ಮಂಗಳೂರು: “ಸುಮಾರು 5 ವರ್ಷಗಳ ಹಿಂದೆ ಸ್ಥಾಪಿಸಿರುವ ಅಸ್ತ್ರ ಅನ್ನುವ ಸಂಸ್ಥೆಯು ಇಂದು ಉದ್ಯಮದ ಜೊತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಕ್ರಿಕೆಟ್, ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಸಂಸ್ಥೆಯ ಲಾಭದ ಒಂದಂಶವನ್ನು ಸಮಾಜ ಸೇವೆಗಾಗಿ ಬಳಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯು 5ನೇ ವರ್ಷ ಪೂರೈಸಿರುವ
ಮಂಗಳೂರು: ಲಾಟರಿ, ಬೆಟ್ಟಿಂಗ್, ಮಟ್ಕಾ ಮುಂತಾದ ಅನಧಿದಿಕೃತ ಚಟುವಟಿಕೆಗಳನ್ನು ತಡೆಗಟ್ಟಲು ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ಯಾಡ್ ತಂಡವು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ತಡೆಗಟ್ಟಲು ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲಾಟರಿ ಹಾವಳಿಯನ್ನು ನಿಯಂತ್ರಣ ಸಂಬಂಧ ಫ್ಲೈಯಿಂಗ್ ಸ್ಕ್ಯಾಡ್ ತ್ರೈಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ತಪಾಸಣಾ ತಂಡಗಳು ಮುತುವರ್ಜಿಯಿಂದ ಕೆಲಸ
ಮೂಡುಬಿದಿರೆ : ‘ಜಯ-ವಿಜಯ’ ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯುವ 15ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳವು ನ. 9ರಂದು ಶನಿವಾರ ನಡೆಯಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಂಬಳದ ಜಿಲ್ಲಾ ತೀರ್ಪುಗಾರರ ಸಂಚಾಲಕ ವಿಜಯ್ ಕುಮಾರ್ ಜೈನ್ ಕಂಗಿನಮನೆ ಮಾತನಾಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ಜೂನಿಯರ್
ಮಂಗಳೂರು: ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿದ್ದಾರೆ.ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟೀ ಕಾರ್ಯಾಚರಣೆ ನಡೆಸಿ ಗುರುಪುರ ಅಡ್ಡೂರು ಸಮೀಪ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ 9 ದೋಣಿಗಳನ್ನು ವಶಪಡಿಸಲಾಯಿತು.ಇದಲ್ಲದೆ, ಅಕ್ರಮ ಮರಳುಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ 7 ದೋಣಿಗಳನ್ನು ನೀರಿನ
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ನಿಮಿತ್ತ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಗುರುವಾರ ಮಂಗಳೂರು ನಗರಕ್ಕೆ ಆಗಮಿಸಿತು.ನಗರದ ಪುರಭವನ ಆವರಣಕ್ಕೆ ಕನ್ನಡ ರಥ ಆಗಮಿಸಿದಾಗ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅತಿದೊಡ್ಡ ನುಡಿಹಬ್ಬವಾಗಿದೆ. ಶ್ರೀಮಂತ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಸಾಹಿತ್ಯ
ಕುಡಿತದ ನಶೆಯಲ್ಲಿ ಕೇರಳ ಮೂಲದ ಯುವಕರಿಬ್ಬರು ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತ ನಡೆಸಿ ಅಂತಿಮವಾಗಿ ಪಡುಬಿದ್ರಿ ಪೊಲೀಸರ ಅಥಿತಿಯಾಗಿದ್ದಾರೆ. ಕೇರಳ ಮೂಲದ ದೀರಜ್ ಹಾಗೂ ಗೌತಮ್ ಎಂಬ ಇಬ್ಬರು ಯುವಕರು ಉಡುಪಿಗೆ ಬಂದು ತಿರುಗಾಟ ನಡೆಸಿ ಕಂಠಪೂರ್ತಿ ಕುಡಿದು ಮರಳಿ ಕೇರಳಕ್ಕೆ ಹೋಗಲು ಮುಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾಂಗಾಳದಲ್ಲಿ ಕಾರೊಂದಕ್ಕೆ ಡಿಕ್ಕಿಯಾಗಿ ನಿಲ್ಲಿಸದೆ ಮುಂದೋಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಹೆಜಮಾಡಿ
ಮೂಡುಬಿದಿರೆ: ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಇವರು ಕೊಡಮಾಡುವ 2023-24 ನೇ ಸಾಲಿನ ” ಶಿವರಾಮ ಕಾರಂತ ಪ್ರಶಸ್ತಿ-2024 ” ಪ್ರಶಸ್ತಿಗೆ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ಆಯ್ಕೆಯಾಗಿರುತ್ತದೆ. ಪ್ರಶಸ್ತಿಯನ್ನು ನ.10 ರಂದು ಕೋಟದ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ನಿರ್ದೇಶಕರು(ಪ್ರಭಾರ) ಸಾಯೀಶ ಚೌಟ ಮತ್ತು ಸದಸ್ಯರು ಮೇಘಾಲಯದ
ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸುವಿಚಾರ ಸಾಹಿತ್ಯ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಮಲೆನಾಡ ಗಾಂಧಿ ದಿ. ಗೋವಿಂದೇಗೌಡ ಸ್ಮರಣಾರ್ಥ ನೀಡುವ ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಸ. ಊ. ಹಿ ಪ್ರಾ ಶಾಲೆಕೋಲ್ಚಾರು ಇದರ ಶಾಲಾಭಿವ್ರದ್ದಿ ಸಮಿತಿ ಸದಸ್ಯರನ್ನು ಹಾಗೂ ಶಿಕ್ಷಕರನ್ನು ಕೋಲ್ಚಾರು ಶಾಲೆಯಲ್ಲಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಗಾಟಿಸಿ ಶಾಲಾ ಪೂರ್ವ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಸ್ಥಳೀಯ ಅಭಯ ಆಂಜನೇಯ ಗುಡಿ ದೇವಸ್ಥಾನದಲ್ಲಿ ಕಳವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಳ್ಳನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಧಾರವಾಡ ಮೂಲದ ವೀರಣ್ಣ ಗೌಡ (26ವ) ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ಆರೋಪಿ.ದೇಗುಲದ ಪಾರ್ಕಿಂಗ್ ಜಾಗದಲ್ಲಿ ಸುತ್ತಾಡುತ್ತಿದ್ದ ಈತನನ್ನು ಎಸ್.ಐ ಕಾರ್ತಿಕ್.ಕೆ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ. ಜಾಗವೊಂದರ ಬಳಿ
ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ನಮ್ಮೆಲ್ಲಾ ಕನ್ನಡಿಗರ ಮೇಲಿದೆ ಎಂದು ಜನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ಇವರು ಸುಳ್ಯ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹೋಬಳಿ ಘಟಕ ಹಾಗು ಸಂಧ್ಯಾರಶ್ಮಿ ಸಾಹಿತ್ಯ ಸಂಘ ನಡೆಸಿದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಸಂಧ್ಯಾರಶ್ಮಿ ಸಭಾಭವನದಲ್ಲಿ ಮಾತನಾಡಿದರು. ಕನ್ನಡ ಭಾಷೆ ರಾಜಾಶ್ರಯ ಇಲ್ಲದೇ




























