ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 90 ರಷ್ಟು ಕ್ಷೀಣಿಸುತ್ತದೆ. ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಂಬಾಕು ಉತ್ಪನ್ನಗಳಾದ ಗುಟ್ಕಾ, ಪಾನ್ ಪರಾನ್, ಬೀಡಿ, ಸಿಗರೇಟುಗಳ ದುರ್ಬಳಕೆಯಿಂದ ಬರುತ್ತದೆ. ಇದನ್ನು
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಮಂಗಳೂರು ಘಟಕದ ಗೃಹರಕ್ಷಕಿ ಶ್ರೀಮತಿ ಜಯಂತಿ ಇವರನ್ನು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಶ್ರೀಮತಿ ಜಯಂತಿ ಅವರು 16-10-2018 ರಲ್ಲಿ ಗೃಹರಕ್ಷಕ ದಳಕ್ಕೆ ಸೇರ್ಪಡೆಯಾಗಿ ಸುಮಾರು 6 ವರ್ಷಗಳಿಂದ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಗೃಹರಕ್ಷಕ
ಕಳೆದ ಒಂಬತ್ತೂವರೆ ವರುಷಗಳಿಂದ ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟನಾಗಿ ಸೇವೆ ಸಲ್ಲಿಸುತ್ತಿರುವ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕ ಡಾ. ಮುರಲೀಮೋಹನ್ ಚೂಂತಾರುರವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.ಇವರು ಸಲ್ಲಿಸಿದ ಪ್ರಾಮಾಣಿಕ, ಪಾರದರ್ಶಕ, ನಿಷ್ಪಕ್ಷಪಾತ ಮತ್ತು ನಿಷ್ಕಾಮ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಗೃಹ ಮಂತ್ರಾಲಯದ ಶಿಫಾರಸಿನಂತೆ ಪ್ರತಿಷ್ಟಿತ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇವರ ತಾಯಿ ಸರೋಜಿನಿ
ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ. ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ
ಲೈಪೋಮಾ ಎನ್ನುವುದು ಕೊಬ್ಬಿನ ಜೀವಕೋಶಗಳ ಗಡ್ಡೆಯಾಗಿದ್ದು ಚರ್ಮದ ಮತ್ತು ಚರ್ಮದ ಕೆಳಗಿನ ಪದರದ ನಡುವೆ ಬೆಳೆಯುತ್ತದೆ. ಬಹಳ ನಿಧಾನವಾಗಿ ಬೆಳೆಯುವ ನಿರುಪದ್ರವಿ ಕ್ಯಾನ್ಸರ್ ಅಲ್ಲದ ಗಡ್ಡೆ ಇದಾಗಿದ್ದು ಜನರು ನೋವಿಲ್ಲದ ಕಾರಣ ಹಚ್ಚು ತಲೆಕೆಡಿಸುವ ಗೋಜಿಗೆ ಹೋಗುವುದಿಲ್ಲ. ಮುಟ್ಟಲು ಗಟ್ಟಿಯಾಗಿರದೆ ಬಹಳ ಮೆದುವಾಗಿರುತ್ತದೆ. ಹಾಗೂ ಚರ್ಮದ ಪದರಗಳ ನಡುವೆ ಚಲಿಸುವಂತೆ ಬಾಸವಾಗುತ್ತದೆ. ಒಬ್ಬರಿಗೆ ಒಂದಕ್ಕಿAತ ಹೆಚ್ಚು ಲೈಪೋಮಾ ಇರುವ ಸಾಧ್ಯತೆ ಇರುತ್ತದೆ. ಹೆಚ್ಚಾಗಿ
