ಕುಂದಾಪುರ: ಕರಾವಳಿ ಭಾಗದ ಕಾಮಿಡಿ ರೀಲ್ಸ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಸಾದ್ ಜೋಗಿ ಮನೆ ಭಾರಿ ಮಳೆಯಿಂದ ಸಂಪೂರ್ಣ ನೆಲಸಮ

ಕುಂದಾಪುರ: ನಿರಂತರ ಸುರಿಯುತ್ತಿರುವ ಮಳೆಗೆ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು ಮನೆಯವರು ಅಪಾಯದಿಂದ ಪಾರಾದ ಘಟನೆ ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ನಿವಾಸಿ ರಾಘವೇಂದ್ರ ಜೋಗಿ S/O ಸುಬ್ರಾಯ ಜೋಗಿ ಇವರ ಮನೆ ಹಾನಿಯಾಗಿದೆ. ಮನೆಯು ಸಂಪೂರ್ಣ ಕುಸಿಯುವ ಹಂತದಲ್ಲಿದ್ದು, ಬಹಳಷ್ಟು ಹಾನಿಯಾಗಿ ನಷ್ಟ ಸಂಭವಿಸಿದೆ.


ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ಎಂಬಲ್ಲಿ ಘಟನೆ ನಡೆದಿದೆ

ಮೊದಲು ಮನೆಯ ಹಿಂದಿನ ಗೋಡೆ ಒಳ ಛಾವಣಿಯ ಮಾಡು ಹಾಗೂ ಗೋಡೆಗಳು ಕುಸಿಯುವ ಸದ್ದಿಗೆ ಮನೆಯವರಿಗೆ ಎಚ್ಚರವಾದ್ದರಿಂದ ಅದೃಷ್ಟವಶಾತ್ ಮನೆಯವರೆಲ್ಲರೂ ಜೀವ ಹಾನಿಯಿಂದ ಪಾರಾಗಿದ್ದಾರೆ…ಹಾಗೆ ಬೆಳೆ ಬಾಳು ವಸ್ತುಗಳು ಸಂಪೂರ್ಣ ಹಾಳಾಗಿದೆ.
ಬಡ ಕಲಾವಿದನ ಮನೆಯ ದುರಸ್ತಿಗೆ ನಾವೆಲ್ಲರೂ ಕೈಜೋಡಿಸಿ ಮುಂದಿನ ಈ ಬಡ ಕುಟುಂಬಕ್ಕೆ ಸಹಾಯವಾಗಿ ನಿಲ್ಲೋಣ

ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪಂಚಾಯತ್ PDO, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

add - Rai's spices

Related Posts

Leave a Reply

Your email address will not be published.