Home Archive by category Uncategorized

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೆಲವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಹೊಸ ರಾಜ್ಯಪಾಲರುಗಳ ನೇಮಕದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ. ವಿ. ಆನಂದ ಬೋಸ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನದ ಜವಾಬುದಾರಿಯನ್ನು ತಮಿಳುನಾಡು

ಉತ್ತರ ಅಮೆರಿಕದ ದಕ್ಷಿಣದ ಹಣ್ಣು ಮೇಪಾಪ್

ಬಡಗಣ ಅಮೆರಿಕ ಖಂಡದ ತೆಂಕಣ ಭಾಗ ಮೂಲದ ಮೇಪಾಪ್ ಹಣ್ಣು, ಪ್ಯಾಶನ್ ಫ್ರುಟ್‌ಗಳಲ್ಲಿಯೇ ಅತಿ ಗಟ್ಟಿಯಾದುದಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗದ ಮೂಲದ್ದಾದರೂ ಇಂದು ಮೇಪಾಪ್ ಹಣ್ಣನ್ನು ಉಷ್ಣವಲಯದ ಸಾಕಷ್ಟು ಕಡೆ ಬೆಳೆಸುತ್ತಾರೆ. ಇದರ ಹೂವು ತುಂಬ ಆಕರ್ಷಕ; ನೀಲಿ ಕುಸುರಿಯ ಚಕ್ರದಂತೆ ಕಣ್ಸೆಳೆಯುತ್ತದೆ. ಮೊಟ್ಟೆ ಆಕಾರದ ಇದರ ಕಾಯಿ ಹಸಿರು ಇದ್ದು, ಹಣ್ಣಾದಾಗ ಹಳದಿ ಆಗುತ್ತದೆ. ತಿರುಳು ಸಿಹಿ ಹುಳಿ ಮಿಶ್ರಿತ ರುಚಿಯೊಡನೆ ತನ್ನದೇ ಪರಿಮಳ ಹೊಂದಿರುತ್ತದೆ.

ಎಂಸಿಸಿ ಬ್ಯಾಂಕ್, ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ರೂ. 10 ಕೋಟಿಯ ವ್ಯವಹಾರ ಗುರಿ ಸಾಧನೆಯ ಸಂಭ್ರಮಾಚರಣೆ

ಎo.ಸಿ.ಸಿ. ಬ್ಯಾಂಕಿನ ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಒಂದೇ ವರ್ಷದಲ್ಲಿ ರೂ.10 ಕೋಟಿ ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ ಮಹತ್ವದ ಸಾಧನೆಯನ್ನು ಶನಿವಾರ, 28ನೇ ಫೆಬ್ರವರಿ 2026 ರಂದು ಬೆಳ್ಮಣ್‌ಶಾಖೆಯಲ್ಲಿ ಸಂಭ್ರಮದಿAದ ಆಚರಿಸಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಪರಪ್ಪಾಡಿಯ ಅವರ್ ಲೇಡಿ ಆಫ್ ಪರ್ಪೆಚುಯಲ್ ಸುಕುರ್ ಚರ್ಚ್ನ

ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ ಕಲ್ಲಬೆಟ್ಟು ಶಾಲೆಯಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಮೂಡುಬಿದಿರೆ : ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಶ್ವ ವಿದ್ಯಾನಿಲಯ ದೇರಳಕಟ್ಟೆ ಇಲ್ಲಿನ ಮಕ್ಕಳ ದಂತ ಚಿಕಿತ್ಸಾ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ “ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ’ವು ಕಲ್ಲಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ವನಜಾಕ್ಷಿ ಎಜುಕೇಶನ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಕೆ. ಶ್ರೀಪತಿ ಭಟ್ ಶಿಬಿರವನ್ನು

ದುಬೈನಲ್ಲಿ ಸಡಗರದ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ

ದುಬೈ: ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಂಪಲ ಅವರು ತಮ್ಮ ಮಾತೃಶ್ರೀ ದಿವಂಗತ ಶ್ರೀಮತಿ ಕಮಲ ಅವರ ಸ್ಮರಣಾರ್ಥವಾಗಿ

