ಮಂಗಳೂರು: ನೆಕ್ಸಾ ಮಾಂಡವಿ ಮೋಟಾರ್ಸ್ನಲ್ಲಿ ಮಾರುತಿ ಸುಝುಕಿಯ “ಇ ವಿಟಾರ” ಕಾರು ಮಾರುಕಟ್ಟೆಗೆ ಬಿಡುಗಡೆ
ಮಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿರುವ ನೆಕ್ಸಾ ಮಾಂಡವೀ ಮೋಟಾರ್ಸ್ನಲ್ಲಿ ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು “ಇ ವಿಟಾರ” ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಸಮಾರಂಭ ನಡೆಯಿತು.

ನಗರದ ಗಣ್ಯರು, ಉದ್ಯಮ ವಲಯದ ಪ್ರತಿನಿಧಿಗಳು ಮತ್ತು ವಾಹನ ಪ್ರಿಯರ ಸಮ್ಮುಖದಲ್ಲಿ ನಡೆದ ಈ ಮಹಾ ಅನಾವರಣ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದ ಲಾಂಚ್ ಸಮಾರಂಭವನ್ನು ನೆನಪಿಸುವಂತಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವಿಕ್ರಮ್ ಪೈ, ಸಮಿಟ್ ಅಪಾರ್ಟ್ಮೆಂಟ್ಸ್ ಕಾರ್ಯದರ್ಶಿ ಸ್ಮ್ಟ್. ಪ್ರೇಮಾ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್ ಶ್ರೀ ಅನೀಶ್ ಉಪಸ್ಥಿತರಿದ್ದರು.
ಇದೇ ವೇಳೆ Nexa Mandovi Motors ಉಪಾಧ್ಯಕ್ಷ ಶ್ರೀ ನೆರೆಂಕಿ ಪರ್ಶ್ವನಾಥ್, MSIL ಏರಿಯಾ ಮ್ಯಾನೇಜರ್ ಶ್ರೀ ಮಯಾಂಕ್ ಚೆಟಿವಾಲ್ ಹಾಗೂ ಡಿಜಿಎಂ ಶ್ರೀ ಅಕ್ಷಯ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೇಲ್ಸ್ ಡೆವಲಪ್ಮೆಂಟ್ ಮ್ಯಾನೇಜರ್ ದೀಪೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು
ಪರಿಸರ ಸ್ನೇಹಿ ತಂತ್ರಜ್ಞಾನ, ಉನ್ನತ ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳು ಹಾಗೂ ಭವಿಷ್ಯದ ನಗರ ಸಂಚಾರಕ್ಕೆ ಹೊಂದಿಕೊಂಡ ವಿನ್ಯಾಸದೊಂದಿಗೆ e-Vitara ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಹೊಸ e-Vitara ಎಲೆಕ್ಟ್ರಿಕ್ SUV ಇದೀಗ Nexa Mandovi Motors ನಲ್ಲಿ ಲಭ್ಯವಿದೆ. ಬುಕ್ಕಿಂಗ್ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದ್ದು, ಗ್ರಾಹಕರಿಗಾಗಿ ಟೆಸ್ಟ್ ಡ್ರೈವ್ ಸೌಲಭ್ಯವೂ ಲಭ್ಯವಿದೆ. ಇಂದೇ ನಿಮ್ಮ ಭವಿಷ್ಯದ ಎಲೆಕ್ಟ್ರಿಕ್ SUV ಅನ್ನು ಬುಕ್ ಮಾಡಿ! ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಮೀನಾ ರೆಗೂ – 099721 39909

















