ಕುಖ್ಯಾತ ದನಕಳ್ಳ ಮೊಹಮ್ಮದ್‌ ಯೂನಸ್‌ ಬಂಧನ

ಕುಖ್ಯಾತ ದನಕಳ್ಳ ಮೊಹಮ್ಮದ್‌ ಯೂನಸ್‌ ಬಂಧನವಾಗಿದೆ.ವಿವಿಧ ಠಾಣೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್‌ ದನಕಳ್ಳ ಮೊಹಮ್ಮದ್‌ ಯೂನಸ್‌ನನ್ನು ಮಾ. 7ರಂದು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಲ್ಲೂರು ಗ್ರಾಮದ ಬೋರ್ಕಟ್ಟೆ ದೊಡ್ಡಕಜೆಯ ಮೊಹಮ್ಮದ್‌ ಯೂನಸ್‌ (30) ಕಾರ್ಕಳ ತಾಲೂಕು ರೆಂಜಾಳದಲ್ಲಿ ಶುಕ್ರವಾರ ಬಂಧಿಸಲ್ಪಟಿದ್ದಾನೆ. ಈತನ ಮೇಲೆ ದನಕಳ್ಳತನಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ, ಅಜೆಕಾರು, ಹೆಬ್ರಿ, ಶಿರ್ವ, ಮೂಡುಬಿದಿರೆ ಮಾತ್ರವಲ್ಲದೇ ಚಿಕ್ಕಮಗಳೂರು, ಮೂಡುಗೆರೆ, ಆಲ್ದೂರು ಠಾಣೆಗಳಲ್ಲೂ ಪ್ರಕರಣ ದಾಖಲಾಗಿತ್ತು. ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಯೂನಸ್‌ ಗೆ ಸಹಕರಿಸುತ್ತಿದ್ದ ಮೇರೆಗೆ ಆತನ ಸಂಬಂಧಿಕ ಮೂಡುಬಿದಿರೆಯ ಜಲೀಲ್‌ (49) ಎಂಬಾತನನ್ನು ಮಾ. 4ರಂದು ಮೂಡುಬಿದಿರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈತನ ವಿರುದ್ಧ ದನಕಳ್ಳತನಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಹಿರಿಯಡ್ಕ ಜೈಲ್‌ನಲ್ಲಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ.

add - Rai's spices

Related Posts

Leave a Reply

Your email address will not be published.