ದೇವೇಂದ್ರ ಫಡ್ನವೀಸ್ ಅವರಿಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಬಿಜೆಪಿ ಹೈಕಮಾಂಡಿಗೆ ಮನವಿ
ಮಹಾರಾಷ್ಟದ ಹಾಲೀ ಉಪ ಮುಖ್ಯಮಂತ್ರಿ ಮಾಜೀ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜೀನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡುವಂತೆ ಬಿಜೆಪಿ ಹೈಕಮಾಂಡಿಗೆ ಮನವಿ ಮಾಡಿದ್ದಾರೆ.
ಶಿವಸೇನೆ ಮುರಿದು, ಇತರ ಪಕ್ಷಗಳ ಶಾಸಕರನ್ನು ಖರೀದಿಸಿ ಮಹಾರಾಷ್ಟದಲ್ಲಿ ಬಿಜೆಪಿಯು ಖರೀದಿ ಸರಕಾರ ರಚಿಸಿತ್ತು. ಮತದಾರರು ಅದನ್ನು ಅಕ್ರಮ ಎನ್ನುವಂತೆ ತೀರ್ಪು ನೀಡಿದ್ದಾರೆ. ಇನ್ನು ಒಂದು ವರುಷದಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯುವಾಗ ಬಿಜೆಪಿಗೆ ಇದು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ ಫಡ್ನವೀಸ್ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ 23 ಕಡೆ ಗೆದ್ದಿದ್ದ ಬಿಜೆಪಿ ಈ ಬಾರಿ 9 ಕಡೆ ಮಾತ್ರ ಗೆದ್ದಿದೆ. ಅವರ ಮೈತ್ರಿ ಕೂಟಗಳು ಬಹುತೇಕ ವಿಫಲವಾಗಿವೆ. ಹಾಗಾಗಿ ಫಡ್ನವೀಸ್ ರಾಜೀನಾಮೆಗೆ ಅವಕಾಶ ಕೇಳಿದ್ದಾರೆ.