ಸುರತ್ಕಲ್: ಜುಲೈ 19ರಂದು ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಗ್ರ್ಯಾಂಡ್ ಸಿಟಿ ಬ್ರೋಚರ್ ಬಿಡುಗಡೆ

ಮಂಗಳೂರಿನ ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಗ್ರ್ಯಾಂಡ್ ಸಿಟಿ ಇದರ ಬ್ರೋಚರ್ ಬಿಡುಗಡೆ ಸಮಾರಂಭವು ಸುರತ್ಕಲ್‌ನ ಕೃಷ್ಣಾಪುರದಲ್ಲಿ ನಾಳೆ ನಡೆಯಲಿದೆ.
ಜುಲೈ 19ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬ್ರೋಚರ್ ಬಿಡುಗಡೆ ಸಮಾರಂಭ ನಡೆಯಲಿದ್ದು, ಬಿಎಂಆರ್ ಗ್ರೂಪ್‌ನ ಚೇರ್‌ಮೆನ್ ಹಾಜಿ ಕೆ. ಇಬ್ರಾಹಿಂ, ಖತೀಬ್ ಮುಸ್ತಫಾ ಸಅದಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಸುರತ್ಕಲ್ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಮಂಗಳೂರು ಅರ್ಬನ್ ಡೆವಲಪ್‌ಮೆಂಟ್ ಅಥೋರಿಟಿಯ ಸದಸ್ಯ ಅಬ್ದುಲ್ ಜಲೀಲ್, ಬಿಜೆಪಿ ಯುವ ಮೋರ್ಚಾದ ಜನರಲ್ ಸೆಕ್ರೆಟರಿ ಭರತ್ ರಾಜ್ ಕೃಷ್ಣಾಪುರ, ಪಾಲಿಕೆ ಸದಸ್ಯ ಸಂಶಾದ್ ಅಬೂಬಕ್ಕರ್, ಬಿಎಂಆರ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ದಾವೂದ್ ಹಕೀಮ್ ಭಾಗವಹಿಸಲಿದ್ದಾರೆ.