ಮಂಗಳೂರು: ಡ್ಯಾಡಿಸ್ ರೋಡ್‍ನ ಕ್ಯೂ ಆರ್ ಕೋಡ್ ಅನಾವರಣ
ಎಂ ಸ್ಕ್ವೇರ್ ಎಂಟರ್ ಪ್ರೈಸಸ್ ಹಾಗೂ ಡ್ಯಾಡಿ ಸ್ ರೋಡ್ ವತಿಯಿಂದ ಡ್ಯಾಡಿಸ್ ರೋಡ್‍ನ ಕ್ಯೂ ಆರ್ ಕೋಡ್ ಅನಾವರಣ ಸಮಾರಂಭವು ನಗರದ ಉತ್ಸವ್ ರೆಸ್ಟೋರೆಂಟ್‍ನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೈದ್ಯರಾದ ಡಾ. ಗಣೇಶ್ ಕುಮಾರ್ ಅವರು ಮಾತನಾಡಿ, ಡ್ಯಾಡಿಸ್ ರೋಡ್‍ನ ಕ್ಯೂ ಆರ್ ಕೋಡ್ ಒಂದು ಉತ್ತಮ ಅನ್ವೇಷಣೆಯಾಗಿದ್ದು, ಎಲ್ಲಾರಿಗೂ ಸಹಕಾರಿಯಾಗುವಂತದ್ದು ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಡ್ಯಾಡಿಸ್ ರೋಡ್ ನ ಸೇಲ್ಸ್ ಹೆಡ್ ಅನೀಶ್ ಅವರು ಸ್ ರೋಡ್‍ನ ಕ್ಯೂ ಆರ್ ಕೋಡ್ ಬಗೆಗೆ ಸಂಪೂರ್ಣ ವಿವರ ನೀಡಿದರು.
ಈ ಸಂದರ್ಭದಲ್ಲಿ ಡ್ಯಾಡಿಸ್ ರೋಡ್ ನ ಕ್ಯೂ ಆರ್ ಕೋಡ್ ಅನ್ನು ಬಿಡುಗಡೆಗೊಳಿಸಲಾಯಿತು.ವೇದಿಕೆಯಲ್ಲಿ ಮಂಗಳೂರಿನ ಉದ್ಯಮಿ ಅಬ್ದುಲ್ ಬಶೀರ್, ಕರ್ನಾಟಕ ಸೂಪರ್ ಸ್ಟಾಕಿಸ್ಟ್ ಜಸ್ಟೀನ್, ಎನ್‍ಎಂಪಿಟಿಯ ನಿವೃತ್ತ ನೌಕರರಾದ ರಾಮಯ್ಯ ದಂಪತಿಗಳು, ಎಂ ಸ್ಕ್ವೇರ್ ಎಂಟರ್ ಪ್ರೈಸಸ್ ಹಾಗೂ ಡ್ಯಾಡಿಸ್ ರೋಡ್ ನ ಮಾಲಕರು, ಸಿಬ್ಬಂದಿಗಳು, ಡ್ಯಾಡಿಸ್ ರೋಡ್ ನ ವಿವಿಧ ತಾಲೂಕುಗಳ ಟೀಮ್ ಲೀಡರ್‍ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡ್ಯಾಡಿಸ್ ರೋಡ್ ಕ್ಯೂ ಆರ್ ಕೋಡ್ ಅನ್ನು ನಿಮ್ಮ ವಾಹನದಲ್ಲಿ ಅಳವಡಿಸಿದರೆ, ಅಥವಾ ನೀವು ಹೊಂದಿದ್ದರೆ, ಇದು ನಿಮ್ಮ ವಾಹನಕ್ಕೆ ಯಾವುದೇ ಸಮಸ್ಯೆಯಾದಲ್ಲಿ, ಪಾರ್ಕಿಂಗ್ ಸಮಸ್ಯೆ, ಕಳ್ಳತನ, ಬೆಂಕಿ ಅವಘಡ, ಅಪಘಾತ ಅಥವಾ ಯಾವುದೇ ಇತರ ಬೆದರಿಕೆ, ಹಿಟ್ & ರನ್, ಇತ್ಯಾದಿ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ವಾಹನ/ಬಳಕೆದಾರರ ಮೇಲೆ, ನಿಯೋಜಿಸಲಾದ ಸಂಪರ್ಕಗಳಿಗೆ ಬಳಕೆದಾರರಿಗೆ ತುರ್ತು ಎಚ್ಚರಿಕೆ ಅಧಿಸೂಚನೆಯನ್ನು ಕಳುಹಿಸುತ್ತದೆ. 24/7 ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. 100% ಮೊಬೈಲ್ ಸಂಖ್ಯೆ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗಿದೆ.