ಇಸ್ಕಾನ್ ಮಂಗಳೂರು || ಸೆ.6 ಮತ್ತು 7ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ನಗರದ ಕೊಡಿಯಾಲ್‍ಬೈಲ್‍ನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಾಗುವುದು ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ತಿಳಿಸಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 2 ಮತ್ತು 3ರಂದು ದೇವಾಲಯದ ಸಭಾಂಗಣದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಉತ್ಸವದ ಏರ್ಪಡಿಸಲಾಗಿದೆ. ಭರತನಾಟ್ಯ, ಪ್ರಬಂಧ, ಭಜನೆ, ಚಿತ್ರಕಲಾ ಮತ್ತು ಕೃಷ್ಣವೇಷ ಸ್ಪರ್ಧೆಗಳು ನಡೆಯಲಿವೆ. ಎರಡು ಅನಾಥಾಶ್ರಮಗಳ ಮಕ್ಕಳಿಗೆ ವಿಶೇಷ ಆಮಂತ್ರಣ ನೀಡಿ ಅವರಿಗೆ ಪ್ರಸಾದ ನೀಡಲಾಗುವುದು’ ಎಂದರು.
ಭಕ್ತರು ಹರಿನಾಮ ಮಂತ್ರವನ್ನು ಜಪಿಸಿ 108 ಹೆಜ್ಜೆಗಳನ್ನು ದಾಟುವ ಕಾರ್ಯಕ್ರಮಕ್ಕೆ ವಿಶೇಷ ವೇದಿಕೆ ನಿರ್ಮಿಸಲಾಗಿದೆ. ಕೃಷ್ಣನ ಜನ್ಮಸ್ಥಳ ಮಥುರಾದಿಂದ ತರುವ ವಿಶೇಷ ರಕ್ಷೆಯನ್ನು ಭಕ್ತರಿಗೆ ಕಟ್ಟಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಸನಂದನದಾಸ, ಜತೆ ಕಾರ್ಯದರ್ಶಿ ಸುಂದರಗೌರ ದಾಸ ಉಪಸ್ಥಿತರಿದ್ದರು.