ಶಿರ್ವ: ಹಿಂದೂ ಜೂನಿಯರ್ ಕಾಲೇಜು ಹೊಸ ಅಕಾಡೆಮಿಕ್ ಬ್ಲಾಕ್ ಮತ್ತು ಎಐ ಕೊಠಡಿ ಉದ್ಘಾಟನೆ
ಕಾಪು:ಹಿಂದೂ ಜೂನಿಯರ್ ಕಾಲೇಜು, ಶಿರ್ವ ಇದರ ಹೊಸ ಅಕಾಡೆಮಿಕ್ ಬ್ಲಾಕ್ ಮತ್ತು ಎಐ ಕೊಠಡಿ ಉದ್ಘಾಟನೆ ಮತ್ತು ಕಾಲೇಜು ವಾರ್ಷಿಕೋತ್ಸವು ಸೋಮವಾರದಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ.ಎ ಗಫೂರ್, ಜ್ಞಾನ ಚೈತನ್ಯ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ರಾಜೇಶ್, ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿಗಳಾದ ವೈ ಭಾಸ್ಕರ್ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿದ್ದರು.


















