ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಉಚಿತವಾಗಿ 5 ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ. ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕಿನ ಜಂಟಿ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯಡಿ ಯೋಜನೆ ಪಾಲುದಾರ ಬಂಧುಗಳಿಗೆ ಉಚಿತವಾಗಿ 5 ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಪತ್ತಿನ ಸಹಕಾರಿ ಸಂಘ ಕೊಳ್ತಿಗೆ ಇಲ್ಲಿನ ಅಧ್ಯಕ್ಷರಾದ ತೀರ್ಥಾನಂದ ದುಗ್ಗಳ ಇವರು ನೆರವೇರಿಸಿ ಮಹಿಳೆಯರನ್ನು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಯೋಜನೆಯ ತಂದಂತಹ ಈ ಕಾರ್ಯಕ್ರಮವು ಬಹಳ ವಿಶೇಷವಾದದ್ದು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಮಹಿಳೆಯರು ಸದೃಢರಾಗಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಸರ್ ಇವರು ಮಾತನಾಡುತ್ತ ಯೋಜನೆಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಪೂರಕವಾಗಿರುವಂತಹದ್ದು ಉದ್ಯೋಗವು ಒಂದು ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾದದ್ದು ಮಹಿಳೆಯರು ಸಹ ಉದ್ಯೋಗವನ್ನು ಮಾಡಿ ಕುಟುಂಬಕ್ಕೆ ಬಲವನ್ನು ತರುವಂತೆ ಕೆಲಸವನ್ನು ಮಾಡುತ್ತಿದ್ದಾರೆ ಸಿಕ್ಕಂತಹ ಈ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿ ಸ್ವಾವಲಂಬಿಯಾಗಿ ಬದುಕಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ CRE ತರಬೇತಿ ಸಂಸ್ಥೆ ಬೆಳ್ತಂಗಡಿ ಇಲ್ಲಿನ ಉಪನ್ಯಾಸಕರಾದ ಧರಣಿ ಮೇಡಂ ಇವರು ಮಾತನಾಡುತ್ತಾ ಉದ್ಯೋಗಂ ಮಾನವ ಲಕ್ಷಣಂ ಎಂಬಂತೆ ಪೂಜ್ಯ ಖಾವಂದರ ಹಾಗೂ ಮಾತ್ರ ಶ್ರೀ ಅಮ್ಮನವರ ಮೂಲ ಪರಿಕಲ್ಪನೆಯಿಂದ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಹಲವಾರು ಉದ್ಯೋಗ ತರಬೇತಿಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ . ಅದರಂತೆ ಈ ತರಬೇತಿಯಲ್ಲಿ ತರಬೇತಿ ಪಡೆಯುವ ಫಲಾನುಭವಿ ಮುಂದೆ ಸ್ವಉದ್ಯೋಗವನ್ನು ಮಾಡಿ ಇತರ ಮಹಿಳೆಯರಿಗೂ ತರಬೇತಿ ನೀಡುವಂತಾಗಬೇಕು ತರಬೇತಿಯ ನಿಯಮಾವಳಿಗಳ ಬಗ್ಗೆ ಹಾಗೂ ಈ ಕಾರ್ಯಕ್ರಮದ ಮೂಲ ಉದ್ದೇಶದ ಬಗ್ಗೆ ಮಾತನಾಡಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆದಂಬಾಡಿ ವಲಯದ ಜನಜಾಗೃತಿ ವಲಯಾಧ್ಯಕ್ಷರಾದ ಶ್ಯಾಮ್ ಸುಂದರ್ ರೈ ಇವರು ಮಾತನಾಡುತ್ತಾ ಸ್ವಾವಲಂಬಿ ಜೀವನ ನಡೆಸಲು ಯೋಜನೆಯಿಂದ ಹಲವಾರು ಕಾರ್ಯಕ್ರಮಗಳು ನಡೆದುಕೊಂಡು ಬಂದಿದೆ ಅದರ ಪ್ರಯೋಜನವನ್ನು ನಾವುಗಳು ಪಡೆದುಕೊಳ್ಳಬೇಕು ಮಹಿಳೆಯರು ಮನೆಯ ಒಳಗೆ ಮಾತ್ರವಲ್ಲದೆ ಆರ್ಥಿಕವಾಗಿ ಸಬಲರಾಗಲು ಈ ಕಾರ್ಯಕ್ರಮವು ಬಹಳ ಮಹತ್ವಪೂರ್ಣವಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಗಳಾದ ಶಶಿಧರ ಎಂ, ಪುತ್ತೂರು ತಾಲೂಕಿನ ಕೇಂದ್ರ ಒಕ್ಕೂಟಗಳ ಅಧ್ಯಕ್ಷರಾದ ಉದಯಕುಮಾರ್, ನವೋದಯ ಸಂಘಗಳ ಅಧ್ಯಕ್ಷರಾದ ಅಶೋಕ್, ಕೆದಂಬಾಡಿ ವಲಯದ ಮೇಲ್ವಿಚಾರಕರಾದ ಶುಭವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ,ಅಂಗನವಾಡಿ ಶಿಕ್ಷಕಿಯಾದ ಪೂರ್ಣಿಮಾ, ಐದು ದಿನದ ತರಬೇತಿ ನೀಡುವ ಶಿಕ್ಷಕಿಯಾದ ದಿವ್ಯಶ್ರೀ, ಸೇವಾ ಪ್ರತಿನಿಧಿಗಳಾದ ಶಾರದ ಮತ್ತು ಅರುಣ, ತರಬೇತಿ ಪಡೆಯುವಂತಹ ಸದಸ್ಯರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು


















