ಮುಕುಂದ್ ರಿಯಾಲ್ಟಿಯ ಹೊಸ ಯೋಜನೆ ‘ರುದ್ರಾಕ್ಷ ಕೊಟ್ಟಾರದ ಇನ್ಫೋಸಿಸ್ ಬಳಿ ಐಷಾರಾಮಿ ಜೀವನದ ಹೊಸ ಅನುಭವ
ಮಂಗಳೂರು: ನಗರದ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿಯ ಮಹತ್ವಾಕಾಂಕ್ಷೆಯ ಪ್ರೀಮಿಯಂ ವಸತಿ ಯೋಜನೆ ‘ರುದ್ರಾಕ್ಷ’ ಹೈ ಲಿವಿಂಗ್ ಲಕ್ಷುರಿ ಹೋಮ್ಸ್, ಕೊಟ್ಟಾರದ ಇನ್ಫೋಸಿಸ್ ಸಮೀಪ ನಿರ್ಮಾಣವಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ವಸತಿ ಮತ್ತು ಐಟಿ ಕಾರಿಡಾರ್ ಪ್ರದೇಶದಲ್ಲಿ ನೂತನ ಯೋಜನೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಈ ಮೂಲಕ ಆಧುನಿಕ ಶೈಲಿಯಲ್ಲಿ ನಗರ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತಿದೆ.
ವೃತ್ತಿಪರರು ಮತ್ತು ಕುಟುಂಬಗಳ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ರುದ್ರಾಕ್ಷಿ, ಉತ್ತಮ ಸಂಪರ್ಕ ಮತ್ತು ಜೀವನ ಶೈಲಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದೆ. ನಾರಾಯಣ ಗುರು ವೃತ್ತ ಮತ್ತು ಲೇಡಿಹಿಲ್ ಪ್ರದೇಶದ ಸಮೀಪದಲ್ಲಿರುವ ಈ ಯೋಜನೆ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು ಮತ್ತು ಪ್ರಮುಖ ರಸ್ತೆಗಳಿಗೆ ಸುಲಭ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ.
ವೆಲ್ನೆಸ್ ಆಧಾರಿತ ವಸತಿ ಸಮುದಾಯವಾಗಿ ರೂಪುಗೊಂಡಿರುವ ರುದಾಕ್ಸ್, ಮನರಂಜನೆ, ವಿಶ್ರಾಂತಿ ಮತ್ತು ದೈನಂದಿನ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸುತ್ತದೆ. ಮುಖ್ಯವಾಗಿ, ಮಂಗಳೂರಿನ ಮೊದಲ 24/7 ಕೌಡ್ ಕಿಚನ್ ಅನ್ನು ವಸತಿ ಸಮುಚ್ಚಯದ ಒಳಗೆ ಪರಿಚಯಿಸಿರುವುದು ವಿಶೇಷತೆಯಾಗಿದೆ.
ಈ ಯೋಜನೆಯಲ್ಲಿ ರೂಫ್ಟಾಪ್ ಇನ್ಸಿನಿಟಿ ಪೂಲ್ ವಿದ್ ಸಿಟಿ ಮತ್ತು ಸೀ ವ್ಯೂ. ವೆಲ್ನೆಸ್ ಕ್ಲಬ್ನಲ್ಲಿ ಜಕುಝಿ ಮತ್ತು ಸೌನಾ, ಜಿಮ್ಮೇಶಿಯಂ, ಜಾಗಿಂಗ್ ಟ್ರ್ಯಾಕ್, ಒಳಾಂಗಣ ಆಟಗಳ ಪ್ರದೇಶ, ಬ್ಯಾಡ್ಮಿಂಟನ್ ಮತ್ತು ಬಾಸ್ಕೆಟ್ ಬಾಲ್ ಕೋರ್ಟ್ಗಳು ಸೇರಿವೆ. ಮಿನಿ ಥಿಯೇಟರ್, ಮಕ್ಕಳ ಆಟದ ಮೈದಾನ ಮತ್ತು ಬಹು ಉದ್ದೇಶ ಸಭಾಂಗಣವು ಇಲ್ಲಿನ ನಿವಾಸಿಗಳಿಗೆ ಸ್ವಾವಲಂಬಿ ಜೀವನಶೈಲಿ ಗುರಿಯನ್ನಾಗಿಸಿದೆ.
ಮಂಗಳೂರು ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ತಾಣವಾಗಿ ರೂಪುಗೊಳ್ಳುತ್ತಿರುವಾಗ, ರುದ್ರಾಕ್ಷನಂತಹ ಯೋಜನೆಗಳು ಸ್ಥಳ ಮತ್ತು ಜೀವನ ಶೈಲಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದ ಮನೆಗಳತ್ತ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತವೆ. ಈ ಯೋಜನೆಯಲ್ಲಿ 2ಬಿಎಚ್ಕೆ ಅಪಾರ್ಟ್ಮೆಂಟ್ಗಳು 98 ಲಕ್ಷ ರೂ. ದಿಂದ ಪ್ರಾರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ 7090933700ಗೆ ಸಂಪರ್ಕಿಸಿ ಅಥವಾ
www.mukundmgmrealty.com . ಗೆ ಭೇಟಿ ನೀಡಲು ಪ್ರವರ್ತಕರು ತಿಳಿಸಿದ್ದಾರೆ
ರುದ್ರಾಕ್ಷ ಯೋಜನೆಯ ಮುಖ್ಯ ವೈಶಿಷ್ಟ್ಯಗಳು
ಪ್ರೀಮಿಯಂ 2ಬಿಎಚ್ಕೆ, 3ಬಿಎಚ್ಕೆ, 4 ಬಿಎಚ್ ಡ್ಯುಪ್ಲೆಕ್ಸ್ ಮನೆಗಳು
ಇನ್ಫೋಸಿಸ್ ಸಮೀಪದ ಪ್ರಮುಖ ಸ್ಥಳ ಕೊಟ್ಟಾರ
ನಗರ ನೋಟಗಳೊಂದಿಗೆ ರೂಫ್ಟಾಪ್ ಇನ್ನಿನಿಟಿ ಪೂಲ್
ಜಕುಝಿ ಮತ್ತು ಸೌನಾ ಹೊಂದಿದ ವೆಲ್ನೆಸ್ ಕ್ಲಬ್
ಜಿಮ್ಮೇಶಿಯಂ, ಜಾಗಿಂಗ್ ಟ್ರಾಕ್ ಮತ್ತು ಕ್ರೀಡಾಂಗಣಗಳು
ಮಿನಿ ಥಿಯೇಟರ್ ಮತ್ತು ಬಹುಉದ್ದೇಶ ಸಭಾಂಗಣ
ಮಂಗಳೂರಿನ ಮೊದಲ 24/7 ಕೌಡ್ ಕಿಚನ್ ಸೌಲಭ್ಯ


















