Home Archive by category Fresh News (Page 895)

ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ವಿಖಾಯದಿಂದ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

ಗುರುಪುರ: ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ವಿಖಾಯ ವತಿಯಿಂದ ಬ್ರಹತ್ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಆದಿತ್ಯವಾರ ಗುರುಪುರ ಕೈಕಂಬ ಪ್ರೀಮಿಯರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಲಯ ಅಧ್ಯಕ್ಷರಾದ ಬಹು: ಜಮಲುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಬಹು:ಝುಬೈರ್ ಫೈಝಿ ಅಂಕೋಲಾ ದುಆ:

ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ರಕ್ಷಾ ಬಂಧನ ಆಚರಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್

ರಾಜ್ಯದ ಹಲವೆಡೆ ಇಂದು ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ಎಂದೇ ಖ್ಯಾತಿ ಪಡೆದಿರುವ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ರಕ್ಷಾ ಬಂಧನವು ನೂಲು ಹುಣ್ಣಿಮೆ ದಿನದಂದು ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ಅಣ್ಣ ತಂಗಿಗೆ ನೂಲಿನ ರೂಪದಲ್ಲಿ ದಾರ, ರಾಖಿ ಕಟ್ಟುವುದು ಸಂಪ್ರದಾಯ. ಆದರೆ ಮಾಜೀ ಗೃಹ ಸಚಿವರಾದ ಎಂ.ಬಿ ಪಾಟೀಲ್ ಈ ಬಾರಿ ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನ ಆಚರಿಸಿ ಗಮನಸೆಳೆದಿದ್ದಾರೆ. ಕೋಟಿ ವೃಕ್ಷ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿ ಆ ಮೂಲಕ ಪರಿಸರದ

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ: ಕುದ್ರೋಳಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಸಂಸದ ನಳಿನ್

ಸಮಾಜ ಸುಧಾರಕ ಬ್ರಹ್ಮ ಶ್ರೀ ನಾಯಾಯಣ ಗುರುಗಳ ಜಯಂತಿಯ ಪ್ರಯುಕ್ತ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ‌ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪಾಲಿಕೆ‌ ಸದಸ್ಯರಾದ ಜಯಶ್ರೀ ಕುಡ್ವ, ಸಂಧ್ಯಾ ಮೋಹನ್

ಪಡುಬಿದ್ರಿ ಸೇತುವೆ ಬಳಿ ಲಾರಿಯಡಿಗೆ ನುಸುಳಿದ ಬೈಕ್ ಸವಾರನಿಗೆ ಗಂಭೀರ ಗಾಯ

ಲಾರಿಯಡಿಗೆ ಬಿದ್ದ ಬೈಕ್ಕಿಂದ ಎಸೆಯಲ್ಪಟ್ಟ ಸವಾರ ಅದೃಷ್ಟವಶಾತ್ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆ ಸೇರಿದ್ದಾರೆ. ಗಂಭೀರ ಗಾಯಗೊಂಡ ವ್ಯಕ್ತಿ ಬೆಳ್ಮಣ್ ನಿವಾಸಿ ವಿಲ್ಸನ್(44)  ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಲಾತೂರಿಗೆ ಹೋಗುತ್ತಿದ್ದ ಲಾರಿಯಡಿಗೆ ಪಡುಬಿದ್ರಿ ಕಡೆಯಿಂದ ಅದಮಾರು ಪತ್ನಿ ಮನೆಕಡೆಗೆ ಹೋಗುತ್ತಿದ್ದ ಬೈಕ್ ಸವಾರನಿಗೆ ಪಡುಬಿದ್ರಿ ಸೇತುವೆ ಬಳಿ ಲಾರಿ ಡಿಕ್ಕಿಯಾಗಿದ್ದು, ಡಿಕ್ಕಿಯಾದ ರಭಸಕ್ಕೆ ಸವಾರ ಎಸೆಯಲ್ಪಟ್ಟಿದ್ದಾನೆ. ಲಾರಿಯಡಿಗೆ

ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು

ಕಾಪು: ಲಾರಿ ಚಾಲಕ ವಿಶ್ರಾಂತಿಗಾಗಿ ಮಣ್ಣರಸ್ತೆಯಲ್ಲಿ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಪು ಠಾಣಾ ವ್ಯಾಪ್ತಿಯ ಮೂಳೂರಿನಲ್ಲಿ ನಡೆದಿದೆ. ಬೆಳಗಾವಿಯಿಂದ ಕೇರಳಕ್ಕೆ ಸಕ್ಕರೆ ಹೇರಿಕೊಂಡು ಸಾಗುತ್ತಿದ್ದ ಲಾರಿ ಚಾಲಕ ಪಕ್ಕದ ಮರದಡಿ ಗಾಡಿ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಸವಾರ ತೊಕ್ಕೊಟ್ಟಿನ ನಿವಾಸಿ ದಿವಂಗತ

