ಮಂಗಳೂರು : ಮಾ.23ರಂದು ಬೋಳೂರಿನ ಪಾದೆಮನೆ ಶ್ರೀ ಕಲ್ಲುರ್ಟಿ ಕಲ್ಕುಡ ಆದಿ ದೈವಸ್ಥಾನ ದಲ್ಲಿ ವರ್ಷಾವಧಿ ನೇಮೋತ್ಸವ
ಮಂಗಳೂರಿನ ಬೋಳೂರಿನ ಪಾದೆಮನೆ ಶ್ರೀ ಕಲ್ಲುರ್ಟಿ-ಕಲ್ಕುಡ ಆದಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮಾರ್ಚ್ 23ರಂದು ಧಾರ್ಮಿಕ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಮಂಗಳೂರು ತಾಲೂಕಿನಲ್ಲಿ ಕಲ್ಲುರ್ಟಿ ದೈವಕ್ಕೆ ಆದಿ ಸ್ಥಳವಾದ ಪಾದೆಮನೆಯಲ್ಲಿ ದಿವಂಗತ ಸೋಮಪ್ಪ ಪೂಜಾರಿ ಅವರ ಮನೆಯಲ್ಲಿ ಉಗಣಬೈದೆದಿ ಕಾಲದಿಂದ ನಂಬಿಕೊಂಡ ಬಂದಂತಹ ಮಹಾ ಕಟಾಕ್ಷದ ಶ್ರೀ ಕಲ್ಲುರ್ಟಿ ಕಲ್ಕುಡ ಮತ್ತು ಗುಳಿಗ ಪಂಜಿರ್ಲಿ ಹಾಗೂ ರಾಹು ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿರುವುದು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ತನು-ಮನ-ದನಗಳಿಂದ ಸಹಕರಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಬೇಕೆಂದು ಬೋಳೂರಿನ ಪಾದೆಮನೆ ಕುಟುಂಬಸ್ಥರು ವಿನಂತಿಸಿದ್ದಾರೆ.