ಉಳ್ಳಾಲ: ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಇಲ್ಲಿನ ಬಸ್ತಿಪಡ್ಪು ಎಂಬಲ್ಲಿ ಮನೆ ಆವರಣದಲ್ಲಿದ್ದ ತೆಂಗಿನ ಮರ ಉರುಳಿಬಿದ್ದು ಮನೆಗೆ ಹಾನಿಯುಂಟಾಗಿದೆ. ಬಸ್ತಿಪಡ್ಪುವಿನಲ್ಲಿರುವ ಯು.ಪಿ ಮಲ್ಯ ರಸ್ತೆಯಲ್ಲಿರುವ ವಿಶ್ವನಾಥ್ ತೇವುಲ ಎಂಬವರಿಗೆ ಸೇರಿದ ಮನೆಗೆ ಹಾನಿಯುಂಟಾಗಿದೆ. ಬುಧವಾರ ಸಂಜೆಯಿಂದ ಭಾರೀ ಮಳೆಯಾಗಿದ್ದು, ಜೋರಾಗಿ ಬೀಸಿದ ಗಾಳಿಯಿಂದ ಆವಾಂತರ ಉಂಟಾಗಿದೆ.
ಉಳ್ಳಾಲ : ಮದನಿನಗರ ಬಳಿ ಕಂಪೌಂಡ್ ವಾಲ್ ಬಿದ್ದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಉಳ್ಳಾಲ ನಗರಸಭಗೆ ಕೌನ್ಸಿಲರ್ ಓರ್ವರು ಅಪಾಯದಂಚಿನಲ್ಲಿರುವ ಮನೆಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು, ಮನವಿಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮನೆ ಮಹಡಿ ಕುಸಿದು ಮನೆಯೊಳಗಿದ್ದ ಬಾಲಕಿ ಸೇರಿದಂತೆ ತಂದೆ ಗಾಯಗೊಂಡ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಮೇಲಂಗಡಿ ಮಸೀದಿ ಸಮೀಪ ನಡೆದಿದೆ. ಮನೆಯೊಳಗಿದ್ದ ಅಬ್ಬಾಸ್ ಹಾಗೂ ಅವರ ಪುತ್ರಿ ಮನೆ ಕುಸಿತದ ಸಂದರ್ಭ
ಮೂಡುಬಿದಿರೆ: ಬುಧವಾರ ರಾತ್ರಿ ಸುರಿದ ವಿಪರೀತ ಮಳೆಗೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಂಜಾರುವಿನ ಪ್ರಕಾಶ್ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ 5 ದನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಅದರಲ್ಲಿ 1 ದನ ಅಸುನೀಗಿದೆ.2 ದನಗಳು ವಾಪಾಸು ಬಂದಿದ್ದು ಇನ್ನೆರಡು ದನಗಳು ಕಾಣೆಯಾಗಿರುತ್ತದೆ.ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೊಕೇಶ್ ಬಿ., ಸಹಾಯಕ ನಿರ್ದೇಶಕರು(ಗ್ರಾ.ಉ), ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಉಪಾಧ್ಯಕ್ಷೆ ಸುಶೀಲಾ
ಬಂಟ್ವಾಳ: ರಾತ್ರಿ ಮತ್ತೆ ನೆರೆ ಭೀತಿ ಎದುರಾದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ತನ್ನ ಅಧಿಕಾರಿಗಳು ಹಾಗೂ ಪೌರಕಾರ್ಮಿಕರೊಂದಿಗೆ ಮಧ್ಯರಾತ್ರಿ 1.30 ರ ವೇಳೆಗೆ ನೆರೆಪೀಡಿತ ತಗ್ಗು ಪ್ರದೇಶಗಳಿಗೆ ದೌಡಾಯಿಸಿ ಜನರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ರಸ್ತೆಗಳಾದ ಗೂಡಿನಬಳಿ, ಕಂಚುಗಾರ ಪೇಟೆ, ಆಲಡ್ಕ, ನಂದಾವರ, ಬಡ್ಡಕಟ್ಟೆಯಲ್ಲಿ ಬ್ಯಾರಿಕೇಡ್ ಹಾಗೂ ರಿಬ್ಬನ್ ಗಳನ್ನು ಕಟ್ಟಿ ಮುಂಜಾಗೃತ ಕ್ರಮಗಳನ್ನು ಕೈಗೊಂಡರು.
