ಮಣಿಪುರದಲ್ಲಿ ಹಿಂಸಾಚಾರ ಪ್ರಾಯೋಜಿತ ಕಾರ್ಯಕ್ರಮ : ಶಾಸಕ ಉಮಾನಾಥ್ ಕೋಟ್ಯಾನ್

ಮೂಡುಬಿದಿರೆ: ಮಣಿಪುರ ರಾಜ್ಯದಲ್ಲಿ ಹಲವಾರು ದಿನಗಳಿಂದ ಹಿಂಸಾಚಾರ, ಅತ್ಯಾಚಾರ, ಅನಾಚಾರಗಳು ನಡೆಯುತ್ತಿದ್ದು, ಇದು ಸರಕಾರದ ಹೆಸರನ್ನು ಕೆಡಿಸಲು ವಿಪಕ್ಷಗಳು ಮಾಡಿರುವ ಪ್ರಾಯೋಜಿತ ಕಾರ್ಯಕ್ರಮವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದರು.

ಅವರು ಮಣಿಪುರ ಘಟನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಮಣಿಪುರ ರಾಜ್ಯದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ, ಮಾದಕ ವಸ್ತುಗಳನ್ನು ಬೆಳೆಸುತ್ತಿದ್ದಾರೆ ಇದನ್ನು ಸರಕಾರ ನಾಶ ಮಾಡಿದಾಗ ಯಾವುದೋ ಊಹಾಪೆÇೀಹಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ವದಂತಿಗಳಿಗೆ ಕಿವಿಕೊಟ್ಟು ಎಂದೋ ಆದಂತಹ ಸಮಸ್ಯೆಯನ್ನು ಊಹಾಪೆÇೀಹಗಳನ್ನು ಹಬ್ಬಿಸಿ ಮಹಿಳೆಯರನ್ನು ಬೆತ್ತಲೆ ಮಾಡುವಂತಹ ಅಮಾನುಷ ಕೃತ್ಯ, ಸಾಮಾನ್ಯ ಜನರನ್ನು ಕೊಲೆ ಮಾಡುವಂತಹ, ದೊಂಬಿಗಳನ್ನು ಸೃಷ್ಟಿಸುವಂತೆ ಮಾಡುತ್ತಿದ್ದು ಇದರ ಹಿಂದೆ ವಿರೋಧ ಪಕ್ಷಗಳು ಮತ್ತು ವಿವಿಧ ರಾಷ್ಟ್ರಗಳಾದ ಪಾಕಿಸ್ತಾನ, ಚೈನಾ ಬೇಕಾದಂತಹ ಹಣದ ವ್ಯವಸ್ಥೆಯನ್ನು ಮಾಡುವ ಮುಖಾಂತರ ಭಾರತದ ಹೆಸರನ್ನು, ನರೇಂದ್ರ ಮೋದಿಗೆ ಕೆಟ್ಟ ಹೆಸರು ತರಬೇಕೆಂಬ ದೃಷ್ಠಿಯಿಂದ ಪಿತೂರಿ ನಡೆಸಿ ಈ ಒಂದು ಕಾರ್ಯಕ್ರಮವನ್ನು ಪ್ರಾಯೋಜಿತವಾಗಿ ಮಾಡಿಸುವಂತಹ ಕಾಣದ ಕೈಗಳು ಕಾಣುತ್ತಿವೆ ಎಂದರು.

ಇಂದು ಅಲ್ಲಿಯ ಸರಕಾರ ಸಾಕಷ್ಟು ಶಿಸ್ತು ಕ್ರಮಗಳನ್ನು ಕೈಗೊಂಡರೂ ವಿರೋಧ ಪಕ್ಷಗಳು ಬೆಂಬಲವಾಗಿ ನಿಂತು ಅಮಾನುಷ ಕೃತ್ಯವನ್ನು ಬೆಂಬಲಿಸುತ್ತಿವೆ. ರಾಜಕೀಯ ಮಾಡಬೇಕು ಆದರೆ ರಾಜಕೀಯ ಮಾಡುವುದಕ್ಕೆ ಮಾತ್ರ ಮಾಡಬೇಕು. ಕೆಟ್ಟ ರಾಜಕರಣ ಮಾಡಿ ಸಾಮಾನ್ಯ ಜನರನ್ನು ಬಲಿಪಶುಗಳಾಗಿ ಮಾಡಿ ಮಹಿಳೆಯರ ಮಾನಭಂಗದಂತಹ ಕ್ರೂರ ಕೃತ್ಯಕ್ಕೆ ಸಹಕಾರ ನೀಡುತ್ತಿರುವುದು ಖಂಡನೀಯ.

Related Posts

Leave a Reply

Your email address will not be published.