ಬೆಳ್ತಂಗಡಿ ಜೆಡಿಎಸ್ ಕಚೇರಿ ಉದ್ಘಾಟನೆ

ಕರ್ನಾಟಕ ಪ್ರದೇಶ ಜನತಾದಳ ಜಾತ್ಯಾತೀತ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಲಾಯಿತು. ಮುಖ್ಯ ಗುರುಗಳಾದ ಸಯ್ಯದ್ ಸಲೀಮ್ ತಂಗಳ್ ಸಬರಬೈಲು ಕಚೇರಿ ಉದ್ಘಾಟಿಸಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಮಾತನಾಡಿ, ಬೆಳ್ತಂಗಡಿಯಲ್ಲಿ ಜಾತ್ಯಾತೀತ ಜನತಾದಳ ಶಕ್ತಿಯಿದೆ. ಇಂದು ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಕುಮಾರಸ್ವಾಮಿಯವರ ಆಡಳಿತ ಜನ ಮೆಚ್ಚಿದ್ದಾರೆ. ರಾಜ್ಯ ಸರ್ವ ಜನಾಂಗವು ಒಂದಾಗಿ ಜೀವಿಸಬೇಕೆಂಬ ಆದರ್ಶ ಬೆಳೆಸಿಕೊಂಡಿದ್ದಾರೆ. ರಾಜ್ಯದಲ್ಲಿ 123 ಕ್ಷೇತ್ರದಲ್ಲಿ ಗುರಿಯಿಟ್ಟು ಕಳೆದು ಒಂದು ವರ್ಷಗಳಿಂದ ಕಾರ್ಯೋನ್ಮುಖವಾಗಿದೆ ಎಂದರು.
ಕಾರ್ಯಾಧ್ಯಕ್ಷ ರಾಮಾಚಾರಿ ಮುಂಡಾಜೆ, ಪಕ್ಷದ ಹಿರಿಯರಾದ ಸುರೇಶ್ ಕುಮಾರ್ ನಡ್ಕ, ರಾಮಕೃಷ್ಣ ಗೌಡ, ಅಲ್ಪ ಸಂಖ್ಯಾತ ಘಟಕದ ಅಬ್ದುಲ್ ಸಲೀಂ ಬಂಡಸಾಲೆ, ಎಚ್.ಎನ್.ನಾಗರಾಜು, ಜಲೀಲ್ ಜಾರಿಗೆ ಬೈಲು, ಹಕೀಂ ಅಜಿಕುರಿ, ಕೇಂಬರ್ಜೆ, ರೆಮಹಮಾನ್, ನಯೀಂ, ಇಬ್ರಹಿಂ ಜಾರಿಗೆ ಬೈಲು ಉಪಸ್ಥಿತರಿದ್ದರು.
