ಹಿನ್ನೋಟ”- ಇದು ನೆನಪಿನ ಬುತ್ತಿ ಕೃತಿ ಅನಾವರಣ
ಅರಂತೋಡಿನ ನಿವೃತ್ತ ರೇಂಜರ್ ಹೂವಯ್ಯ ಗೌಡ ಉಳುವಾರು ಅವರ ಬದುಕು ಹಾಗೂ ವೃತ್ತಿ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ “ಹಿನ್ನೋಟ- ಇದು ನೆನಪಿನ ಬುತ್ತಿ” ಯ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಗೌಡ ಮೂಲೆಮನೆ ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗಂಗಾಧರ ಉದ್ಘಾಟಿಸಿದರು. ಎಂ ಬಿ ಫೌಂಡೇಶನ್ ಅಭ್ಯಕ್ಷರಾದ ಎಂ ಬಿ ಸದಾಶಿವ ಕೃತಿಯನ್ನು ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಕೃತಿಯ ಸಂಪಾದಕರಾದ ಡಾ. ಅನುರಾಧಾ ಕುರುಂಜಿ, ಸಾಂದೀಪ್ ಶಾಲೆಯ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ, ತರಬೇತುದಾರ ಚಂದ್ರಶೇಖರ ಬಿಳಿನೆಲೆ, ಎಂ ಬಿ ಫೌಂಡೇಶನ್ ಟ್ರಸ್ಟಿ ನೇತ್ರಾವತಿ ಪಡ್ಡಂಬೈಲು, ಕೋಶಾಧಿಕಾರಿ ಪುಷ್ಪಲತಾ ರಾಧಾಕೃಷ್ಣ ಮಾಣಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಡಾ. ರಮ್ಯಾ ಅವರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಯಶೋಧ ಹೂವಯ್ಯ ಸ್ವಾಗತಿಸಿ, ದಿಲೀಪ್ ಕುಮಾರ್ ಉಳುವಾರು ಪ್ರಾಸ್ತಾವಿಕವಾಗಿ ಮಾತನಾಡಿ, ಪುರುಷೋತ್ತಮ ಉಳುವಾರು ವಂದಿಸಿದರು. ಭಾರತಿ ಪುರುಷೋತ್ತಮ ಉಳುವಾರು ಕಾರ್ಯಕ್ರಮ ನಿರೂಪಿಸಿದರು. ಮಾನಸ ದಿಲೀಪ್, ಅಶ್ವಿನಿ ಪ್ರದೀಪ್, ಯು ಸಿ ಕುಸುಮಾಧರ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಉಳುವಾರು ಮನೆತನದವರು, ಹೂವಯ್ಯ ಗೌಡರ ಬಂಧುಗಳು, ಆಹ್ವಾನಿತರು, ಶಾಲಾ ಶಿಕ್ಷಕರು, ಮಕ್ಕಳು ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅರೆಭಾಷೆ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ ಆರ್ ಗಂಗಾಧರ ಹಾಗೂ ಕೃತಿಯ ಸಂಪಾದಕರಾದ ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ಯವರನ್ನು ಹೂವಯ್ಯ ಗೌಡ ದಂಪತಿಗಳು ಅಭಿನಂದಿಸಿದರು.


















