ನೂತನ ಡಾಟಾ ಟೆಂಪ್ಲೆಟ್ ಸಾಫ್ಟ್ ವೇರ್ ಕಂಪೆನಿ ಉದ್ಘಾಟನೆ

ಮಂಗಳೂರಿನ ಪಿವಿಎಸ್ ಬಳಿಯ ಮಾನಸ ಟವರ್ಸ್‍ನ ನಾಲ್ಕನೇ ಮಹಡಿಯಲ್ಲಿ ನೂತನ ಡಾಟಾ ಟೆಂಪ್ಲೆಟ್ ಸಾಫ್ಟ್ ವೇರ್ ಕಂಪೆನಿಯ ಶುಭಾರಂಭಗೊಂಡಿತು. ಡಾಟಾ ಟೆಂಪ್ಲೆಟ್ ಸಾಫ್ಟ್ ವೇರ್ ಕಂಪೆನಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪೆÇ್ರ| ಡಾ| ಶಾಂತರಾಮ ಶೆಟ್ಟಿ ಅವರು ಉದ್ಘಾಟಿಸಿದ್ರು. ತದ ಬಳಿಕ ಮಾತನಾಡಿದ ಅವರು, ಮಂಗಳೂರು ಕೇವಲ 5ಲಕ್ಷ ಜನ ಸಂಖ್ಯೆಯಿರುವ ನಗರವಾಗಿದ್ದು, ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಕ್ಷೇತ್ರ, ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಜಿಲ್ಲೆ. ಇಂತಹ ವಿಶೇಷ ಸ್ಥಳದಲ್ಲಿ ಸಾಫ್ಟ್‍ವೇರ್ ಸಂಸ್ಥೆಯಾಗಿ ಡಾಟಾ ಟೆಂಪ್ಲೆಟ್ ಸಂಸ್ಥೆ ಆರಂಭವಾಗಿದ್ದು, ಕ್ವಾಲಿಟಿ ಮ್ಯಾನೇಜ್‍ಮೆಂಟ್‍ನಲ್ಲಿ ತನ್ನದೇಆದ ಹೆಸರು ಪಡೆದಿದೆ. ಇದುವೇ ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಯಾವುದೇ ಹೊಸ ಸಂಸ್ಥೆ ಆರಂಭವಾದರೆ ಅಲ್ಲಿ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಯಾಗುತ್ತದೆ. ಅದೇ ರೀತಿ ಡಾಟಾ ಟೆಂಪ್ಲೆಟ್ ಸಂಸ್ಥೆಯೂ ಸ್ಥಳೀಯರಿಗೆ ಉದ್ಯೋಗ ಒದಗಿಸುವಲ್ಲಿ ನೆರವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರದಲ್ಲೇ ಅತ್ಯುತ್ತಮ ಸಂಸ್ಥೆಯಾಗಿ ಮೂಡಿ ಬರಲಿ ಎಂದರು.ಸಿಇಒ ಮತ್ತು ಸಂಸ್ಥಾಪಕ ಅನಿಲ್ ಕುಮಾರ್ ಪಾರಕ್ಕಾಡ್ ಅವರು ವಂದಿಸಿದ್ರು.

ಈ ವೇಳೆ ವಕೀಲ ಸುಬ್ಬಯ್ಯ ರೈ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ದ.ಕ ಜಿಲ್ಲಾ ರೆಡ್‍ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ, , ಸಹ ಸಂಸ್ಥಾಪಕರಾದ ರಾಜೇಶ್ ಕೋಯಕ್ಕೀಲ್, ಅನೂಪ್ ವೆಲ್ಲಿಂಗ್ಟನ್, ಶ್ರೀಜೇಶ್, ಚೀಫ್ ಟೆಕ್ನಾಲಜಿ ಆಫೀಸರ್ ಶ್ರೀಧರ್ ಎಚ್. ಮೊದಲಾದವರು ಉಪಸ್ಥಿತರಿದ್ದರು. 2011ರಲ್ಲಿ ಆರಂಭವಾದ ಸಂಸ್ಥೆ ಏರೋಸ್ಪೇಸ್ ಸ್ಟಾಂಡರ್ಡ್ ಮತ್ತು ಐಎಸ್‍ಒ ಪ್ರಮಾಣೀಕೃತ ಸಂಸ್ಥೆಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಭಾರತದ ವಿವಿಧೆಡೆ, ಯುಎಸ್,ಯುಕೆ, ರವಾಂಡ, ಉಕ್ರೇನ್,ಲಿಥುವಾನಿಯಾ, ಬಾಂಗ್ಲಾದೇಶ, ಕಜಕಿಸ್ತಾನ್, ಜಪಾನ್, ಯುಎಇ ದೇಶಗಳಲ್ಲಿ ಕಚೇರಿಗಳನ್ನು ಹೊಂದಿವೆ. ಆರೋಗ್ಯ, ಏರೋಸ್ಪೇಸ್, ರಕ್ಷಣೆ, ಸ್ಯಾಟಲೈಟ್ ಮತ್ತು ಟೆಲಿಕಾಮ್ ಹಾಗೂ ಸರಕಾರಿ ಕ್ಷೇತ್ರಗಳಿಗೆ ತನ್ನ ಸೇವೆ ನೀಡುತ್ತಿದೆ. ಅಪ್ಲಿಕೇಶನ್ ಡೆವಲಪ್‍ವೆಂಟ್, ಬಿನ್‍ನೆಸ್ ಇಂಟಲಿಜೆನ್ಸ್, ಬಿಗ್ ಡಾಟಾ ಅನಾಲಿಸಿಸ್, ಟೆಸ್ಟಿಂಗ್ ಆಂಡ್ ಇಂಟಿಗ್ರೇಶನ್ ಸೇವೆಗಳನ್ನು ಹೊಂದಿವೆ. ಮಂಗಳೂರು ಕಚೇರಿ 100ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