ಸುಳ್ಯ ದಸರಾ ಪ್ರಯುಕ್ತ ಮಕ್ಕಳ ದಸರಾ-2024 ಉದ್ಘಾಟನೆ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ (ರಿ), ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಇದರ ನೇತೃತ್ವದಲ್ಲಿ ನಡೆಯುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ “ಸುಳ್ಯ ದಸರಾ -2024 ರ ಪ್ರಯುಕ್ತ ಮಕ್ಕಳ ದಸರಾ ಇಂದು ಉದ್ಘಾಟನೆ ಗೊಂಡಿತು.


ಸುಳ್ಯ ಬಸ್ಸು ನಿಲ್ದಾಣದ ಬಳಿಯಿಂದ ತಾಲೂಕಿನ ವಿವಿಧ ಭಾಗದ ಮಕ್ಕಳಿಂದ ಅದ್ದೂರಿ ಮೆರವಣಿಗೆಯೊಂದಿಗೆ ಪ್ರಾರಂಭ ಗೊಂಡು ಶ್ರೀ ಶಾರದಾಂಬ ವೇದಿಕೆಯಲ್ಲಿ ಮಕ್ಕಳಿಂದಲೇ ವಿಶೇಷವಾಗಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ಡ್ರಾಯಿಂಗ್, ಗೂಡು ದೀಪ ಸ್ಪರ್ಧೆ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವೇದಿಕೆಯಲ್ಲಿ ಸಮೂಹ ಸಂಸ್ಥೆಯ ಪ್ರಮುಖರಾದ ಗೌರವಧ್ಯಕ್ಷ ಕೃಷ್ಣ ಕಾಮತ್, ಉತ್ಸವ ಸಮಿತಿಯ ಅಧ್ಯಕ್ಷ ಡಾ. ಲೀಲಾಧರ್, ಗೌರವ ಸಲಹೆಗಾರ ಎಂ ವೆಂಕಪ್ಪ ಗೌಡ, ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಗೋಕುಲ್ ದಾಸ್, ಲೋಕೇಶ್ ಊರುಬೈಲು ಮೊದಲಾದವರು ಉಪಸ್ಥಿತರಿದ್ದರು