ಮಂಗಳೂರು: ತರಂಗಿಣಿ ಖ್ಯಾತಿಯ ಕೆ.ಎಂ ಸಚ್ಚೀಂದ್ರನಾಥ್ ನಿಧನ

ಕೇರಳ ಸಮಾಜಂನ ಮಾಜಿ ಅಧ್ಯಕ್ಷ, ಹಿರಿಯ ಸಂಘಟಕ, ತರಂಗಿಣಿ ಖ್ಯಾತಿಯ ಕೆ.ಎಂ ಸಚ್ಚೀಂದ್ರನಾಥ್(89) ಅವರು ನಿಧನ ಹೊಂದಿದ್ದಾರೆ.
ಮೂಲತಃ ಕೇರಳದವರಾಗಿರುವ ಅವರು ಕುದ್ರೋಳಿಯಲ್ಲಿ ವಾಸವಾಗಿದ್ದರು.
ಭಾರತ್ ಫ್ಲೈವುಡ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಅವರು ನಂತರ ಕುದ್ರೋಳಿಯಲ್ಲಿ ಮಂಗಳೂರು ಫ್ಲೈವುಡ್ ಉದ್ಯಮ ನಡೆಸುತ್ತಿದ್ದರು.
ತರಂಗಿಣಿ ಎಂಬ ಸಂಸ್ಥೆಯ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಮಂಗಳೂರಿನಲ್ಲಿ ನಿರಂತರವಾಗಿ ಆಯೋಜಿಸುತ್ತಿದ್ದರು.
ಕೆ.ಜೆ.ಜೇಸುದಾಸ್, ಡಾ.ರಾಜ್ ಕುಮಾರ್, ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಮೊದಲಾದ ಅನೇಕ ಪ್ರಖ್ಯಾತರ ಸಂಗೀತ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಪ್ರಥಮವಾಗಿ ಆಯೋಜಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
