ಕಡಬ: ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮ

ಕಡಬ: ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೊಡ್ರಿಗಸ್ ಮತ್ತು ಸೈಂಟ್ ಜೋಕಿಮ್ಸ್ ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿಯಾದ ಸಿ| ಗ್ರೇಟಾ ಮಸ್ಕರೇನಸ್ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ನೂತನ ಪ್ರಾಂಶುಪಾಲರಾಗಿ ಆಗಮಿಸಿದ ವಂದನೀಯ ಸುನಿಲ್ ಪ್ರವೀಣ್ ಪಿಂಟೋ ರವರಿಗೆ ಪದಗ್ರಹಣ ಕಾರ್ಯಕ್ರಮವು ಸೈಂಟ್ ಜೋಕಿಮ್ಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್ ಡಿಸೋಜ ಹಳೆ ಬೇರು ಹೊಸ ಚಿಗುರು ಎಂಬಂತೆ ಹಳೆಯ ಬೇರುಗಳು ಗಟ್ಟಿಯಾಗಿದ್ದಾಗ ಮಾತ್ರ ಮರ ಸೊಂಪಾಗಿ ಬೆಳೆದು ಹೊಸ ಚಿಗುರೊಡೆದು ಸೊಂಪಾಗಿ ಬೆಳೆಯುತ್ತದೆ. ಹಾಗೆಯೇ ಇಲ್ಲಿ ಕೆಲಸ ಮಾಡಿದ ಪ್ರಾಂಶುಪಾಲರು ನಮ್ಮ ಸಂಸ್ಥೆಯ ಬೇರನ್ನು ಗಟ್ಟಿಗೊಳಿಸಿದ್ದಾರೆ. ಮುಂದಿನ ಪ್ರಾಂಶುಪಾಲರು ಅದನ್ನು ಸೊಂಪಾಗಿ ಬೆಳೆಸುತ್ತಾರೆ ಎಂಬ ಭರವಸೆ ಹಾಗೂ ಸಿಸ್ಟರ್ ಗ್ರೇಟಾ ಅವರ ಮುಂದಿನ ಶಿಕ್ಷಕ ಜೀವನಕ್ಕೆ ಶುಭ ಹಾರೈಸಿದರು.

2024-2025 ನೇ ಸಾಲಿನ ಎಸ್ .ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತ ವೇಗಸ್ , ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಬಿ, ವಾಚಣ್ಣ ಕೆರೆಮೂಲೆ, ಗಿರಿಧರ್ ರೈ, ಈಶ್ವರ್ , ಸೈಂಟ್ ಜೋಕಿಮ್ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರಾದ ಕಿರಣ್ ಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಲತಾ ,ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೋಡ್ರಿಗಸ್, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ದಕ್ಷಾ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಲತಾ ಸ್ವಾಗತಿಸಿ, ಕಾಲೇಜು ವಿಭಾಗದ ಪ್ರಾಂಶುಪಾಲರಾದ ಕಿರಣ್ ಕುಮಾರ್ ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಲೋಲಾಕ್ಷಿ ನಿರೂಪಿಸಿದರು.

Related Posts

Leave a Reply

Your email address will not be published.