ಮಹಿಳಾ ಕಥಾಹಂದರವಿರುವ ಡಾ. ಶಯದೇವಿಸುತೆ ಮರವಂತೆಯವರ “ಕೆಂದಾವರೆ” ಕೃತಿಗೆ ಸಿನಿಮಾ ರೂಪ

ವಿನೋದ್‌ಕುಮಾರ್ ಪಿ. ಇವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಡಾ. ಶಯದೇವಿಸುತೆ ಮರವಂತೆ (ಡಾ. ಜ್ಯೋತಿ ಜೀವನ್‌ಸ್ವರೂಪ್) ಅವರ ಹೊಚ್ಚ ಹೊಸ ಮಹಾ ಕಾದಂಬರಿಯು ಸಿನಿಮಾ ಶೈಲಿಯ ಬರವಣಿಗೆಗಳಿಂದ ವಿಶೇಷ ಮುಖಪುಟ ವಿನ್ಯಾಸದೊಂದಿಗೆ ಪುನಃ ಸಿದ್ಧತೆಗೊಂಡಿದ್ದು, ಅದನ್ನ ಇತ್ತೀಚೆಗಷ್ಟೇ ದಿನಾಂಕ 28/08/2025ರಂದು ಕರ್ನಾಟಕ ಸರ್ಕಾರ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷೆ (ಮಕ್ಕಳ ವೈದ್ಯೆ & ಪ್ರಾಧ್ಯಾಪಕಿ), ಡಾ. ನಾಗಲಕ್ಷ್ಮೀ ಚೌಧರಿಯವರು ಗೌರಿ-ಗಣೇಶ ಚತುರ್ಥಿ ಹಬ್ಬದ ಸಂಭ್ರಮದಂದು ತಮ್ಮ ಸ್ವಗೃಹದಲ್ಲಿ ಲೋಕಾರ್ಪಣೆಗೊಳಿಸಿ ಇಡೀ ಚಿತ್ರತಂಡಕ್ಕೆ ಶುಭಹಾರೈಸಿದರು.

ಚಲನಚಿತ್ರ ನಿರ್ಮಾಣದ ಸಮಯದಲ್ಲಿ ಸಹ ಬರಹಗಾರರಾಗಿ ಚಿತ್ರ ನಿರ್ದೇಶಕ ಪನ್ನಗ ಸೋಮ್‌ಶೇಖರ್ ಹಾಗೂ ಕಲಾವಿದ ರಂಗಾಯಣ ಜಗನ್‌ರವರು ಡಾ. ಶಯದೇವಿಸುತೆ ಮರವಂತೆಯವರಿಗೆ ಬಲು ವಿಶೇಷವಾಗಿ ಸಹಕರಿಸಿದ್ದು, ಸಿನಿಮಾ ಕಾದಂಬರಿಯನ್ನು ಸಿನಿಮಾ ನಿರ್ಮಾಪಕ ಆದಿತ್ಯವಿನೋದ್‌ರವರ ಹೆಸರಿಗೆ ಕಾನೂನುಬದ್ಧವಾಗಿ ಹಸ್ತಾಂತರಿಸಿಕೊಡಲಾಯ್ತು.

ಸದ್ಯದಲ್ಲಿಯೇ, ಅಪ್ರಮೇಯ ಫಿಲಂಸ್‌ರವರ ಪ್ರೊಡಕ್ಷನ್‌ನಲ್ಲಿ “ಕೆಂದಾವರೆ” – ಎಂಬ ಇದೇ ಮಹಾ ಕಾದಂಬರಿಯ ಹೆಸರಿನ ಶೀರ್ಷಿಕೆಯಡೀಯಲ್ಲಿ ಕಾದಂಬರಿ ಆಧಾರಿತ ಕನ್ನಡ ಭಾಷೆಯ ಹೊಸ ಚಲನಚಿತ್ರವೊಂದು ನಿರ್ಮಾಣವಾಗಿದ್ದು ಅತೀ ಶೀಘ್ರದಲ್ಲಿಯೇ ಅದನ್ನು ಬೆಳ್ಳಿತೆರೆ ಮೇಲೆ ತರಲು ಕೆಲಸಗಳು ಪ್ರಗತಿಯಲ್ಲಿವೆ.

ಡಾ. ಶಯದೇವಿಸುತೆ ಮರವಂತೆ (ಡಾ. ಜ್ಯೋತಿ ಜೀವನ್‌ಸ್ವರೂಪ್) ಅವರ ಹೊಚ್ಚ ಹೊಸ ಮಹಾ ಕಾದಂಬರಿ “ಕೆಂದಾವರೆ”ಯು ಕನ್ನಡ ಚಲನಚಿತ್ರರಂಗಕ್ಕೆ ಮೊಟ್ಟ ಮೊದಲು ಆಯ್ಕೆಯಾದಾಗ, “ಕೆಂದಾವರೆ” – ಎಂಬ ಇವರ ಮಹಾ ಕಾದಂಬರಿಯ ಚಲನಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್‌ನ್ನು ದೊಡ್ಮನೆ ಗೌರವಾನ್ವಿತ ಸೊಸೆ; ಕನ್ನಡ ಚಿತ್ರರಂಗದ ಶ್ರೇಷ್ಠ ನಟ; ಕರ್ನಾಟಕ ರತ್ನ, ಡಾ. ಪುನೀತ್ ರಾಜ್‌ಕುಮಾರ್‌ರವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರವರು ತಮ್ಮ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್‌ನಲ್ಲಿ ಇದೀಗಾಗಲೇ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದ್ದಾರೆ.

Related Posts

Leave a Reply

Your email address will not be published.