Home Archive by category Fresh News (Page 636)

ಬೆಳ್ತಂಗಡಿಯ ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣ : ಆರೋಪಿಗಳ ಬಂಧನಕ್ಕೆ ಒತ್ತಾಯ

ಬೆಳ್ತಂಗಡಿ ತಾಲೂಕಿನ ಶಿಬಾಜೆ ಕುರುಂಜಿ ಗ್ರಾಮದ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಗೈದಿರುವ ಆರೋಪಿಗಳ ಮೇಲೆ ಕೊಲೆ, ದರೋಡೆ, ಹಲ್ಲೆ, ದಲಿತ ದೌರ್ಜನ್ಯ ದಾಖಲಾದರೂ ರಾಜಕೀಯ ಒತ್ತಡಕ್ಕೆ ಒಳಗಾದ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸದೆ ರಕ್ಷಣೆಗೆ ಮುಂದಾಗಿರುವ ಘಟನೆ ನಡೆದಿದೆ.

ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಜಾರಿಯಾಗಬೇಕು : ಆಟೋರಿಕ್ಷಾ ಚಾಲಕ ಮಾಲಕ ಸಂಘದ ವಿಷ್ಣುಮೂರ್ತಿ ಭಟ್ ಆಗ್ರಹ

ಮಂಗಳೂರು ನಗರ ಮತ್ತು ಗ್ರಾಮಾಂತರ ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಕೂಡಲೇ ಜಾರಿಯಾಗಬೇಕು. ರಿಕ್ಷಾ ಪಾರ್ಕ್‍ಗಳ ನೋಂದಾವಣಿಗೆ ವಿಳಂಬ ಮಾಡುತ್ತಿರುವುದು ಯಾಕೆ ಮತ್ತು ನಗರದೊಳಗೆ ಗ್ರಾಮಾಂತರ ರಿಕ್ಷಾಗಳ ಅಕ್ರಮ ಸಂಚಾರ ಮಾಡಿ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘಟಗಳ ಒಕ್ಕೂಟದ ಗೌರವಾಧ್ಯಕ್ಷರಾದ ವಿಷ್ಣುಮೂರ್ತಿ ಭಟ್ ಆಗ್ರಹಿಸಿದ್ದಾರೆ. ಅವರು ನಗರದ ಪ್ರೆಸ್‍ಕ್ಲಬ್‍ದಲ್ಲಿ

ಜಲೀಲ್ ಕುಟುಂಬಕ್ಕೆ ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಂದ ಸಾಂತ್ವನ.

ಮತಾಂಧ ಕ್ರಿಮಿನಲ್ ಗಳಿಂದ ಕೊಲೆಗೀಡಾದ ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಮಂಗಳೂರಿನ ನಾಗರಿಕ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿತು. ಕೊಲೆಗಡುಕರಿಗೆ ಶಿಕ್ಷೆ ನೀಡಲು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿತು. ಯಾರ ತಂಟೆತಕರಾರಿಗೂ ಹೋಗದ, ತನ್ನ ಪಾಡಿಗೆ ಬದುಕು ನಡೆಸುತ್ತಿದ್ದ ಜಲೀಲ್ ಹತ್ಯೆ ಮತಾಂಧ ಶಕ್ತಿಗಳಿಂದ ಕುರುಡು

ಮಂಜೇಶ್ವರದ ಮರ್ಸಿ ಅಮ್ಮನವರ ದೇವಾಲಯದಲ್ಲಿ ಕ್ರಿಸ್ಮಸ್ ಸಹಮಿಲನ

ಮಂಜೇಶ್ವರ : ಯೇಸು ಕ್ರಿಸ್ತರ ಬೋಧನೆಗಳಾದ ಪರಸ್ಪರ ಕ್ಷೇಮ ಪ್ರೀತಿ ಕರುಣೆ ದಯೆ ಸಹನೆ ಸೇವೆಯಿಂದ ಬಾಳುವ ಮೂಲಕ ಶಾಂತಿ ಸೌಹಾರ್ದತೆ ಬಂಧುತ್ವ ಸಮಾಜದಲ್ಲಿ ನೆಲೆಗೊಳ್ಳಲಿ. ಪ್ರಮುಖವಾಗಿ ಮನುಕುಲದಲ್ಲಿ ಮನುಷ್ಯತ್ವದಿಂದ ಜೀವಿಸುವುದೇ ಧರ್ಮವಾಗಿದೆ ಮಾತ್ರವಲ್ಲದೆ ಇದುವೇ ಕ್ರಿಸ್ಮಸ್ ಸಂದೇಶವಾಗಿದೆ ಎಂದು ಮಂಜೇಶ್ವರ ಮರ್ಸಿ ಅಮ್ಮನ ದೇವಾಲಯದ ಧರ್ಮಗುರು ಎಡ್ವಿನ್ ಪಿಂಟೋ ಹೇಳಿದರು. ಮಂಜೇಶ್ವರ ಮರ್ಸಿ ಅಮ್ಮನವರ ಚರ್ಚ್ ಅಂಗಣದಲ್ಲಿ ಆಯೋಜಿಸಲಾದ ಕ್ರಿಸ್ಮಸ್ ಹಬ್ಬದ ಸಹಮಿಲನ

