ಬಂಟ್ವಾಳ: ಸ್ಮಾರ್ಟ್ ಗೈಸ್ ಕೈಕಂಬ, ಅಂಬೇಡ್ಕರ್ ಯುವವೇದಿಕೆ ಬಂಟ್ವಾಳ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಸಮಾಜಮುಖಿ, ಮಾನವತಾವಾದಿ ದಿ.ರಾಜ ಪಲ್ಲಮಜಲು ಅವರು ನಿಧನ ಹೊಂದಿ 3ನೇ ವರ್ಷದ ಸ್ಮರಣಾರ್ಥ, ನುಡಿನಮನ, ಪ್ರತಿಭಾ ಪುರಸ್ಕಾರ ಮತ್ತು ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎಸ್.ಜಿ.ಕೆ. ಟ್ರೋಫಿ 2024
ಬ್ಯಾಂಕಿನ 2023-24ನೇ ವರ್ಷದ ಸಿಬ್ಬಂದಿ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್ ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಸಮೀಕ್ಷೆಯು ಆಲ್ಡ್ರಿನ್ ಡಿಸೋಜ ಮತ್ತು ತಂಡದ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಂಗಳೂರು ಧರ್ಮಪ್ರಾಂತ್ಯದ ಮಾಜಿ ಪ್ರೊಕ್ಯುರೇಟರ್ ರೆ| ಫಾ| ಜಾನ್ ವಾಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಾ| ಜಾನ್
ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ ದಿನೇ ದಿನೇ ಕಗ್ಗಂಟಾಗಿ ಪರಿವರ್ತನೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಕೆಳಮಟ್ಟದ ಪೊಲೀಸ್ ಕಾನ್ಸ್ ಸ್ಟೇಬಲ್‌ಗಳ ಅಂತರ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವರ ಒಪ್ಪಿಗೆಯಿದ್ದರೂ ಇಲಾಖಾ ಮೇಲಾಧಿಕಾರಿಗಳು ಸಮ್ಮತಿ ಸೂಚಿಸದೇ ಪದೇ ಪದೇ ವಿಳಂಭ ನೀತಿ ಅನುಸರಿಸುತ್ತಿರುವುದು ಪೊಲೀಸರ ಗೋಳು ಕೇಳೋರ್‍ಯಾರು ಎಂಬಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಪೊಲೀಸ್ ಇಲಾಖೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲವೆನ್ನುವುದನ್ನೇ ಗುರಿಯಾಗಿಸಿಕೊಂಡು
ಎಂಜಿನಿಯರಿಂಗ ಪದವಿಯ ಕನಸು ಹೊತ್ತ ಆಸಕ್ತ ವಿದ್ಯಾರ್ಥಿಗಳಿಗೆ ನೇರವಾಗಿ 10ನೇ ತರಗತಿಯ ಅನಂತರ 3 ವರ್ಷಗಳ ಡಿಪ್ಲೋಮಾ ಪೂರೈಸಿ ಯಾವುದೇ ಪ್ರವೇಶ ಪರೀಕ್ಷೆಯ ಒತ್ತಡವಿಲ್ಲದೆ ಲ್ಯಾಟರಲ್ ಎಂಟ್ರಿ ಸೌಲಭ್ಯದೊಂದಿಗೆ ಆಯ್ಕೆಯ ಎಂಜಿನಿಯರಿಂಗ್ ಪದವಿಯ ದ್ವಿತೀಯ ವರ್ಷಕ್ಕೆ ಎಂಐಟಿ ಮಣಿಪಾಲದಲ್ಲಿ ನೇರ ಪ್ರವೇಶಕ್ಕೆ ಸಂಸ್ಥೆಯ ಮೂಲಕ ಸದಾವಕಾಶ ಕಲ್ಪಿಸಲಾಗಿದೆ. ಸಂಸ್ಥೆಯ ಲ್ಯಾಟರಲ್ ಎಂಟ್ರಿ ಆಸಕ್ತ ವಿದ್ಯಾರ್ಥಿಗಳಿಗೆ ಎಂಐಟಿ ಶುಲ್ಕದ ಒಟ್ಟು ಶುಲ್ಕದಲ್ಲಿ ಶೇ.75ರಷ್ಟು
ಬಹರೈನ್‌ನ ಕನ್ನಡ ಸಂಘವು ಕನ್ನಡ ಭವನದ ಸಭಾಂಗಣದಲ್ಲಿ ಜೂನ್ 14ರಂದು ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಸಂಜೆ ಮೂರು ಗಂಟೆಗೆ ಸರಿಯಾಗಿ ಮಂಗಳೂರಿನ ಪ್ರಸಿದ್ಧ ಕದ್ರಿ ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ಶನಿ ಪೂಜೆ ಹಾಗು ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಗಲಿದೆ. ಸಂಜೆ ಐದೂವರೆ ಘಂಟೆಗೆ ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ದಿಗ್ದರ್ಶನದಲ್ಲಿ ನಾಡಿನ ಖ್ಯಾತ ಅತಿಥಿ
