ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ..!
ಕೊಚ್ಚಿ : ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ.
5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತೈಕುಡಂ ಬ್ರಿಗೇಡ್ ಸಂಸ್ಥೆ ತಿಳಿಸಿದೆ.
ವಿಪಿನ್ ಲಾಲ್ ಅವರು ಐದು ವರ್ಷಗಳ ಹಿಂದೆ ಬಿಡುಗಡೆಯಾದ ತಮ್ಮ ಚೊಚ್ಚಲ ಆಲ್ಬಂನ ಶೀರ್ಷಿಕೆ ಗೀತೆಯೊಂದಿಗೆ ವರಾಹ ರೂಪಂ ಸಾಮ್ಯತೆ ಹೊಂದಿದೆ ಎಂದು ದೂರಿದ್ದಾರೆ. ಅಲ್ಲದೇ ಕಾನೂನು ಸಮರ ನಡೆಸುವುದಾಗಿ ಹೇಳಿದ್ದಾರೆ.
ನಮ್ಮ ನವರಸಂ ಮತ್ತು ವರಾಹ ರೂಪಂ ನಡುವಿನ ಸಾಮ್ಯತೆಗಳು ಆಡಿಯೋ ವಿಷಯದಲ್ಲಿ ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ನಮ್ಮ ದೃಷ್ಟಿಕೋನದಿಂದ, ‘ಪ್ರೇರಿತ’ ಮತ್ತು ‘ಚೌರ್ಯ’ ನಡುವಿನ ಗೆರೆಯು ವಿಭಿನ್ನವಾಗಿದೆ ಮತ್ತು ನಿರ್ವಿವಾದವಾಗಿದೆ. ಆದ್ದರಿಂದ, ನಾವು ಇದಕ್ಕೆ ಕಾರಣವಾದ ಕ್ರಿಯೇಟಿವ್ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.