ಮೂಡಬಿದರೆ : ನೇತಾಜಿ ಬ್ರಿಗೇಡ್ ನಿಂದ ದೀಪಾವಳಿ ಉತ್ಸವ
ಆ್ಯಂಕರ್ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ದೀಪದಿಂದ ದೀಪ ಹಚ್ಚುವ ಮೂಲಕ ಊರಿನ ಸಮಸ್ತ ನಾಗರಿಕರ ಜೊತೆಗೂಡಿ 3ನೇ ವರ್ಷz ಬೆಳಕಿನ ಹಬ್ಬವನ್ನು ಸ್ವರಾಜ್ಯ ಮೈದಾನದ ಚಿಣ್ಣರ ಉದ್ಯಾನವನದಲಿ ಸಂಭ್ರಮಿಸಲಾಯಿತು.
ಉತ್ಸವವನ್ನು ವಾರ್ಡ್ ಸದಸ್ಯ ರಾಜೇಶ್ ನಾಯ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇವೇಳೆ ಸತ್ಯಶ್ರೀ ಭಜನಾ ಮಂಡಳಿ ಪಳಕಳ ಪುತ್ತಿಗೆ ಇವರ ವತಿಯಿಂದ ಕುಣಿತ ಭಜನೆ ನಡೆಯಿತು. ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ವರುಷದ ದೀಪಾವಳಿಯನ್ನು ಆಚಾರಿಸಲಾಯಿತು.
ಪುರಸಭೆಯ ಸದಸ್ಯ ನವೀನ್ ಶೆಟ್ಟಿ, ಸತ್ಯಶ್ರೀ ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ಪ್ರಭಾಕರ ಕುಲಾಲ್, ಜೈನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಮೂಡುಬಿದಿರೆ ಪುರಸಭೆಯ ಸ್ವಚ್ಛತಾ ರಾಯಭಾರಿ ಸಂಧ್ಯಾ ಭಟ್, ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್ , ಮಹಿಳಾ ಘಟಕದ ಪ್ರಮುಖರಾದ ಜಯಶ್ರೀ ದಯಾನಂದ್ ಊರಿನ ಹಿರಿಯರಾದ ಪ್ರಕಾಶ್ ಆಚಾರ್ಯ, ವಾರ್ಡ್ ನ ಪ್ರಮುಖರಾದ ಕಿಶೋರ್, ದಿನೇಶ್, ಗಣೇಶ್, ಊರಿನ ನಾಗರಿಕರು, ಹಾಗೂ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಪಧಾಧಿಕಾರಿಗಳು ಸರ್ವಸದಸ್ಯರುಗಳು ಉಪಸ್ಥಿತರಿದ್ದರು.