Home Archive by category Fresh News (Page 797)

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಮಣಿಪಾಲ, 8 ಜುಲೈ 2022: ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಇಂದು ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಗೆ ಚಾಲನೆ ನೀಡಲಾಯಿತು. ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕೆಎಂಸಿ, ಮಣಿಪಾಲದ ಡೀನ್ ಡಾ ಶರತ್ ಕೆ ರಾವ್ ಮತ್ತು ಕಸ್ತೂರ್ಬಾ

ಗಾಣಿಗ ಸಂಘ : ನೂತನ ಸಮಿತಿ ಆಯ್ಕೆ ; ಸನ್ಮಾನ

ಗಾಣಿಗ ಸಮುದಾಯ ಸೇವಾ ಸಂಘ ರಿ ಮಂಗಳೂರು.ಇದರ ದ್ವೈವಾರ್ಷಿಕ ಮಹಾಸಬೆಯು ತಾ 3.7.22ರ ರವಿವಾರ ಪದವು ಭಾರತಿ ಕಾಲೇಜ್ ನಲ್ಲಿ ನಡೆಯಿತು 2022- 2024ರ 2ವರ್ಷ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಕೆ ರಾಮ ಮು ಗ್ರೋಡಿ ಯವರ್ ಪುನರಾಯ್ಕೆ ಗೊಂಡರು ಉಪಾಧ್ಯಕ್ಷರಾಗಿ ಚಂದ್ರ ಆಡೂ ರು ಪ್ರದಾನ ಕಾರ್ಯದರ್ಶಿ ರವಿಚಂದ್ರ ಬಟ್ರ ಕುಮೇ ರ್ ಜೊತೆ ಕಾರ್ಯದರ್ಶಿ ಜ್ಯೋತಿ ಪಿ ಎಸ್ ಕೋಶಾಧಿಕಾರಿಯಾಗಿ ಅಶೋಕ್ ಹೊಸಬೆಟ್ಟು ಕ್ರೀಡಾ ಕಾರ್ಯದರ್ಶಿ

ಓಮಿನಿ ಕಾರಿನ ಮೇಲೆ ಸರಕು ಸಾಗಾಟದ ಲಾರಿ ಪಲ್ಟಿ ಸುರತ್ಕಲ್‍ನ ಕುಳಾಯಿಯಲ್ಲಿ ಘಟನೆ ಘಟನೆ

ಸುರತ್ಕಲ್‍ನ ಕುಳಾಯಿಯಲ್ಲಿ ಇಂದು ಮಧ್ಯಾಹ್ನ ಓಮಿನಿ ಮೇಲೆ ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓಮಿನಿ ಚಾಲಕನನ್ನ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮಿನಿ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಫೋಲಿಸರು ಆಗಮಿಸಿ ಸ್ಕ್ರೈನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮಿನಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೇರವಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಗೋಕುಲ ನಗರ ನಿವಾಸಿ ಲೋಕೇಶ್

ಉಳ್ಳಾಲದಲ್ಲಿ ಹಾನಿಗೊಳಗಾದ ಪ್ರದೇಶ ವೀಕ್ಷಿಸಿದ ಕಂದಾಯ ಸಚಿವರು : ಮಳೆಯಿಂದ ಸಂಪೂರ್ಣ ಹಾನಿಯಾದ ಮನೆಗೆ 5 ಲಕ್ಷ ರೂ. ಪರಿಹಾರ

ಉಳ್ಳಾಲ: ರಾಜ್ಯದ ಏಳು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಿದ್ದು, ಇಲ್ಲಿ ಸಂಪೂರ್ಣ ಹಾನಿಗೀಡಾದ ಮನೆಯವರಿಗೆ ತಕ್ಷಣ ರೂ. 5 ಲಕ್ಷ ಪರಿಹಾರ ನೀಡುವಂತೆ ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಅವರು ಕಡಲ್ಕೊರೆತಕ್ಕೀಡಾದ ಉಳ್ಳಾಲ ತಾಲೂಕಿನ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಹಾಗೂ ಮೊಗವೀರಪಟ್ನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಹಾಗೂ ಮೀನುಗಾರಿಕಾ ಸಚಿವರುಗಳ ಜೊತೆಗೆ ಭೇಟಿ

ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಅಡಿಯಲ್ಲಿ : ದ.ಕ. ಜಿಲ್ಲೆಯ 26 ಶಾಲೆಗಳಿಗೆ ಅನುದಾನದ ಚೆಕ್ ವಿತರಣೆ

ಸ್ವಾಮಿ ವಿವೇಕಾನಂದರು ಕಂಡಂತಹ ಭಾರತವನ್ನು ನಾವು ನಿರ್ಮಾಣ ಮಾಡುವತ್ತ ಮುಂದುವರಿಯಬೇಕಿದ್ದು ಪ್ರಸ್ತುತದ ದಿನಗಳು ದೇಶಾದ್ಯಂತ ಅದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಬೋಳಿಯಾರಿನ ಅಮರ್ ದೀಪ್ ಸಭಾಂಗಣದಲ್ಲಿ ಬೆಂಗಳೂರಿನ ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಸಾಂಸ್ಥಿಕ ಸಾಮಾಜಿಕ ಜವಬ್ದಾರಿ(ಸಮೈಸೂರುಆರ್ ) ಯಡಿಯಲ್ಲಿ ಚೇರ್

