ಮಂಡೆಕೋಲು: ಶ್ರೀ ಕ್ಷೇತ್ರ ಕಳೇರಿಯಲ್ಲಿ ನಡೆದ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವ: ಶ್ರೀ ದೈವಗಳ ನೇಮೋತ್ಸವ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಕಳೇರಿಯಲ್ಲಿ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವವು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮಂಡೆಕೋಲು ಶ್ರೀ ಉಳ್ಳಾಕುಲು, ಧೂಮಾವತಿ, ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ದೇವಸ್ಥಾನ ಕಳೇರಿಯಲ್ಲಿ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವವು ಊರಿನ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಕಳೇರಿ ಕಾರಣೀಕ ದೈವಸ್ಥಾನವಾಗಿದ್ದು, ನಂಬಿ ಬರುವ ಭಕ್ತರಿಗೆ ಇಂಬು ನೀಡುವ ಕ್ಷೇತ್ರವಾಗಿದೆ. ಈಗಾಗಲೇ ಹತ್ತು ಹಲವು ಕಾರಣೀಕಗಳು ನಡೆದು ಬಂದಿರುವುದು ಆ ಗ್ರಾಮದ ಜನತೆಯ ಕಣ್ಣೇದುರೇ ಇದೆ. ಮಂಡೆಕೋಲು ಗ್ರಾಮದ ಜನತೆಗೆ ಅಭಯವನ್ನು ನೀಡುವ ಕಾರಣೀಕರ ಕ್ಷೇತ್ರವಾಗಿ ಜನಪ್ರಸಿದ್ಧಿಯಲ್ಲಿದೆ

ಈ ಕ್ಷೇತ್ರದಲ್ಲಿ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವವು ಸಂಭ್ರಮದಿಂದ ನೆರವೇರಿತು. ಜನವರಿ 30ರಂದು ದೇವತಾ ಪ್ರಾರ್ಥನೆಯೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ, ಜನವರಿ 31ರಂದು ಗಣಪತಿ ಹವನ, ನವಕ ಕಲಶಾಭಿಷೇಕ, ಸಾರ್ವಜನಿಕರಿಂದ ಭಜನೆ, ಶ್ರೀ ದೈವಗಳಿಗೆ ತಂಬಿಲ, ಕನ್ಯಾನ ಶ್ರೀ ಚಾಮುಂಡಿ ಕಟ್ಟೆಯಲ್ಲಿ ತಂಬಿಲ, ಮಹಾಪೂಜೆ, ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಫೆ.1ರಂದು ಶ್ರೀ ದೈವಗಳ ಭಂಡಾರ ತೆಗೆಯುವುದು, ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ಮತ್ತು ವಾಲಸಿರಿ, ಶ್ರೀ ಉಳ್ಳಾಕುಲು ದೈವದ ಪ್ರಸಾದ ವಿತರಣೆ, ಧೂಮಾವತಿ ಮತ್ತು ರುದ್ರಚಾಮುಂಡಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಉಳ್ಳಾಕುಲು ಸೇವಾ ಸಮಿತಿ ಕಳೇರಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಶ್ರಿ ಮಹಾವಿಷ್ಣುಮೂರ್ತಿ ದೇವಸ್ಥಾನ ಬೈಲುವಾರು ಸಮಿತಿಯ ಸಂಚಾಲಕರು, ಹಾಗೂ ಊರ ಸಮಸ್ತರ ಸಹಕಾರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.

ಶ್ರೀ ಕ್ಷೇತ್ರಕ್ಕೆ ಪ್ರವೇಶ ದ್ವಾರದವನ್ನು ಭಕ್ತಾಭಿಮಾನಿಗಳ ಸಹಕಾರದಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

Related Posts

Leave a Reply

Your email address will not be published.