ಹಲ್ಲು ನಮ್ಮ ದೇಹದ ಅತ್ಯಂತ ಪ್ರಾಮುಖ್ಯವಾದ ಅಂಗ. ಸುಂದರ ದಂತ ಪಂಕ್ತಿಗಳಿಂದ ಕೂಡಿದ ನಗು ಎಂತವರನ್ನು ಮಂತ್ರ ಮುಗ್ಧವಾಗಿಸುತ್ತದೆ. ಹಲ್ಲು ನಮ್ಮ ದೇಹದ ಮುಂಭಾಗದಲ್ಲಿ ಇರುವ ಕಾರಣದಿಂದಲೇ ಯಾವುದೇ ಆಟೋಟಗಳಲ್ಲಿ, ಹೊಡೆದಾಟದಲ್ಲಿ, ಅಪಘಾತದಲ್ಲಿ ಬಿದ್ದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಇದು ಸರ್ವೆ ಸಾಮಾನ್ಯವಾಗಿರುತ್ತದೆ. ಹೀಗೆ
ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರಿ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು ಸ್ನೇಹ ಹಸ್ತ ಚಾಚುವ ಒಂದು ವಿಶಿಷ್ಠ ಹಬ್ಬವೇ ಹೋಳಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ಸಂಭ್ರಮಿಸುವ ಈ
ಕಣ್ಣುಗಳು ನಮ್ಮ ದೇಹದ ಸಂವೇದನೆಯ ಅಂಗಗಳಲ್ಲಿ ಅತ್ಯಮೂಲ್ಯವಾದ ಅಂಗವಾಗಿದೆ. ಕಣ್ಣುಗಳು ನಮಗೆ ಜೀವನದ ಬಾಹ್ಯ ಜಗತ್ತಿನ ವಿವಿಧ ವಿಚಾರಗಳ ಅನುಭವವನ್ನು ಹೊಂದಲು ನೆರವಾಗುತ್ತವೆ. ಭಾವೋದ್ವೇಗಗಳು, ಭಾವನೆಗಳು ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದ ಅದ್ಭುತವಾದ ಬಣ್ಣಬಣ್ಣದ ಜಗತ್ತನ್ನು ಆಸ್ಪಾದಿಸಲು ಕಣ್ಣುಗಳು ನಮಗೆ ಅತೀ ಅವಶ್ಯಕ. ಬಾಹ್ಯ ಜಗತ್ತಿನ ಸೌಂದರ್ಯವನ್ನು ಆಸ್ಪಾದಿಸಲು ಕಣ್ಣುಗಳ ದೃಷ್ಟಿ ನಮಗೆ ಅನಿವಾರ್ಯ. ದೃಷ್ಟಿ ಇಲ್ಲದ ನಮ್ಮ ಜೀವನ ಖಂಡಿತ ಬಣ್ಣವಿಲ್ಲದ
ನೈಸರ್ಗಿಕವಾಗಿ ದೊರಕುವ, ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಿ, ಮನಸ್ಸಿಗೆ ಉಲ್ಲಾಸ ನೀಡುವಅತೀ ಉತ್ತಮ ಪೇಯವೆಂದರೆ ಅದು ಎಳನೀರು ಎಂದರೆ ಅತಿಶಯೋಕ್ತಿಯಾಗಲಾರದು. ಬಹಳ ಸುಲಭವಾಗಿ ಹಳ್ಳಿ, ನಗರ, ಪೇಟೆ, ಊರು, ಕೇರಿ ಹೀಗೆ ಎಲ್ಲೆಡೆ ಅತೀ ಕಡಿಮೆ ದರಕ್ಕೆ ದೊರಕುವ ಈ ನೈಸರ್ಗಿಕ ಪೇಯವನ್ನು ಅಮೃತ ಸದೃಶ ಪೇಯ ಎಂದೂ ಕರೆಯಲಾಗುತ್ತದೆ. ಇದರಲ್ಲಿ ದೊರಕುವ ವಿಟಮಿನ್, ಖನಿಜಾಂಶ, ಪೋಷಕಾಂಶ ಮತ್ತು ಇತರ ಸಮೃದ್ಧವಾದ ಸೋಡಿಯಂ, ಪೊಟಾಷಿಯಂ ಮುಂತಾದ ಲವಣಗಳಿಂದಾಗಿ,
ಹಲ್ಲುಗಳು ಹುಳುಕಾಗಲು ಬರೀ ಸಿಹಿ ತಿಂಡಿ ಮಾತ್ರವೇ ಕಾರಣವಲ್ಲ. ಹಲ್ಲು ಹುಳುಕಾಗಲು ಹಲವಾರು ಕಾರಣಗಳಿವೆ. ಅನುವಂಶಿಕ ಮತ್ತು ವಂಶ ಪಾರಂಪರ್ಯ ಕಾರಣಗಳು, ನಿಯಮಿತವಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳದಿರುವುದು, ಸರಿಯಾದ ಕ್ರಮದಲ್ಲಿ ಸರಿಯಾದ ದಂತ ಚೂರ್ಣವನ್ನು ಉಪಯೋಗಿಸಿ ಹಲ್ಲು ಉಜ್ಜದಿರುವುದರಿಂದ ದಂತ ಕ್ಷಯವಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಲ್ಲಿನ ರಚನೆಯಲ್ಲಿನ ವ್ಯತ್ಯಾಸ, ತುಂಬಾ ಆಳವಾದ ಹಲ್ಲಿನ ಚಡಿ ಮತ್ತು ಗೀರುಗಳು ಹಲ್ಲಿನ ಜೋಡಣೆಯಲ್ಲಿನ
