ಉಳ್ಳಾಲದ ಮದನಿ ನಗರದಲ್ಲಿ ನಡೆದ ದುರಂತ ಹಿನ್ನೆಲೆ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ

ಉಳ್ಳಾಲದ ಮದನಿ ನಗರದಲ್ಲಿ ಕಂಪೌoಡ್ ಕುಸಿದು ನಾಲ್ವರು ಮೃತಪಟ್ಟ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆಗೆ ಸ್ಪೀಕರ್ ಖಾದರ್ ಅವರ ಜೊತೆಗಿದ್ದರು.ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಗ್ರಾ.ಪಂ ಅಧಿಕಾರಿಗಳ ಮೂಲಕ ಅಪಾಯಕಾರಿ ಪಾಯಿಂಟ್‌ಗಳನ್ನು ಸರ್ವೇ ನಡೆಸಲು ಸೂಚಿಸಲಾಗಿದೆ.

krishnebaire Gowda

ತೀವ್ರತರದಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಈ ಕುರಿತು ಆದೇಶಿಸುವುದಾಗಿ ತಿಳಿಸಿದ ಅವರು ಕರಾವಳಿ ಭಾಗಗಳಲ್ಲಿ ಬೆಟ್ಟ ಕಡಿದು ಮನೆಗಳನ್ನು ನಿರ್ಮಿಸಿರುವುದರಿಂದ ಭೂಕುಸಿತಗಳು ತೀವ್ರತರದಲ್ಲಿ ನಡೆಯುತ್ತಲೇ ಬಂದಿದೆ ಎಂದ ಸಚಿವರು,ಮದನಿನಗರ ದುರಂತ ಕುರಿತು ಅಪಾರ ನೋವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಸ್ಥಳಕ್ಕೆ ತೆರಳಲು ಆದೇಶಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ.

Krishnebaire Gowda

ಸ್ತಳದಲ್ಲಿರುವ ಅಪಾಯಕಾರಿ ಪ್ರದೇಶಕ್ಕೆ ತಕ್ಷಣ ಪರಿಹಾರ ಕ್ರಮಕ್ಕೆ ಅಧಿಕಾರಿಗಳು ಹಾಗೂ ಇಂಜಿನಿಯರ್ ಅವರಲ್ಲಿ ತಿಳಿಸಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಕ್ರಮದ ಕುರಿತು ಜಿಲ್ಲಾಡಳಿತದೊಂದಿಗೆ ಸ್ಪಂದಿಸಲಿದ್ದೇನೆ ಎಂದರು.ಈ ಸಂದರ್ಭ ಸರಕಾರದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ್, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.