ಮಂಗಳೂರು : ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಪರಿಹಾರದ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಮಾಡಿ ಚರ್ಚಿಸಿದರು. ಸುಳ್ಯ ತಾಲೂಕಿನ ತೊಡಿಕಾನದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ನೆಟ್‌ವರ್ಕ್
ಪುತ್ತೂರು: ಕಳೆದ ಎರಡು ದಿನಗಳಿಂದ ಬೆಳ್ಳಿಪ್ಪಾಡಿ ಗ್ರಾಮ ಮತ್ತು ಶಾಂತಿಗೋಡು ಗ್ರಾಮದ ನಡುವೆ ಸುತ್ತಾಡುತ್ತಿರುವ ಕಾಡಾನೆಗಳೆರಡು ಇದೀಗ ಶಾಂತಿಗೋಡು / ಚಿಕ್ಕಮುಡ್ನೂರು ಗ್ರಾಮದ ನಡುವೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಂತಿಗೋಡು ಗ್ರಾಮದ ಪಂಜಿಗದಲ್ಲಿ ಆನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಬೆಳ್ಳಿಪ್ಪಾಡಿ ಕೊಡಿಮರದಿಂದ ಹೊಳೆ ದಾಟಿದ ಆನೆ ಅಲ್ಲಿಂದ ಬೆದ್ರಾಳ ತೋಡು ಮೂಲಕ ಚಿಕ್ಕಮುಡ್ನೂರು ಗ್ರಾಮದ ಧನ್ಯ ಕುಮಾರ್ ಜೈನ್ ಎಣಿಮೊಗರು ಅವರ ತೋಟದಲ್ಲಿ ಹೋಗಿದೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಪೇಮಾ ಖಂಡು ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. ಪೇಮಾ ಖಂಡು ಅವರು ಅರುಣಾಚಲಕ್ಕೆ ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದರು.ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಕೆ.ಟಿ.ಪರ್ನಾಯಕ್ ಅವರು ಪ್ರಮಾಣವಚನ ಬೋದಿಸಿದರು. ಇವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಿಜೆಪಿ ಸತತ ಮೂರನೇ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, 60 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆದ್ದಿದೆ.
ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 49 ಭಾರತೀಯರು ಮೃತಪಟ್ಟಿದ್ದು, ಮೃತರಲ್ಲಿ ಹೆಚ್ಚಿನವರು ಕೇರಳದಿಂದ ಹೋದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಿಂದ ಹೋದ 14 ಜನರು ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ಹೇಳಿವೆ. ಮೃತದೇಹಗಳನ್ನು ಆದಷ್ಟು ಬೇಗ ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್
ನಂದಿಕೂರಿನಿಂದ ಇನ್ನ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶದ ಕೃಷಿ ಭೂಮಿಯ ಮೇಲಿಂದ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ 400 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ಪೀಡರ್ ಟವರ್ ಅಳವಡಿಕೆಯ ಯೋಜನೆಯ ಬಗ್ಗೆ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಇನ್ನ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ,ಹಲವು ತಿಂಗಳುಗಳಿಂದ ಉಡುಪಿ ಕಾಸರಗೋಡು 400 ಕೆ




























