ಪುತ್ತೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆ ಉದ್ಘಾಟನೆ

ಪುತ್ತೂರು: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆಯು ಪುತ್ತೂರು ಮುಖ್ಯರಸ್ತೆ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಉದ್ಘಾಟನೆಗೊಂಡಿತು.

ನೂತನ ಶಾಖೆಯನ್ನು ಶ್ರೀ ಲಕ್ಷ್ಮಾಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿರುವ ಮಾಜಿ ಮಂತ್ರಿ ಜೆ.ಕೃಷ್ಣ ಪಾಲೆಮಾರ್ ಮತ್ತು ಜಿ.ಎಲ್ ಗ್ರೂಪ್‌ನ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ಉದ್ಘಾಟಿಸಿದರು.

ಶ್ರೀ ಲಕ್ಷಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಪುತ್ತೂರು ಶಾಖೆಯನ್ನು ಉದ್ಘಾಟಿಸಿದ ಸಂಘದ ಅಧ್ಯಕ್ಷ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡುವುದು ಶ್ರೀ ಲಕ್ಷ್ಮಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉದ್ದೇಶವಾಗಿದ್ದು ಈ ಮೂಲಕ ಸಾಮಾನ್ಯ ಜನರನ್ನು ಬೆಳೆಸುವ ಗುರಿ ನಮ್ಮದು. ಸಂಘವು ಸಾಲಗಳನ್ನು ನೀಡುವುದರ ಹೊರತಾಗಿ, ಇದು ಸಾವಿರಾರು ಸಣ್ಣ ವ್ಯಾಪಾರ ಮಾಲೀಕರಿಗೆ ಸ್ವಾವಲಂಬನೆಯನ್ನು ಸಾಧಿಸಲು ಅಧಿಕಾರ ನೀಡುತ್ತದೆ. ಅರ್ಧ ಗಂಟೆಯಲ್ಲಿ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಠೇವಣಿಗಳ ಮೇಲೆ ಅಧಿಕ ಬಡ್ಡಿ ದರ ಪ್ರಧಾನ ಶಾಖೆಯಲ್ಲಿ ಲಾಕರ್ ವ್ಯವಸ್ಥೆ, ಹವಾನಿಯಂತ್ರಿತ ಸಭಾಂಗಣ ತ್ವರಿತ ಚಿನ್ನಾಭರಣ ಸಾಲ ತಿಂಗಳಿಗೆ ಶೇ.0.92 ಬಡ್ಡಿ ದರದಲ್ಲಿ
ಪ್ರಧಾನ ಕಚೇರಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಕ್ ಎಟಿಂ ಸಂಘದ ವೆಬ್‌ಸೈಟ್, ಸಹಕಾರಿ ದರ್ಪಣ ಆಪ್
ಕೋರ್ ಬ್ಯಾಂಕಿಂಗ್ ಸೌಲಭ್ಯವು ನಮ್ಮಲ್ಲಿ ಇದೆ ಎಂದು ಹೇಳಿದರು.

ಜಿ.ಎಲ್ ಗ್ರೂಪ್‌ನ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ಮಾತನಾಡಿ, ಸಹಕಾರಿ ಸಂಘಗಳು ವ್ಯವಹಾರಗಳನ್ನು ಬೆಳೆಸಬೇಕು, ಶಾಖೆಗಳನ್ನು ಮಾಡಬೇಕು ಅದರೊಂದಿಗೆ ಗ್ರಾಹಕ ವಿಶ್ವಾಸರ್ಹಾತೆಯನ್ನು ಉಳಿಸಿಕೊಳ್ಳಬೇಕೆಂಬ ಮುಂದಾಲೋಚನೆ ಇದ್ದಾಗ ಯಾವುದೇ ಸಂಘ ಸಂಸ್ಥೆಯ ವ್ಯವಹಾರ ಬೆಳೆಯುವಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರಿ ಸಂಘವು ಬಹಳ ವೇಗದಲ್ಲಿ ವೃದ್ದಿಯಾಗುತ್ತಿರುವ ಸಹಕಾರಿ ಸಂಘವಾಗಿದೆ ಎಂದರು.
ರಾಮ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ ಅವರು ಮಾತನಾಡಿ ಲಕ್ಷ್ಮಣಾನಂದ ಸ್ವಾಮೀಜಿಯವರು ಸಮಾಜಕ್ಕೆ ಗುರುವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬಂದಿರುವ ಸಂಘ ಇನ್ನೂ ಹೆಚ್ಚಿನ ಶಾಖೆಯನ್ನು ತೆರೆಯುವಂತಾಗಲಿ ಎಂದರು.
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ ಅವರು ಮಾತನಾಡಿ ಇವತ್ತು ಹೊಸದಾಗಿ ಪುತ್ತೂರಿನಲ್ಲಿ ತನ್ನ 6ನೇ ಶಾಖೆಯನ್ನು ತೆರೆದು ಕೊಂಡಿರುವ ಶ್ರೀ ಲಕ್ಷ್ಮಣಾನಂದ ಸಹಕಾರಿ ಸಂಘದ ಜೊತೆಗೆ ನಮ್ಮ ಸಂಘದ ಕ್ಷಾತ್ರೀಯ ಸಮಾಜ ಸೇವಾ ಸಂಘದಲ್ಲೂ ವ್ಯವಹಾರ ಕೊಡಿ. ನಮ್ಮ ಸಂಘ ಬೆಳೆಯುತ್ತಿರುವ ಸಂಘ ಅದನ್ನು ಬೆಳೆಸಿ ಎಂದ ಅವರು ನಮ್ಮ ಸಮಾಜದ ಎರಡೂ ಸಂಘಗಳಿಗೂ ಪ್ರೋತ್ಸಾಹ ನೀಡಿ ಎಂದರು.

