ಅನಾರೋಗ್ಯ ಪೀಡಿತ ವಯೋವೃದ್ದೆಯ ನೋವಿಗೆ ಸ್ಪಂದಿಸಿದ ಯುವಕರು
ಕಾಪು :ಪುರಾಸಭಾ ವ್ಯಾಪ್ತಿಯ ಮಲ್ಲಾರಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅನಾರೋಗ್ಯ ಪೀಡಿತ ವಯೋವೃದ್ದೆಯ ನೋವಿಗೆ ಸ್ಪಂದಿಸುವ ಮೂಲಕ ಯುವಕರು ಮಾದರಿಯಾಗಿದ್ದಾರೆ.
ಕೊಂಬಗುಡ್ಡೆ ಪ್ರಶಾಂತ್ ಪೂಜಾರಿ, ಪುರಸಭಾ ಸದಸ್ಯ ಉಮೇಶ್ ಪೂಜಾರಿ, ಶಿವಾನಂದ ಪೂಜಾರಿ ಸಹಿತ ಯುವಕರ ತಂಡ ಒಂಟಿ ಮಹಿಳೆಯ ಅನಾರೋಗ್ಯ ಪರಿಸ್ಥಿತಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕುಟುಂಬ ವರ್ಗದಿಂದ ದೂರವಾಗಿದ್ದ ಲೀಲಾ ಪೂಜಾರ್ತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ವಿಷಯವನ್ನು ಸ್ಥಳೀಯ ಪುರಸಭಾ ಸದಸ್ಯ ಉಮೇಶ್ ಪೂಜಾರಿಯವರ ಗಮನಕ್ಕೆ ತಂದಿದ್ದು ಅವರು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಪೂಜಾರಿ, ಶಿವಾನಂದ ಪೂಜಾರಿ ಅವರ ಸಹಾಯದೊಂದಿಗೆ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಶ್ವಿಯಾಗಿದ್ದಾರೆ.
ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿ ಶರೋನ್ ನಿಸಿತಾ, ಆಶಾ ಕಾರ್ಯಕರ್ತೆ ಉಷಾ ಮಲ್ಲಾರು, ಸಚಿನ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.