ಉಸಿರಾಟ ಎನ್ನುವುದು ನೈಸರ್ಗಿಕವಾದ ನಮಗರಿವಿಲ್ಲದೆ ಉಂಟಾಗುವ ಜೈವಿಕ ಪ್ರಕ್ರಿಯೆಯಾಗಿರುತ್ತದೆ. ಪ್ರತಿಯೊಬ್ಬ ಜೀವಿಗೂ ಅಗತ್ಯವಾದ ಆಕ್ಸಿಜನ್ ದೊರಕಿ, ಅನಗತ್ಯವಾದ ಕಾರ್ಬನ್ ಡೈಯಾಕ್ಸೈಡ್ ಮತ್ತು ಇತರ ಅನಿಲಗಳು ಉಸಿರಾಟದ ಮುಖಾಂತರ ಹೊರ ಹಾಕಲ್ಪಡುತ್ತದೆ. ನಾವು ಸೇವಿಸಿದ ಗಾಳಿ ನೇರವಾಗಿ ಶ್ವಾಸಕೋಶಕ್ಕೆ ಗಾಳಿ ಕೊಳವೆ ಅಥವಾ ಟ್ರೇಕಿಯಾ ನಾಳದ ಮುಖಾಂತರ ತಲುಪುತ್ತದೆ. ನಾವು ಗಾಳಿಯನ್ನು ಮೂಗು ಮತ್ತು ಬಾಯಿಯ ಮುಖಾಂತರ ಒಳಗೆ ಸೆಳೆದುಕೊಳ್ಳಬಹುದು. ಆರೋಗ್ಯವಂಥ ವ್ಯಕ್ತಿಗಳು
ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ (B.D.S) ಪಡೆದ ಬಳಿಕ ಸುಮಾರು ಒಂಭತ್ತು ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತಕೋತರ ಪದವಿ (M.D.S) ಪಡೆಯುವ ಅವಕಾಶÀವಿದೆ. ಇದರಲ್ಲಿ ಒಂದು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ ಶಾಸ್ತ್ರ (“ORAL AND MAXILLOFACIAL SURERY) ಎಂದು ಕರೆಯಲಾಗುತ್ತದೆ. ಬಾಯಿ ಮುಖ ಮತ್ತು ದವಡೆ
ವಿಶ್ವ ಅಪಸ್ಮಾರ ಜಾಗೃತಿ ದಿನ – ಫೆಬ್ರವರಿ 12 ಪ್ರತಿ ವರ್ಷ ವಿಶ್ವದಾದ್ಯಂತ ಫೆಬ್ರವರಿ ತಿಂಗಳ ಎರಡನೇ ಸೋಮವಾರದಂದು “ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ” ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತಿನಾದ್ಯಂತ ಸರಿಸುಮಾರು 65 ಮಿಲಿಯನ್ ಮಂದಿ ಈ ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು, ಈ ಖಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸಿಮೀತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ
ನಾಲಿಗೆ ಕಟ್ಟು ಅಥವಾ ಆಂಖೈಲೋಗ್ಲೋಸಿಯಾ ಎನ್ನುವುದು ಒಂದು ಜನ್ಮ ಜಾತವಾಗಿ ಕಂಡು ಬರುವ ವಿಶೇಷ ಸನ್ನಿವೇಶವಾಗಿದ್ದು, ಮಗುವಿನ ನಾಲಿಗೆಯನ್ನು ಚಲನೆಯನ್ನು ಅದು ನಿಯಂತ್ರಿಸುತ್ತದೆ. ಇದನ್ನು ಆಂಗ್ಲಭಾಷೆಯಲ್ಲಿ ಟಂಗ್ ಟೈ ಅಂತಲೂ ಕರೆಯುತ್ತಾರೆ. ನಾಲಿಗೆ ತಳಭಾಗದಲ್ಲಿ ಬಾಯಿಯ ಬಾವಿಗೆ ನಾಲಗೆಯನ್ನು ಹಿಡಿದಿಟ್ಟುಕೊಂಡು ನಾಲಗೆ ಸರಾಗವಾಗಿ ಚಲಿಸದಂತೆ ನಿಯಂತ್ರಿಸುತ್ತದೆ. ಈ ರೀತಿ ನಾಲಿಗೆಯ ಚಲನೆ ಸರಾಗವಾಗಿ ಆಗದಿದ್ದಲ್ಲಿ ಮುಂದೆ ಮಾತನಾಡುವಾಗ ತೊದಲುವಿಕೆ ಉಂಟಾಗುವ
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು