮೂಲಕ ಜನಿಸಿದ ಶಿಶುವಿಗೆ, ಜನ್ಮಜಾತ ಹೃದಯದೋಷಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದ ಚಿಕಿತ್ಸೆಯಲ್ಲಿ ಪರಿಣತಿಯನ್ನು ಹೊಂದಿರುವ ಖ್ಯಾತ ಪೀಡಿಯಾಟ್ರಿಕ್ ಕಾರ್ಡಿಯೊಲಾಜಿಸ್ಟ್ ಪ್ರೇಮ್ ಆಳ್ವ ಅವರಿಂದ ವಿಶೇಷ ಬಲೂನ್ಪಲ್ಮೊನರಿ ವಾಲ್ವು ಲೋಪ್ಲಾಸ್ಟಿ (ಬಿಪಿವಿ) ಕಾರ್ಯವಿಧಾನವನ್ನು ಯಶಸ್ವಿಯಾಗಿ

ಬಡಿಲಗುತ್ತು ಡಾ| ಮನೋಹರ್ ನಾರಾಯಣ ಶೆಟ್ಟಿ ನಿಧನ

ಮುಂಬೈ ನಿವಾಸಿ ಬಡಿಲಗುತ್ತು ಡಾ| ಮನೋಹರ್ ನಾರಾಯಣ ಶೆಟ್ಟಿ ಅವರು ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು.ದಕ್ಷಿಣಕನ್ನಡ ಜಿಲ್ಲೆಯ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಬಡಿಲಗುತ್ತು ಮನೆತನದ ದಿ.ಸೀತಮ್ಮ ಶೆಟ್ಟಿ ಮತ್ತು ದಿ. ಪಾಶಾಣಮೊಗರು ನಾರಾಯಣ ಶೆಟ್ಟಿ ದಂಪತಿಗಳ ಪುತ್ರರಾಗಿರುವ ಇವರು ಹಲವು ವರ್ಷಗಳಿಂದ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.ಮೃತರು ಇಬ್ಬರು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.