Home Archive by category Fresh News (Page 149)

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಕ್ತದಾನ ಶಿಬಿರ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಹಾಗೂ ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿ ಮತ್ತು ವಿದ್ಯಾಲಕ್ಷೀ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಿದರು. ರಕ್ತದಾನ ಶಿಬಿರದಲ್ಲಿ

ಮಂಜೇಶ್ವರ: ಕುಖ್ಯಾತ ಕಳ್ಳರ ತಂಡದ ಸೆರೆ: ಠಾಣಾಧಿಕಾರಿ ಇ ಅನೂಪ್ ನೇತೃತ್ವದಲ್ಲಿ ಕಾರ್ಯಾಚರಣೆ

ಮಂಜೇಶ್ವರ : ಮಂಜೇಶ್ವರ ಠಾಣಾಧಿಕಾರಿ ಇ ಅನೂಪ್ ರವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾನುವಾರ ಮುಂಜಾನೆ ಮಜೀರ್ಪಳ್ಳದಲ್ಲಿ ಕುಖ್ಯಾತ ಕಳ್ಳರ ತಂಡವೊಂದನ್ನು ಸೆರೆ ಹಿಡಿಯಲಾಗಿದೆ. ಪೆಟ್ರೋಲಿಂಗ್ ನಡೆಸುತ್ತಿರುವ ಮಧ್ಯೆ ಕಾರೊಂದನ್ನು ತಡೆದು ತಪಾಸಣೆ ನಡೆಸುತ್ತಿರುವ ಮಧ್ಯೆ ಕಳ್ಳರ ತಂಡ ಸೆರೆಯಾಗಿದೆ.ಉಳ್ಳಾಲದ ಫೈಸಲ್, ತುಮಕೂರಿನ ಸಯ್ಯದ್ ಅಮಾನ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಇವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪರಾರಿಯಾದವರಿಗೆ ಶೋಧ

ಮುಲ್ಕಿ: ಪತ್ನಿ, ಮಗುವನ್ನು ಹತ್ಯೆಗೈದು ಪತಿ ಆತ್ಮಹತ್ಯೆ

ಮುಲ್ಕಿ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಬಹು‌ಮಹಡಿ ಕಟ್ಟಡದಲ್ಲಿ ವಾಸವಿದ್ಧ ವ್ಯಕ್ತಿನೋರ್ವ ಪತ್ನಿ.ಮಗುವನ್ನು ಹತ್ಯೆಗೈದು ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಡಿದ್ದಾನೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಕ್ಷಿಕೆರೆ ಸ್ಧಳೀಯ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದೆ.ಪತ್ನಿ ಪ್ರಿಯಾಂಕ (28) ಮಗು ಹೃದಯ್ (4) ಹತ್ಯೆಗೀಡಾದ ದುದೈರ್ವಿಗಳು ಎಂದು ತಿಳಿದು ಬಂದಿದೆ.ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ.

‘ಚಿಕ್ಕಮ್ಮ’ನ ಸರ ಪಡೆದು ನಾಪತ್ತೆಯಾಗಿದ್ದವ ಮೂಡುಬಿದಿರೆ ಪೊಲೀಸರ ವಶಕ್ಕೆ

ಮೂಡುಬಿದಿರೆ: ಕಳೆದ ಮೂರು ತಿಂಗಳ ಹಿಂದೆ ಅಶ್ವತ್ಥಪುರದಲ್ಲಿರುವ ತನ್ನ ಮಗಳ ಮನೆಗೆ ಹೋಗಲೆಂದು ನಾರಾವಿಯಿಂದ ಬಂದಿದ್ದ ಮಹಿಳೆಯೋರ್ವರೊಂದಿಗೆ ಪರಿಚಿತನಂತೆ ನಟಿಸಿ ಆಕೆಯ ಕೈಯಿಂದ ಚಿನ್ನದ ಸರ ಕೊಂಡೊಯ್ದು ವಾಪಾಸು ಬಾರದೆ ತಪ್ಪಿಸಿಕೊಂಡಿದ್ದ ಕಳ್ಳನನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವ ಪೊಲೀಸರ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಟ್ವಾಳ ತಾಲೂಕು ಕೆಂಪುಗುಡ್ಡೆಯ ಕಸವಿತ್ತಲ್ ಮನೆಯ ನಿವಾಸಿ ಸುರೇಶ ಯಾನೆ ಸಂತೋಷ ಬಂಧಿತ ಆರೋಪಿ. ನಾರಾವಿಯಿಂದ

ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ಧರ್ಮಶ್ರೀ ರಿಲೀಫ್ ಫೌಂಡೇಶನ್ ಮಹಾರಾಷ್ಟ್ರ ಹಾಗೂ ಕರ್ನಾಟಕ ವತಿಯಿಂದ ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಧರ್ಮಶ್ರೀ ರಿಲೀಫ್ ಫೌಂಡೇಶನ್ ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಸ್ಥೆ ವತಿಯಿಂದ ಇಂದು ಬೈಂದೂರು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ತಂಗುದಾಣವನ್ನು ಕೊಂಕಣ ರೈಲ್ವೆಯ ತರಬೇತಿ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ಶ್ರೀಧರ ಅವಭ್ರತ್ ಹಾಗೂ ಸೀನಿಯರ್ ರೀಜನಲ್ ಟ್ರಾಫಿಕ್ ಮ್ಯಾನೇಜರ್ ದೀಪಕ್