ಒಬ್ಬ ವ್ಯಕ್ತಿ ಜೀವನ ಪರ್ಯಂತ ಆರೋಗ್ಯವಂತನಾಗಿರ ಬೇಕಾದಲ್ಲಿ ಆತನು ದೈಹಿಕ ಮತ್ತು ಮಾನಸಿಕವಾಗಿ ಯಾವತ್ತೂ ಉಲ್ಲಸಿತನಾಗಿರುವುದು ಅತೀ ಅಗತ್ಯ. ನಿರಂತರ ದೈಹಿಕ ಕಸರತ್ತು ಅಥವಾ ವ್ಯಾಯಾಮದಿಂದ ಅಪಾಯಕಾರಿ ರೋಗಗಳಾದ ಹೃದಯಾಘಾತ, ಕ್ಯಾನ್ಸರ್, ಸ್ಥೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡ, ಗಂಟು ನೋವು, ಮಾನಸಿಕ ಖಿನ್ನತೆ ಮುಂತಾದವುಗಳನ್ನು ಬಹಳ ಸುಲಭವಾಗಿ ತಡೆಗಟ್ಟಬಹುದು. ಅತೀ ಕಡಿಮೆ ಖರ್ಚಿನಲ್ಲಿ ದೊರಕಬಹುದಾದ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ ಎಂದರೆ ಸೈಕ್ಲಿಂಗ್
ಮೊಟ್ಟೆ ಎನ್ನುವುದು ಅತ್ಯಂತ ರುಚಿಕರವಾದ, ಎಲ್ಲರೂ ಖರೀದಿಸಬಹುದಾದ ಕಡಿಮೆ ವೆಚ್ಚದ, ವಿಶ್ವದೆಲ್ಲೆಡೆ ಸಿಗಬಹುದಾದ ಪೋಷಕಾಂಶ ಮತ್ತು ಖನಿಜಾಂಶಯುಕ್ತ ಸಂಪೂರ್ಣ ಆಹಾರವಾಗಿದ್ದು ಜನರ ಹಸಿವನ್ನು ನೀಗಿಸುವುದರ ಜೊತೆಗೆ ಅಪೌಷ್ಟಿಕತೆಯನ್ನು ನಿವಾರಿಸುತ್ತದೆ. ಈ ಕಾರಣದಿಂದ ನಮ್ಮ ಆಹಾರದ ಬಳ್ಳಿಯಲ್ಲಿ ಮೊಟ್ಟೆಗೆ ಅಗ್ರಸ್ಥಾನವನ್ನು ನೀಡಲಾಗಿದೆ. ಪ್ರೊಟೀನ್, ವಿಟಮಿನ್, ಖನಿಜಾಂಶ, ಲವಣಾಂಶ ಹೀಗೆ 15ಕ್ಕೂ ಹೆಚ್ಚಿನ ಅತ್ಯವಶ್ಯಕ ಆಹಾರ ಧಾತುಗಳನ್ನು ಹೊಂದಿರುವ ಏಕೈಕ ಆಹಾರ
ಪ್ರತಿ ವರ್ಷ ಮೇ 16ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . 2023ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ. ಏನಿದು ಡೆಂಗ್ಯೂ ಜ್ವರ? ಡೆಂಗ್ಯೂ ಜ್ವರ ಮತ್ತು ಡೆಂಗ್ಯೂ ರಕ್ತಸ್ರಾವ ಜ್ವರಗಳು ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ
ಡೆಂಗೆ ಜ್ವರ ಯಾಕೆ, ಹೇಗೆ?ಡೆಂಗೆ ಜ್ವರ ಮತ್ತು ಡೆಂಗೆ ರಕ್ತಸ್ರಾವ ಜ್ವರಗಳು ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿಯಾದ, ತೀವ್ರ ಜ್ವರಲಕ್ಷಣದ ಒಂದು ರೋಗವಾಗಿದೆ. ಡೆಂಗೇ ಎಂಬ ವೈರಸ್ ಸೋಂಕುವಿನಿಂದ ಉಂಟಾಗುವ ಈ ಜ್ವರವು ‘ಏಡಿಸ್’ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಡೆಂಗೇ ಜ್ವರವು ಸಾಂಕ್ರಾಮಿಕ ರೋಗವಾಗಿರುತ್ತದೆ. ಈ ರೋಗಕ್ಕ ‘ಲಸಿಕೆ’ ¯ಭ್ಯವಿಲ್ಲದ ಕಾರಣ, ರೋಗವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ರೋಗವನ್ನು
ವಕ್ರದಂತ ರೋಗಿಗಳಿಗೆ ಶುಕ್ರದೆಸೆ ತಂದ “ದಂತ ಕ್ಲಿಯರ್ ಅಲೈನರ್” ನಸುಗುಲಾಬಿ ಬಣ್ಣದ ವಸಡಿನ ಮೇಲೆ ಮುತ್ತು ಪೋಣಿಸಿದಂತೆ ಸಾಲಾಗಿ ಶುಭ್ರ ದಂತ ಪಂಕ್ತಿಗಳು ಪಳಪಳನೆ ಹೊಳೆಯುತ್ತಿದ್ದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಸುಂದರ ದಂತ ಪಂಕ್ತಿಗಳು ಇರಬೇಕೆಂಬ ಮಹದಾಷೆ ಇರುವುದಂತು ಸತ್ಯ. ಹಲ್ಲುಗಳು ಎಲ್ಲೆಂದರಲ್ಲಿ ಮೊಳೆದು, ಎರಾಬಿರ್ರಿಯಾಗಿ ವಸಡಿನಲ್ಲಿ ಬೆಳೆದಲ್ಲಿ ಉಂಟಾಗುವ ವಕ್ರದಂತ ಸಮಸ್ಯೆ ಬರೀ ಮುಖದ ಸೌಂದರ್ಯವನ್ನು ಹಾಳುಗೆಡುವುದಲ್ಲದೆ, ವ್ಯಕ್ತಿಯ