ದಕ್ಷಿಣಕನ್ನಡ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ನಗರದ ಕುಲಶೇಖರ ಕೋಟಿಮುರ ಸಿಲ್ವರ್ ಗೇಟ್‌ನ ಗ್ರಂಥಾಲಯದ ಬಳಿ ಇರುವ ನಾಗೇಶ್ ಎಂಬುವವರ ಮನೆ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ರವರು ಕುಟುಂಬಸ್ಥರಿಗೆ ಧೈರ್ಯ ತುಂಬಿ ಪರಿಹಾರ ಕಾರ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು. ಸ್ಥಳದಲ್ಲಿ ಅಜಯ್ ಕುಲಶೇಖರ, ನಿತಿನ್ ಕುಮಾರ್, ಅನಿಲ್, ಹರಿಣಿ ಪ್ರೇಮ್,
ಮೂಡುಬಿದಿರೆ: ಸೋಮವಾರದಂದು ಬೀಸಿದ ಗಾಳಿ ಮಳೆಗೆ ಶಿರ್ತಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಮೂಡುಕೊಣಾಜೆಯ ಮಾಲತಿ ಪೂಜಾರ್ತಿ ಮತ್ತು ದಿವ್ಯ ದಿನೇಶ್ ರವರ ಮನೆಗೆ ಮರ ಬಿದ್ದು ಹಾನಿಯಾಗಿರುವುದಲ್ಲದೆ ಗಣೇಶ್ ಪೂಜಾರಿ ಯವರ ಅಟೋದ ಮೇಲೆ ಮರ ಬಿದ್ದು ಪೂರ್ತಿ ಹಾನಿಯಾಗಿದೆ. ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ತಿಮರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾ ಹನುಮಗುಂದ ಸ್ಥಳಕ್ಕೆ ಭೇಟಿ
ನೆಲ್ಯಾಡಿ: ಇತಿಹಾಸ ಪ್ರಸಿದ್ಧ ಮತ್ಯತೀರ್ಥ ಎಂದೇ ಖ್ಯಾತವಾದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲ ನದಿಯಲ್ಲಿ ಇಂದು ಸಂಜೆಯಿಂದ ನಿರಂತರವಾಗಿ ಪ್ರವಾಹ ಏರಿಕೆಯಾಗುತ್ತಿದ್ದು, ದೇವಸ್ಥಾನದ ಅಂಗಳ ತನಕ ಬಂದಿದೆ. ಕಪಿಲ ನದಿಯಲ್ಲಿ ಇಂದು ಮಧ್ಯಾಹ್ನದ ನಂತರ ನದಿಯಲ್ಲಿ ಪ್ರವಾಹ ಏರಿಕೆಯಾಗುತ್ತಾ ಬಂದಿದ್ದು ಸಂಜೆ ವೇಳೆ ಉಕ್ಕಿ ಹರಿದ ಕಪಿಲ ನದಿಯ ಪ್ರವಾಹ ದೇವಸ್ಥಾನದ ಅಂಗಳಕ್ಕೆ ಬಂದಿದೆ. ಬೈರಾಪುರ ಘಾಟಿಯಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ
ಪುತ್ತೂರಿನ ಬನ್ನೂರು ಜೈನರ ಗುರಿಯಲ್ಲಿ ಭಾರೀ ಮಳೆಗೆ ಧರೆ ಕುಸಿತಗೊಂಡು ಮನೆ ಹಾನಿಗೊಳಗಾಗಿದ್ದು ,ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಶಾಸಕರು ಮನೆಯ ಮಾಲಿಕ ಮಜೀದ್ ರವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಶಾಸಕರು ಬೆಂಗಳೂರಿನಲ್ಲಿದ್ದು ಘಟನಾ ಸ್ಥಳಕೆ ಶಾಸಕರ ಕಚೇರಿ ಸಿಬಂದಿಗಳು ಭೇಟಿ ನೀಡಿದ್ದು ಕುಟುಂಬಕ್ಕೆ ಕರೆಮಾಡಿದ ಶಾಸಕರು ಸಾಂತ್ವನ ಹೇಳಿದ್ದು ಸರಕಾರದಿಂದ ತಕ್ಷಣ ಪರಿಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಮೂಡುಬಿದಿರೆ : ಕಡಂದಲೆ ಗ್ರಾಮ ವ್ಯಾಪ್ತಿಯ ಬಾರಬೆಟ್ಟುವಿನ ಅಣ್ಣಿ ಎಂಬವರ ಮನೆ ಮೇಲೆ ಬುಧವಾರ ಸಂಜೆ ಭಾರೀ ಗಾತ್ರದ ಮರವೊಂದು ಬಿರುಗಾಳಿಗೆ ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು. ಸ್ಥಳಕ್ಕೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಿನೇಶ್ ಕಂಗ್ಲಾಯಿ, ಪಿಡಿಓ ರಕ್ಷಿತಾ, ವಿಎ ಅನಿಲ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದರು.
ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರಿಕ್ಷಾ ಚಾಲಕರು ದುರಂತ ಸಾವನ್ನಪ್ಪಿದ ಘಟನೆ ನಗರದ ಪಾಂಡೇಶ್ವರದ ರೊಸಾರಿಯೋ ಸ್ಕೂಲ್ ಬಳಿ ನಡೆದಿದೆ. ಪುತ್ತೂರು ರಾಮಕುಂಜ ನಿವಾಸಿ ದೇವರಾಜ್ ಗೌಡ(46), ಹಾಸನ ಜಿಲ್ಲೆಯ ಆಲೂರು ಮೂಲದ ರಾಜು (50) ಮೃತರು. ಇವರು ರೊಸಾರಿಯೋ ಸ್ಕೂಲ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಇವರ ಮನೆ ಬಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಎಂದಿನಂತೆ ನಸುಕಿನಲ್ಲಿ ನಾಲ್ಕು ಗಂಟೆ ವೇಳೆಗೆ ಚಾಲಕ ರಾಜು