ಮೂಡುಬಿದಿರೆ : 15 ನೇ ವರ್ಷದ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳಕ್ಕೆ ಅದ್ದೂರಿಯ ಚಾಲನೆ

ಮೂಡುಬಿದಿರೆ ತಾಲೂಕಿನ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ನಡೆಯುವ 15ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳಕ್ಕೆ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಶನಿವಾರ ಚಾಲನೆ ನೀಡಿದರು. ಕಂಬಳ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ್ ಎ. ಕೋಟ್ಯಾನ್ ಬಿಜೆಪಿ ದಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಅಧ್ಯಕ್ಷ ಸುದರ್ಶನ್ ಎಂ. ನಂದೊಟ್ಟು ಪಣಪಿಲ ಕಂಬಳ ಸಮಿತಿ ಅಧ್ಯಕ್ಷ, ಯವರಾಜ್ ಜೈನ್, ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್

ಬಿ.ಸಿ.ರೋಡಿನಲ್ಲಿ ಕನ್ನಡ ರಥಕ್ಕೆ ಸಂಭ್ರಮದ ಸ್ವಾಗತ

ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಈ ಕುರಿತು ಎಲ್ಲರೂ ಪಾಲ್ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಜ್ಯೋತಿ ರಥ ನಾಡಿನಾದ್ಯಂತ ಸಂಚರಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹೇಳಿದರು. ಬಿ.ಸಿ.ರೋಡಿನ ಮೇಲ್ಸೇತುವೆ ಬಳಿ ಕನ್ನಡ ಜ್ಯೋತಿ ರಥ ಶುಕ್ರವಾರ ಬೆಳಗ್ಗೆ ಆಗಮಿಸಿದ ಸಂದರ್ಭ, ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ,

ಉಡುಪಿ : ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ವೇಳೆ ತಲೆಕೆಳಗಾಗಿ ಬಿದ್ದ ಕ್ರೈನ್

ನಾಲ್ಕಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಗೊಂದಲದ ಗೂಡಾಗಿದೆ. ಇಲ್ಲಿನ ಏಕಮುಖ ಸಂಚಾರದಿಂದ ಜನರು ರೋಸಿ ಹೋಗಿದ್ದಾರೆ. ಸಾಕಷ್ಟು ಹೋರಾಟಗಳ ಬಳಿಕ ಇದೀಗ ಸೇತುವೆ ಕಾಮಗಾರಿ ಆಮೆ ಗತಿಯಲ್ಲಿ ಶುರುವಾಗಿದೆ. ಕಾಮಗಾರಿ ನಡೆಯುತ್ತಿರುವ ವೇಳೆ ಕ್ರೈನ್ ವೊಂದು ತಲೆಕೆಳಗಾಗಿ ಬಿದ್ದ ಘಟನೆ ನಡೆದಿದೆ. ಎಡಮಗ್ಗಲಿನ ಎತ್ತರದ ರಸ್ತೆಯಿಂದ ಬಲ ಮಗ್ಗುಲಿನಲ್ಲಿರುವ ತಗ್ಗು ರಸ್ತೆಗೆ, ಈ ಕ್ರೈನ್ ಬಿದ್ದಿದ್ದರೆ ಭಾರಿ ಅಪಾಯ

ಪುತ್ತೂರು : ಬಿಂದು ಪ್ಯಾಕ್ಟರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಭೇಟಿ

ಪುತ್ತೂರಿನ ಪ್ರತಿಷ್ಠಿತ ಬಿಂದು ಫ್ಯಾಕ್ಟರಿಗೆ ನೂತನ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಬಿಜೆಪಿ ಮಹಾ ಸದಸ್ಯತ್ವ ಅಭಿಯಾನದ ಅಂಗವಾಗಿ ಭೇಟಿ ನೀಡಿದರು. ಅವರನ್ನು ಸಂಸ್ಥೆಯ ಪ್ರಮುಖರಾದ ಸುಧನ್ವ ಆಚಾರ್ಯ ಸ್ವಾಗತಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಕುಮಾರ್, ಜಾಗತಿಕ ಮಟ್ಟದಲ್ಲಿ ಬಿಜೆಪಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ರಾಷ್ಟ್ರೀಯತೆಯ ಚಿಂತನೆಯಲ್ಲಿ ಬೀಜಾಂಕುರವಾದ ಪಕ್ಷ ಇಂದು ದೇಶದ ಜನ ಮಾನಸದಲ್ಲಿ ಆಳವಾಗಿ

ಮಂಗಳೂರು :ಮನಪಾ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ

ಮಂಗಳೂರು ಮಹಾನಗರ ಪಾಲಿಕೆ ನಾಲ್ಕು ಸ್ಥಾಯೀ ಸಮಿತಿಗಳ ಅಧ್ಯಕ್ಷರ ಚುನಾವಣೆವು ನಗರದ ಪಾಲಿಕೆ ಕಚೇರಿಯಲ್ಲಿ ನಡೆಯಿತು. ಪಟ್ಟಣ ಯೋಜನೆ ಹಾಗೂಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವೀಣಾ ಮಂಗಳ, ತೆರಿಗೆ ನಿರ್ಧರಣೆ , ಹಣಕಾಸು ಹಾಗೂ ಅಪೀಲು ಸ್ಥಾಯಿ‌ ಸಮಿತಿ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಕದ್ರಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಮಿತ್ರ, ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶರಿತಾ ಶಶಿಧರ್ ಅವರನ್ನು