“ಸಿತಾರ್ ರತ್ನ” ಕೊಚ್ಚಿಕಾರ್ ದೇವದಾಸ್ ಪೈ ಅವರ ಸಿತಾರ್ ವಾದನಕ್ಕೆ ಹೆಗ್ಗಡೆ ದಂಪತಿಯಿಂದ ಸುವರ್ಣಪದಕ ಗೌರವ

ಮಹಾಶಿವರಾತ್ರಿಯ ಪವಿತ್ರ ಪರ್ವದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ–ಸಂಗೀತಗಳ ಅಪೂರ್ವ ಸಂಯೋಗ ಸಾಕ್ಷಿಯಾಯಿತು. ಮಂಗಳೂರಿನ ಖ್ಯಾತ ಸಿತಾರ್ ವಾದಕ “ಸಿತಾರ್ ರತ್ನ” ಕೊಚ್ಚಿಕಾರ್ ದೇವದಾಸ್ ಪೈ ಅವರು ಶ್ರೀ ಮಂಜುನಾಥ ದೇವಸ್ಥಾನ ಸನ್ನಿಧಿಯಲ್ಲಿ ಭಕ್ತಿಭಾವಪೂರ್ಣ ಸಿತಾರ್ ವಾದನ ನೀಡಿದ್ದು, ಭಕ್ತರು ಹಾಗೂ ಸಂಗೀತಾಸಕ್ತರ ಮನಸೂರೆಗೊಂಡರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನಡೆದ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೈ ಅವರ

ಮೂಡುಬಿದಿರೆ : ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ : ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಜನವರಿ ಆವೃತ್ತಿಯಲ್ಲಿ ನಡೆದ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರೀತA ಬಸವರಾಜ್ ಪಟ್ಟಣಶೆಟ್ಟಿ (121), ದೀಕ್ಷಿತ್ ಕುಮಾರ್ (120), ಸುಜೀತ್ ರಾಘವೇಂದ್ರ ಎ (120), ಯಶವಂತ ರೆಡ್ಡಿ ಎಸ್ (111), ರುಜುಲಾ ಕೆ (110), ದಿಯಾ

ಬಿಯಾಂಡ್ ಬೆಂಗಳೂರು’ ಮಿಷನ್:ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ಗೆ 1.93 ಕೋಟಿ ರೂ. ಅನುದಾನ ಬಿಡುಗಡೆ

ಮಂಗಳೂರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ ವರ್ಕ್‌ಸ್ಪೇಸ್‌ಗೆ 1.93 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಬೆಂಗಳೂರಿನ ಆಚೆಗೆ ಉತ್ಕೃಷ್ಟ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರಿಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಸಚಿವ ಪ್ರಿಯಾಂಕ್

ಶ್ರೀಮಾಧವ ಮಂಗಲ ಪೂಜಾರ್ಯರ ಬ್ರಹತ್ ಕಂಚಿನ ಪುತ್ಥಳಿ ನಿರ್ಮಾಣದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ

ಉಚ್ಚಿಲ:ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರವಾದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬ್ರಹತ್ ಕಂಚಿನ ಪುತ್ಥಳಿಯನ್ನು ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಸಲುವಾಗಿ ರೂಪಿಸಿದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಶ್ರೀ

ಡಿ.29: ತುಳು ಭವನದಲ್ಲಿ ಕುಡ್ಲ ಚಿತ್ರ ದರ್ಶನ ಅನಾವರಣ

ಮಂಗಳೂರು: ಹಿರಿಯ ಪತ್ರಿಕಾ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರು ನಗರದ ಕಪ್ಪು ಬಿಳುಪು ಛಾಯಾಚಿತ್ರಗಳನ್ನು ಮಂಗಳೂರಿನ ತುಳು ಭವನದಲ್ಲಿ ಶಾಶ್ವತವಾಗಿ ಅಳವಡಿಸಲಾಗಿದ್ದು, ಛಾಯಾಚಿತ್ರಗಳ ಅನಾವರಣ ಕಾರ್ಯಕ್ರಮ ಡಿ.29ರ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕ ರುಪನ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ನೇರವೇರಿಸುವರು. ಛಾಯಾಚಿತ್ರಗಳನ್ನು ಅಳವಡಿಸಲಾಗಿರುವ ತುಳು ಭವನದ