ಮೂಡುಬಿದಿರೆಯಲ್ಲಿ 20 ಅಕ್ರಮ ಕಸಾಯಿಖಾನೆಗಳು….!!ಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಿಂಜಾವೇ ಎಚ್ಚರಿಕೆ

ಮೂಡುಬಿದಿರೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಅಕ್ರಮ ಕಸಾಯಿಖಾನೆಗಳಿದ್ದು, ಪೊಲೀಸರು ಈ ಅಕ್ರಮ ಕಸಾಯಿಖಾನೆಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರಗಿಸದೆ ಅಕ್ರಮ ಗೋವುಗಳ ಕಸಾಯಿಖಾನೆಯನ್ನು ನಡೆಸುವವರಿಗೆ ಸಹಕಾರವನ್ನು ನೀಡುತ್ತಿದ್ದು ಈ ಬಗ್ಗೆ ಉಗ್ರ ಹೋರಾಟವನ್ನು ಮಾಡುವುದಾಗಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಕೆ ನೀಡಿದ್ದಾರೆ. ಅವರು ಮೂಡುಬಿದಿರೆಯಲ್ಲಿ ನಿರಂತರವಾಗಿ ನಡೆಯುತ್ತಿರುವ

ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್-9 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ

ಕರಾವಳಿ ಕುವರ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್-9 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಸಿನಿಮಾ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೂಪೇಶ್ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಎಂಟ್ರಿಕೊಟ್ಟಿರುವುದು ಕರಾವಳಿಯಲ್ಲಿ ಭಾರೀ ಸಂತಸ ಮೂಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಈ ವಾರ ಮುಕ್ತಾಯಗೊಳ್ಳಲಿದೆ. ಸ್ಪರ್ಧಿಗಳು ಫಿನಾಲೆಯತ್ತ ಸಾಗುತ್ತಿದ್ದಾರೆ. ಪ್ರೇಕ್ಷಕರನ್ನು ಮೆಚ್ಚಿಸಲು ಮತ್ತು ಬಿಗ್ ಬಾಸ್ ಕನ್ನಡ 9 ಟ್ರೋಫಿಯನ್ನು

ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ : ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನ ಸಭೆಯು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ ಅವರು, “ಸಾಕಷ್ಟು ಅನುದಾನವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿದೆ. ರೂ.1500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಹಾಗೂ

ಹಿರಿಯ ಯಕ್ಷಗಾನ ಕಲಾವಿದ ಕಟ್ಟಣಿಗೆ ಸಂಜೀವ ಪ್ರಭು ನಿಧನ

ಮೂಡುಬಿದಿರೆ: ಹಿರಿಯ ಯಕ್ಷಗಾನ ಕಲಾವಿದ ಪ್ರಸಂಗಕರ್ತ ಇರುವೈಲು ಕಟ್ಟಣಿಗೆ ಸಂಜೀವ ಪ್ರಭು(83) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇರುವೈಲು ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿ, ಸೇವಾ ರೂಪದಲ್ಲಿ ಕಟೀಲು ಮತ್ತು ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇರುವೈಲು ಕ್ಷೇತ್ರ ಮಹಾತ್ಮೆ, ನಾಗಲಿಂಗೇಶ್ವರ ಮಹಿಮೆ, ರಕ್ತೇಶ್ವರಿ ಕಾರ್ಣಿಕ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಸಂಜೀವ ಪ್ರಭು ಅವರು ವೃತ್ತಿಯಲ್ಲಿ

ಜಾಂಬೂರಿಯಲ್ಲಿ ಜೀವನ್‍ರಾಂ ಸುಳ್ಯ ಅವರಿಂದ ರಂಗ ತರಬೇತಿ

ವಿದ್ಯಾಗಿರಿ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಕಾರ್ಯಕ್ರಮದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ಸಾರಥ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಶ್ರೀಲಂಕಾ , ಕೊರಿಯಾ, ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ರಂಗ ವ್ಯಾಯಾಮ, ಗೀತಾಭಿನಯ , ರಂಗ ಚಾಲನೆ ,

ಇರ್ವತ್ತೂರು ಕಲ್ಲಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ಟ್ರಸ್ಟ್ ಐದನೇ ವರ್ಷದ ಸಂಭ್ರಮ

ಬಂಟ್ವಾಳ: ಇರ್ವತ್ತೂರು ಕಲ್ಲಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ಯುವಕರ ಟ್ರಸ್ಟ್ ಇದರ ಐದನೇ ವರ್ಷದ ಸಂಭ್ರಮ ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು. ದೇವಳದ ತಂತ್ರಿ ಶ್ರೀಪಾದ ಪಾಂಗಣ್ಣಾಯ ನಡ್ವಂತಾಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಪ್ರಗತಿಯಲ್ಲಿ ಈ ಯುವಕರ ಸಂಘಟನೆಯು ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿ ಮಾತನಾಡಿ ಸಮಾಜದ