ಓಂ ಕ್ರಿಕೆಟರ್ಸ್ ಪಾವಂಜೆ ನೂತನ ಅಧ್ಯಕ್ಷರಾಗಿ ಗಣೇಶ್ ದೇವಾಡಿಗರವರು ಆಯ್ಕೆ
ಪಾವಂಜೆ : ಓಂ ಕ್ರಿಕೆಟರ್ಸ ಪಾವಂಜೆ ಇದರ ವಾರ್ಷಿಕ ಮಹಾಸಭೆಯು ಸುಕೇಶ್ ಪಾವಂಜೆ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ಗಣೇಶ್ ದೇವಾಡಿಗರವರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾಗಿ ಪ್ರಮೋದ್, ಕಾರ್ಯದರ್ಶಿಯಾಗಿ ವರುಣ್, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್, ತಂಡದ ಕಪ್ತಾನರಾಗಿ ಕಾರ್ತಿಕ್, ಉಪ ಕಪ್ತಾನರಾಗಿ ಪ್ರವೀಣ್ ರವರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಒಟ್ಟು 40 ಸದಸ್ಯರು ಈ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.


















