ಸುಳ್ಯ: ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮ

ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ನಮ್ಮೆಲ್ಲಾ ಕನ್ನಡಿಗರ ಮೇಲಿದೆ ಎಂದು ಜನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ಇವರು ಸುಳ್ಯ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹೋಬಳಿ ಘಟಕ ಹಾಗು ಸಂಧ್ಯಾರಶ್ಮಿ ಸಾಹಿತ್ಯ ಸಂಘ ನಡೆಸಿದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಸಂಧ್ಯಾರಶ್ಮಿ ಸಭಾಭವನದಲ್ಲಿ ಮಾತನಾಡಿದರು.

ಕನ್ನಡ ಭಾಷೆ ರಾಜಾಶ್ರಯ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಎಲ್ಲರು ಚಿಂತನೆ ನಡೆಸಬೇಕೆಂದು ಎಂದು ಕರೆ ಇತ್ತರು. ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಸಾಹಿತ್ಯ ಪರಿಷತ್ತು ಅದ್ಯಕ್ಢ ಚಂದ್ರಶೇಖರ್ ಪೇರಾಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಚಂದ್ರಾವತಿ ಬಡ್ಡಡ್ಕ ಇವರು ವಹಿಸಿದರು. ವೇದಿಕೆಯಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಇದರ ಗೌರವಾಧ್ಯಕ್ಷ ಡಾ.ರಂಗಯ್ಯ ಎಸ್ , ಕಸಾಪದ ಕೊಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ ಇವರು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀಮತಿ ಲೀಲಾ ದಾಮೋದರ ಸ್ವಾಗತಿಸಿ ಅಬ್ದುಲ್ಲಾ ಅರಂತೋಡು ವಂದಿಸಿದರು. ಕೆಆರ್ ಗೋಪಾಲಕ್ರಷ್ಣ ಇವರು ಕಾರ್ಯಕ್ರಮ ನಿರೂಪಿಸಿದರು. ತದನಂತರ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಲಾವಿದರಿಂದ ಸುಶ್ರಾವ್ಯವಾದ ಗೀತ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಶ್ರೀ ಸಿಏ ಗಣೇಶ್ ಭಟ್, ಕೇಶವ ಸಿಎ,ಪ್ರೊ. ದಾಮೋದರ ಗೌಡ, ಡಾ. ಪೂವಪ್ಪ ಕಣಿಯೂರು, ಕುಮಾರಸ್ವಾಮಿ ತೆಕ್ಕುಂಜ ಪ್ರಭಾಕರ ಕಿರಿಭಾಗ , ಹೇಮಾವತಿ ದೇಂಗೋಡಿ, ಗಿರಿಜಾ ಎಮ್ ವಿ, ತೇಜಸ್ವಿನಿ ಕಿರಣ್, ಚೇತನಾ ನೇಮಿರಾಜ್, ಸುಭಾಶ್, ಸಂಧ್ಯಾ ಮಂಡೇಕೊಲು ಮತ್ತು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.