ಏಳೂರು ಮೊಗವೀರ ಮಹಾಸಭಾದ ವತಿಯಿಂದ ಹೆಜಮಾಡಿಯಲ್ಲಿ ಸಮುದ್ರ ಪೂಜೆ

ಏಳೂರು ಮೊಗವೀರ ಮಹಾ ಸಭಾದ ವತಿಯಿಂದ ಭಾನುವಾರ ಹೆಜಮಾಡಿಯ ಅಮಾಸೆ ಕರಿಯದಲ್ಲಿ ಸಮುದ್ರ ಪೂಜೆ ನೆರವೇರಿಸಿ, ಸಮುದ್ರ ದೇವತೆಗೆ ಹಾಲು, ತೆಂಗಿನಕಾಯಿ ಸಮರ್ಪಣೆ ನೆರವೇರಿಸಲಾಯಿತು. ಪಲಿಮಾರು, ಗುಂಡಿ, ಸಣ್ಣ ಗುಂಡಿ, ಹೆಜಮಾಡಿ, ಮಟ್ಟು, ಆಚೆಮಟ್ಟು ಹಾಗೂ ಕನ್ನಂಗಾರು ಸೇರಿ ಏಳು ಊರಿನ ಮೊಗವೀರ ಬಾಂಧವರು ಹಾಲು, ತೆಂಗಿನ ಕಾಯಿ, ಫಲವಸ್ತುಗಳನ್ನು ತಂದು ಸಮುದ್ರ ದೇವರಿಗೆ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಏಳೂರು ಮೊಗವೀರ ಮಹಾ ಸಭಾದ ಸದಸ್ಯ, ಹೆಜಮಾಡಿ ಗ್ರಾಪಂ ಮಾಜಿ

ವೀಕೆಂಡ್ ಕರ್ಫ್ಯೂ ಅನಗತ್ಯ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

 ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೂ, ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ವಿಧಿಸುತ್ತಿದ್ದಾರೆ. ಕೋವಿಡ್ ಕೇವಲ ಶನಿವಾರ ಮತ್ತು ರವಿವಾರ ಮಾತ್ರ ಬರುತ್ತದಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಈ ಕುರಿತು ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಹಾಕುವುದರಲ್ಲಿ ವಿಜಯಪುರ ನಗರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕೊರೊನಾ 3ನೇ ಅಲೆ ನಮ್ಮ ಮೇಲೆ ಹೆಚ್ಚಿಗೆ ಪರಿಣಾಮ

ವಿ4 ಸ್ಟ್ರೀಮ್‌ನಲ್ಲಿ ತೆರೆಕಂಡ ಟು ಆಂಡ್ ಮೀ ತುಳು ಸಿನಿಮಾಕ್ಕೆ ಪ್ರೇಕ್ಷಕರು ಫಿದಾ

ಟು ಆಂಡ್ ಮೀ ಹೆಸ್ರು ಹೇಳುವ ಹಾಗೆ ಇದೊಂದು ಡಿಫರೆಂಟ್ ಮೂವಿ… ಎಲ್.ಎಸ್. ಮೀಡಿಯಾ ಬ್ಯಾನರಡಿಯಲ್ಲಿ ಮೂಡಿ ಬಂದಿದೆ. ಸ್ವರಾಜ್ ಶೆಟ್ಟಿ ಬಹುಭಾಷಾ ಸಿನಿಮಾದಲ್ಲಿ ನಟಿಸಿದ್ದರೂ ಅವರ ಮೊದಲ ನಿರ್ದೇಶನದಲ್ಲಿ ತೆರೆಕಂಡ ಸಿನಿಮಾ ಇದಾಗಿದೆ. ಈಗಾಗಲೇ ವಿ4 ಸ್ಟ್ರೀಮ್‌ನ ಓಟಿಟಿಯಲ್ಲಿ ರಿಲೀಸ್ ಆಗಿರುವ ಟು ಆಂಡ್ ಮೀ ತುಳು ಮೂವಿಗೆ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ ಸಿಕ್ಕಿದೆ. ಇಬ್ಬರ ಹುಡುಗಿಯರ ನಡುವೆ ಒಬ್ಬ ಪ್ರೇಮಿ ಎನ್ನುವ ಕಥಾ ಹಂದರ ಹೊಂದಿರುವ ಚಿತ್ರವು ಬಹಳ

ಮಿತ್ರಪಟ್ಟಣ ಮೊಗವೀರ ಸಮಾಜದ ವತಿಯಿಂದ ಸಮುದ್ರ ಪೂಜೆ

ಮಂಗಳೂರು: ಮೀನುಗಾರಿಕಾ ಋತುವಿನ ಆರಂಭದಲ್ಲಿ ಸಮುದ್ರಪೂಜೆಯನ್ನು ಮಾಡುವ ಮೂಲಕ ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ ವತಿಯಿಂದ ಸಮುದ್ರ ಪೂಜಾ ಕಾರ್ಯಕ್ರಮ ನಡೆಯಿತು. ಸಮುದ್ರ ಪೂಜೆಯ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿಯವರು ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಈ ಸಂದರ್ಭದಲ್ಲಿ ಮಿತ್ರಪಟ್ಟಣ ಮೊಗವೀರ ಸಮಾಜದ ಅಧ್ಯಕ್ಷರಾದ ರವೀಂದ್ರ

ಹಿರಿಯ ಜನಪದ ಕಲಾವಿದ ಗುರುವ ಕೊರಗ ನಿಧನ

ಉಡುಪಿ: ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ (105) ನಿಧನರಾಗಿದ್ದಾರೆ. ಡೋಲು ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿರುವ ಶತಾಯುಷಿ ಡೋಲು  ಕಲಾವಿದ ಗುರುವ ಕೊರಗ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಗುರುವ ಕೊರಗ, ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ. ತಮ್ಮ 12ನೇ