ಧರೆಗುರುಳಿದ ಆಲದ ಮರ ಹಣ್ಣಿನ ಅಂಗಡಿ ಜಖಂ

ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಡಸಮೇತ ಆಲದ ಧರೆಗುರುಳಿದ್ದು ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಜಖಂಗೊಂಡಿದೆ.ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕ್ಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬೀಸಿದ ಗಾಳಿಯ ರಭಸಕ್ಕೆ ಬುಡ ಸಮೇತ ಆಲದ ಮರದ ಬಿದ್ದಿದೆ .ಸ್ಥಳೀಯರಿಂದ ಮಿಂಚಿನ ಕಾರ್ಯಾಚರಣೆ ಮರದ ಗೆಲ್ಲುಗಳ ತೆರವಿಗೆ ಕಾರ್ಯಾರಂಭ,ಸಹಕಾರಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ತಾತ್ಕಾಲಿಕ ವ್ಯವಸ್ಥೆ ಸುಗಮ ವಾಹನ ಸಂಚಾರಕ್ಕಾಗಿ

ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ ನಿಧನ

ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯನವರು ನಿನ್ನೆ ರಾತ್ರಿ ಮಣಿಪಾಲ  ಕೆಎಂಸಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪಿ. ಡಿಕಯ್ಯನವರು, ತಮ್ಮ ಬಹು ಅಂಗಾಂಗಗಳನ್ನು ದಾನ ಮಾಡಿದ್ದಾರೆ.  ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಪದ್ಮುಂಜದಲ್ಲಿರುವ ಅವರ ನಿವಾಸದ ಬಳಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ

ಭೂಕಂಪನದಿಂದ ಹಾನಿಗೀಡಾದ ಮನೆಗೆ ಸಚಿವರ ಭೇಟಿ

ಕೆಲದಿನಗಳ ಹಿಂದೆ ಭೂಕಂಪನದಿಂದ ಹಾನಿಗೊಳಪಟ್ಟ ಸುಳ್ಯ ತಾಲೂಕಿನ ವಸಂತ ಭಟ್ ಅವರ ಮನೆಗೆ ಕಂದಾಯ ಸಚಿವರಾದ ಆರ್. ಅಶೋಕ್, ಇಂಧನ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಅವರು ಜು.7ರ ಗುರುವಾರ ಭೇಟಿ

ತುಂಬಿ ಹರಿಯುತ್ತಿರುವ ನೇತ್ರಾವತಿ: ಎಚ್ಚರ ವಹಿಸುವಂತೆ ನದಿಪಾತ್ರದ ಜನತೆಗೆ ಸೂಚನೆ

ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಗುರುವಾರ ಬೆಳಗ್ಗೆ ನದಿ ನೀರು 8 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.ಮೂರು ದಿನಗಳಿಂದ ನೀರಿನ ಮಟ್ಟ ಏರುತ್ತಲೇ ಸಾಗಿದ್ದು, ಇಂದು ಬೆಳಗ್ಗೆ 8 ಮೀಟರ್ ಗೆ ತಲುಪಿದೆ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇನ್ನೂ ನೀರಿನ ಮಟ್ಟ ಏರಿಕೆಯಾದರೆ ನದಿ ಪಾತ್ರದ ತಗ್ಗು ಪ್ರದೇಶಗಳು ಮುಳುಗಡೆಯಾಗಲಿದೆ. 8.5 ಮೀಟರ್ ಗೆ ತಲುಪಿದರೆ ನೆರೆ ಉಂಟಾಗಲಿದೆ.

ಮಂಗಳೂರು: ಕಾರ್ಮಿಕ ಅದಾಲತ್-2 ವಾಹನ ಜಾಥಾಕ್ಕೆ ಚಾಲನೆ

ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಸಲುವಾಗಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಮಿಕ ಅದಾಲತ್ ನಡೆಸಲಾಗುತ್ತಿದ್ದು, ಈ ಪ್ರಯುಕ್ತ ನಗರದ ಯೆಯ್ಯಾಡಿ ಶರ್ಬತ್ ಕಟ್ಟೆಯ ಸಮೀಪದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ “ಕಾರ್ಮಿಕ ಅದಾಲತ್-2 ವಾಹನ ಜಾಥಾಕ್ಕೆ ಚಾಲನೆ ಸಿಕ್ಕಿತ್ತು. ಸಹಾಯಕ ಕಾರ್ಮಿಕ ಆಯುಕ್ತರಾದ ಶಿವ ಕುಮಾರ್ ಚಾಲನೆ ನೀಡಿದರು. ತದಬಳಿಕ ಮಾತನಾಡಿದ ಅವರು, ಕಾರ್ಮಿಕ ಸಚಿವರ ಸೂಚನೆ ಮೇರೆಗೆ