ಹಾಡು ಹಗಲೆ ಅಪರಿಚಿತ ವ್ಯಕ್ತಿಯಿಂದ ಯುವತಿಗೆ ಚೂರಿ ಇರಿತ

ಪುತ್ತೂರು: ಪುತ್ತೂರು ತಾಲ್ಲೂಕು ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಗೆ ವ್ಯಕ್ತಿಯೊಬ್ಬರು ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ಮನೆಯಂಗಳದಲ್ಲೇ ನಡೆದಿದ್ದು ಗಿರಿಜಾ ಎಂಬವರ ಪುತ್ರಿ ಜಯಶ್ರೀ(23ವರ್ಷ) ಮೃತಪಟ್ಟವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೆÇಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಇವಳು ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಳ್ಳುತ್ತಿದ್ದಳು.ತಾಯಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಇವಳು ಬೊಬ್ಬೆ ಹೊಡೆಯುತ್ತಿದ್ದಗ ತಾಯಿ ಓಡಿ ಬಂದು ನೋಡಿದಾಗ ರಕ್ತ ಕೈಯಲ್ಲಿ ಕಾಣಿಸಿದ್ದು ಹೊಟ್ಟೆಯಲ್ಲಿ ಚೂರಿ ಕಂಡು ಬಂದ ಸ್ಥಿತಿಯಲ್ಲಿ ಇದ್ದು ಕೊಡಲೇ ಆಸ್ಪತ್ರೆಗೆ ತರುವಾಗ ಅರ್ಧ ದಾರಿಯಲ್ಲಿ ಮೃತಪಟ್ಟಳು ಎಂದು ತಿಳಿದು ಬಂದಿದೆ. ಚೂರಿ ಇರಿತವನ್ನು ಯಾರು ಅಪರಿಚಿತ ವ್ಯಕ್ತಿ ಮಾಡಿದ್ದಾರೆ ಎಂದು ಇನ್ನಷ್ಟೇ ತನಿಖೆಯಲ್ಲಿ ಗೊತ್ತಾಗಬೇಕಾಗಿದೆ. ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮೃತ ದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