ಪುತ್ತೂರಿನಲ್ಲಿ ಸಂಘ ಪ್ರಾರಂಭಿಸಲು ಸಹಕಾರ ನೀಡಿದ ಪುತ್ತೂರು ಕೋ ಓಪಟೇಟವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಿತಿನ್ ಮಂಗಳ, ಅರುಣ್ ಕುಮಾರ್, ಅನಿಲ್ ಅವರನ್ನು ಶ್ರೀ ಲಕ್ಷ್ಮಣಾನಂದ ಸಹಕಾರಿ ಸಂಘದಿಂದ ಸನ್ಮಾನಿಸಲಾಯಿತು.
ಸಂಘದ ಸಿಬ್ಬಂದಿಗಳಾದ ಸುಶಾಂತ್ ,ಆಶಾ, ರಮೇಶ್, ಚಂದ್ರಿಕಾ, ಕಮಲಾಕ್ಷ, ಜ್ಯೋತಿ ಅತಿಥಿಗಳನ್ನು ಗೌರವಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೇಶ್,ಸಂಘದ ನಿರ್ವಾಹಣ ನಿರ್ದೇಶಕ ಚಂದನ್ ಕೋಟೆಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೃತಿ ಮತ್ತು ಬಳಗ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ದಿನೇಶ್ ರಾವ್ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಕಮಲಾಕ್ಷ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಸುಶಾಂತ್, ಸಿಬ್ಬಂದಿಗಳಾದ ಶ್ಯಾಮಪ್ರಸಾದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕ್ಷಾತ್ರಿಯ ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕ ಸುಬ್ರಹ್ಮಣ್ಯ ರಾವ್, ಸ್ವಾಮಿ ಕಲಾಮಂದಿರದ ಮಾಲಕ ಮಾದವ ಸ್ವಾಮಿ, ಜಯರಾಜ್, ಮಂಜುಳಾ, ವಾರಿಜ, ಉಮೇಶ್ ರಾವ್,ಪುತ್ತೂರು ಯುವ ವೃoದದ ಅಧ್ಯಕ್ಷ ಅನಿಶ್ ಕುಮಾರ್, ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀನಿವಾಸ್, ಸಂಘದ ನಿರ್ದೆಶಕರಾದ ರಾಮಚಂದ್ರ ಕೆ.ಎಸ್, ಜೆ ಕೃಷ್ಣಾನಂದ ರಾವ್, ಡಾ ಜೆ ರವೀಂದ್ರ, ಡಾ. ಹೆಚ್ ಪ್ರಭಾಕರ್, ಕೆ.ಎಸ್ ರಂಜನ್, ಕೆ.ರವೀಂದ್ರ, ಪಿ.ಬಾಬು, ವಾರಿಜಾ ಕೆ, ಡಾ. ಮಂಜುಳಾ ಎ ರಾವ್, ಕೆ. ಜೈರಾಜ್, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ನಿರ್ದೇಶಕ ನಾಗಪ್ಪ , ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಜಯರಾಜ್, ನ್ಯಾಯವಾದಿ ಅನಿಲ್ ಬೇಕಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪುತ್ತೂರು ಶಾಖೆಯ ಶುಭಾರಂಭದ ಪ್ರಯುಕ್ತ ಗ್ರಾಹಕರು ಇರಿಸುವ ಡೆಪೋಸಿಟ್‌ಗೆ ಶೇ.1 ಬಡ್ಡಿ ಹೆಚ್ಚಳ ನೀಡಲಾಗುವುದು. ಅದರಂತೆ ಸಾಲಗಾರರಿಗೆ ಶೇ.1 ಬಡ್ಡಿ ಕಡಿಮೆಯಲ್ಲಿ ಸಾಲ ವಿತರಿಸುವ ಯೋಜನೆಯನ್ನು ಸಂಘದ ಅಧ್ಯಕ್ಷ ಜೆ.ಕೃಷ್ಣ ಪಾಲೆಮಾರ್ ಘೋಷಣೆ ಮಾಡಿದರು.