Home Archive by category udupi

ಉಡುಪಿ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಸಭೆ

ಉಡುಪಿ ಜಿಲ್ಲಾ ಪಂಚಾಯತ್ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಮತ್ತು

ಬೈಂದೂರು : ತಾಲೂಕು ಆಡಳಿತ ಸೌಧ ವಿಶ್ವಕರ್ಮ ಜಯಂತಿ

ತಾಲೂಕು ಆಡಳಿತ ಸೌಧ ಬೈಂದೂರು, ತಾಲೂಕು ಪಂಚಾಯತ್ ಬೈಂದೂರು ವತಿಯಿಂದ ವಿಶ್ವಕರ್ಮ ಜಯಂತಿ‌ ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆಯಿತು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರ ಕಳಿ ಚಂದ್ರಯ್ಯ ಆಚಾರ್ಯ ವಿಶ್ವಕರ್ಮ ಜಯಂತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ವಿಶ್ವಕರ್ಮ ಜಯಂತಿಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಗುರುವಾದ, ದೇವಲೋಕ, ಸ್ವರ್ಗಲೋಕವನ್ನು ಹಾಗೂ ದೇವತೆಗಳಿಗೆ ವಾಹನಗಳನ್ನು

ಉಡುಪಿ : ನಗರ ಸಭೆಯಿಂದ ಬನ್ನಂಜೆ ವೃತ್ತದಲ್ಲಿ ಸುಂದರ ನಾರಾಯಣ ಗುರು ವೃತ್ತ ನಿರ್ಮಾಣಕ್ಕೆ ರಘುಪತಿ ಭಟ್ ಒತ್ತಾಯ

ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಉಡುಪಿ ಬನ್ನಂಜೆಯ ನಾರಾಯಣಗುರು ವೃತ್ತವನ್ನು ತೆರವುಗೊಳಿಸಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ನಾರಾಯಣ ಗುರು ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದ್ದು, ಇಲ್ಲಿದ್ದ ವೃತ್ತವನ್ನು ಪೊದೆಗಳಲ್ಲಿ ಬಿಸಾಡಿರುವುದು ಖಂಡನೀಯ. ಇದು ದಾರ್ಶನಿಕ ಮಹಾನ್ ಪುರುಷರಿಗೆ ಮಾಡಿದ ಮಹಾ ಅಪಮಾನವಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಶೇಷವಾಗಿ ಪ್ರಯತ್ನಿಸಿದ ಫಲವಾಗಿ ಬನ್ನಂಜೆ ವೃತ್ತಕ್ಕೆ

ಪುತ್ತೂರು: ನಗರದ ಆರ್ಯಾಪು ಗ್ರಾಮ ಪಂಚಾಯತ್ ನ ಪ್ರಾ.ಕೃ.ಪತ್ತಿನ ಸಹಕಾರ ಸಂಘಕ್ಕೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ ನಿಂದ ಪ್ರಶಸ್ತಿ ಪ್ರದಾನ

ಪುತ್ತೂರು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ .2024-25ನೇ ಸಾಲಿನ ಸಾಧನೆಗಾಗಿ ನೀಡಲ್ಪಡುವ ಪ್ರಶಸ್ತಿಯನ್ನು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು.ಸತತ ಏಳನೇ ಬಾರಿಗೆ ಪ್ರಶಸ್ತಿಗೆ ಭಾಜನರಾಗಿರುವ ಆರ್ಯಾಪು ಸಹಕಾರಿ ಸಂಘಕ್ಕ ಸಹಕಾರಿ ಸಂಘದ ಅಧ್ಯಕ್ಷ ಎಚ್‌. ಮಹಮ್ಮದ್ ಆಲಿ ಹಾಗೂ ಮುಖ್ಯ ಕಾರ್ಯ ನಿರ್ವಾಣಾಧಿಕಾರಿಗಳಾದ ಶ್ರೀಮತಿ ಜಯಂತಿ ಭಾಸ್ಕ‌ರ್ ರವರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ

ಉಡುಪಿ:ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ಕಾರ್ಯಕ್ರಮ

ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದು ಮತ್ತು ಸಾಗಾಣಿಕೆಗೆ ನಿರ್ಬಂಧ ಹೇರಿರುವ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ಅ ರಾ ಪ್ರಭಾಕರ ಪೂಜಾರಿ ಮುಂದಾಳತ್ವದಲ್ಲಿ ಇಂದು ಜಾಥಾ ಕಾರ್ಯಕ್ರಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ ಪೂಜಾರಿ ಜಾಥಾ ಕಾರ್ಯಕ್ರಮದಲ್ಲಿ

ಉಡುಪಿ: ಡಿಸ್ಟ್ರಿಕ್ಟ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ 23 ಅಥ್ಲೆಟಿಕ್ ಮೀಟ್ – 2025” ರ ಸಮಾರೋಪ ಸಮಾರಂಭ

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಉಡುಪಿ ಇಲ್ಲಿ ಉಡುಪಿ ಡಿಸ್ಟ್ರಿಕ್ಟ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ 23 ಅಥ್ಲೆಟಿಕ್ ಮೀಟ್ – 2025” ರ ಸಮಾರೋಪ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಉಡುಪಿ;ನಿಡಂಬೂರು ಯುವಕ ಮಂಡಲ ರಿ. ಕಡೆಕಾರು ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ನಿಡಂಬೂರು ಯುವಕ ಮಂಡಲ ರಿ. ಕಡೆಕಾರು ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಇಂದು ದಿನಾಂಕ 25-08-2025 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ

ಕಾಪು ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಜಯಂತಿ ಆಚರಣೆ

ಕಾಪು ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತದ ಪೂರ್ವ ಪ್ರಧಾನಮಂತ್ರಿ, “ಭಾರತದ ಆಧುನಿಕ ವಿಕಸನ ಶಿಲ್ಪಿ” ಎಂದು ಕರೆಯಲ್ಪಡುವ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ದಿಗ್ಗಜ ನಾಯಕ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟುಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, “ರಾಜೀವ್ ಗಾಂಧಿ ಅವರು ಭಾರತದ ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಗರಾಗಿದ್ದು,

ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಗೆ  ಗೋಲ್ಡ್ ಅವಾರ್ಡ್ 

ಉಡುಪಿ: ನಗರದ ಹೆಸರಾಂತ ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಕೀನ್ಯಾದ ಮಸೈಮಾರಾದಲ್ಲಿ ಸೆರೆಹಿಡಿದಿರುವ ಎರಡು ಚೀತಾಗಳು ತನ್ನ ಬೇಟೆಯನ್ನು ಬೆನ್ನು ಹತ್ತುವ “ಹಂಗರ್ ವರ್ಸಸ್ ಹೋಪ್” ಛಾಯಾಚಿತ್ರಕ್ಕೆ ಓರಾ ಡಿ ಫ್ರೇಮ್ ಸರ್ಕ್ಯುಟ್ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಕ್ಲಬ್ ಗೋಲ್ಡ್ ಅವಾರ್ಡ್ ಪಡೆದಿರುತ್ತಾರೆ. ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್. ಐ. ಎ. ಪಿ

ಬೈಂದೂರು: ಪೊಲೀಸ್‌ ಇಲಾಖೆಯ ಮಹತ್ವಕಾಂಕ್ಷೆಯ ದೃಷ್ಟಿ ಯೋಜನೆ ಉದ್ಘಾಟನೆ

ಉಡುಪಿ ಜಿಲ್ಲಾ ಪೊಲೀಸ್‌ ಹಾಗೂ ಆರಕ್ಷಕ ಠಾಣೆ ಬೈಂದೂರು ಇದರ ವತಿಯಿಂದ ಪೊಲೀಸ್‌ ಇಲಾಖೆಯ ಮಹತ್ವಕಾಂಕ್ಷೆಯ ದೃಷ್ಟಿ ಯೋಜನೆ ಉದ್ಘಾಟನೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠ ಹರಿರಾಂ ಶಂಕರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಯೇ ಪ್ರಥಮ ಬಾರಿಗೆ ದೃಷ್ಟಿ ಎಂಬ ವಿನೂತನ ಕ್ರಮ ಅಳವಡಿಸುತ್ತಿದ್ದೇವೆ. ದೃಷ್ಟಿ ಯೋಜನೆಯನ್ನು