ಮಂಗಳೂರು:ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್‌ನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6ಬಿಡುಗಡೆ

ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ ೬ ಮತ್ತು ಬಾರ್ ೬ ಬಿಡುಗಡೆಗೊಂಡಿತು.


ವಾ.ಓ೦೧: ಹೊಸ ಹೊಸ ತಂತ್ರಜ್ಞಾನದ ಮೂಲಕ ಗ್ರಾಹಕರ ಮನಗೆದ್ದಿರುವ ಸೋನಿ ಸೆಂಟರ್ ಇದೀಗ ಉತ್ಕೃಷ್ಟವಾದ ಆಡಿಯೋ ವಿಶ್ಯುವಲ್ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6 ಬಿಡುಗಡೆಗೊಳಿಸಿದೆ.
ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸೋನಿ ಇಂಡಿಯಾ ಮಂಗಳೂರು ಬ್ರಾಂಚ್‌ನ ಮ್ಯಾನೇಜರ್ ನವೀನ್ ಕೆ.ಎಸ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಲೋರ್ಕಾಪಣೆಗೊಳಿಸಿದರು.ಈ ಸಂದರ್ಭ ಸೋನಿ ಸೆಂಟರ್ ಮಂಗಳೂರು ಶಾಖೆಯ ಸ್ಟೋರ್ ಮ್ಯಾನೇಜರ್ ಪ್ರಸಾದ್ ಆಚಾರ್ಯ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.




ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6 ಸಿನಿಮೀಯ ರೀತಿಯ ಸೌಂಡ್ ಎಫೆಕ್ಟ್‌ಗಳನ್ನ ಕಾಣಬಹುದಾಗಿದೆ. ಈ ಹೊಸ ಆಡಿಯೋ ಸಿಸ್ಟಂಗಳು ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ಎಕ್ಸ್ ತಂತ್ರಜ್ಞಾನಗಳ ಬೆಂಬಲದೊಂದಿಗೆ ಪರಿಚಯಗೊಂಡಿದ್ದು, ಸೋನಿ ಬ್ರಾವಿಯಾ ಟಿವಿಗಳೊಂದಿಗೆ ಹೊಂದಿಕೊಳ್ಳುವ ಇಂಟಿಗ್ರೇಟೆಡ್ ಯೂಸರ್ ಇಂಟರ್ಫೇಸ್ (UI) ಹೊಂದಿವೆ. ಉತ್ತಮ ಗುಣಮಟ್ಟದ ಆಡಿಯೋ ಅನುಭವವನ್ನು ಹೊಂದಿದೆ. ಮನೆಯಲ್ಲಿಯೇ ಸಿನಿಶೈಲಿಯ ಸೌಂಡ್ಸ್‌ಗಳನ್ನ ಕೇಳಬಹುದಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್ ಶೋರೋಗೆ ಭೇಟಿ ನೀಡಬಹುದಾಗಿದೆ.