Home Posts tagged #kaikamba

ವಾಸ ಮತ್ತು ಹೂಡಿಕೆಗೆ ಸೂಕ್ತ ಆಯ್ಕೆ – ಸನ್‍ಶೈನ್ ಸ್ಯಾಪ್ಲಿಂಗ್

ಉತ್ಕೃಷ್ಟ ಗುಣಮಟ್ಟದ ಕಾಮಗಾರಿ, ವಿಶಾಲ ಹಸಿರು ವಲಯ, ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆಯ ಜೊತೆಗೆ ಸುಸಜ್ಜಿತ ಸನ್‍ಶೈನ್ ಸ್ಯಾಪ್ಲಿಂಗ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 15 ರಿಂದ 24ರ ಸೀಮಿತ ಅವಧಿಗೆ ಆದ್ಯತೆಯ ಮೇರೆಗೆ ಅಪಾರ್ಟ್‍ಮೆಂಟ್ ಖರೀದಿಯ ಮೇಲೆ 10% ವಿಶೇಷ ಹಬ್ಬದ ರಿಯಾಯತಿಯನ್ನು

ಗುರುಪುರ : ಬಸ್ ಢಿಕ್ಕಿಯಾಗಿ ಯುವಕ ಸಾವು- ಕೈಕಂಬ ಜಂಕ್ಷನ್‍ನಲ್ಲಿ ಪ್ರತಿಭಟನೆ

ಮಂಗಳೂರು: ಗುರುಪುರ ಜಂಕ್ಷನ್ ಬಳಿ ಜೂನ್ 22ರಂದು ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆಯನ್ನು ಖಂಡಿಸಿ ಶುಕ್ರವಾರ ಸ್ಥಳೀಯರು ಕೈಕಂಬ ಜಂಕ್ಷನ್‍ನಲ್ಲಿ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಸ್ ಢಿಕ್ಕಿಯಾಗಿ ಬೈಕ್ ಸವಾರ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಅವರು ಮೃತಪಟ್ಟಿದ್ದು ಈ ಘಟನೆಯನ್ನು ಖಂಡಿಸಿ ನೂರಾರು ಮಂದಿ ಪ್ರತಿಭಟನೆ ಸೇರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಕೈಕಂಬ ಜಂಕ್ಷನ್

ಗುರುಪುರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿ ಮೃತ್ಯು

ಕರಿಯಂಗಳ ನಿವಾಸಿ ಸಂತೋಷ್ ಇಂದು ಮುಂಜಾನೆ ವಾಮಂಜೂರು ಕಡೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಗುರುಪುರದ ಬಳಿ ಖಾಸಗಿ ಬಸ್ಸಿನ ಅತೀ ವೇಗದ ಚಾಲನೆಯಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ

ಕೈಕಂಬ : ನನ್ನ ಲೈಫ್ – ನನ್ನ ಸ್ವಚ್ಛನಗರ ಕಾರ್ಯಕ್ರಮ

ಬಂಟ್ವಾಳ ಪುರಸಭೆಯ ವತಿಯಿಂದ ನನ್ನ ಲೈಫ್ – ನನ್ನ ಸ್ವಚ್ಛನಗರ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕಂಬ ಬಳಿಕ ಪರ್ಲಿಯಾ ಹಾಗೂ ಕೊಡಂಗೆ ಬಳಿ ನಡೆಯಿತು. ಮಂಗಳೂರು ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕ ಅಭಿದ್ ಗದ್ಯಾಲ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನ ಪ್ರಸಾದ್, ಪ್ರಮುಖರಾದ ವಸಂತಿ ಗಂಗಾಧರ್, ಎ. ದಾಮೋದರ ಸಂಚಯಗಿರಿ, ಮಚ್ಚೇಂದ್ರ

ಗುರುಪುರ ಕೈಕಂಬ ಇಳಿಜಾರು ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ!!

ಮಂಗಳೂರು:ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ,ಚಾಲಕರಿಬ್ಬರು ಮೃತಪಟ್ಟ ಘಟನೆಯೊಂದು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿಯ ಇಳಿಜಾರು ಪ್ರದೇಶದಲ್ಲಿ ನಡೆದಿದೆ. ಮೂಡುಬಿದ್ರೆ ಕಡೆಯಿಂದ ಮಣ್ಣು ಹೊತ್ತು ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯ ಹೊಂಡಕ್ಕೆ ಇಳಿದು ನಿಂತ ಪರಿಣಾಮ ಚಾಲಕರನ್ನು

ಪ್ರೀತಿಯ ಸಾಕು ನಾಯಿಗೆ ಸೀಮಂತ

ಮಂಗಳೂರು:ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ,ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತದ ಮಾಡಿದ್ದಾರೆ. ಸೀಮಂತದ ಫೂಟೊ, ವೀಡಿಯೋ ವ್ಯೆರಲ್ ಆಗಿವೆ.ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ, ತಮ್ಮ ಮನೆಯಲ್ಲಿ ಸಾಕಿದ್ದ, ಒಂದುವರೆ ವರುಷದ ಶಾಡೊ ಎಂಬ ಗರ್ಭಿನಿ ನಾಯಿಗೆ ಹಸಿರು ಬಳೆ ,ಹಸಿರು ಸೀರೆ , ಕುಂಕುಮ ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ

ಗುರುಪುರ ಕೈಕಂಬದಲ್ಲಿ ಸಿ.ಪಿ.ಐ.ಎಂ.ಪಕ್ಷದ 23 ನೇ ಜಿಲ್ಲಾ ಸಮಾವೇಶ

ಗುರುಪುರ ಕೈಕಂಬದಲ್ಲಿ ನಡೆದ ಸಿ.ಪಿ.ಐ.ಎಂ.ಪಕ್ಷದ 23 ನೇ ಜಿಲ್ಲಾ ಸಮಾವೇಶದ ಬಹಿರಂಗ ಸಭೆಯನ್ನು ಉದ್ದೇಶಿಸಿ ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು

ಪ್ರವಾದಿ ನಿಂದನೆಯನ್ನು ವಿರೋಧಿಸಿ ಪ್ರತಿಭಟನೆ

ಗುರುಪುರ ಕೈಕಂಬ; ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯದಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಎಂ. ಇಸ್ಹಾಕ್ ಕೌಸರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ನಿಮಗಿಂತಲೂ ಪ್ರವಾದಿಯನ್ನು ನಿಂದಿಸಿದ ಜನರು ಕಳೆದುಹೋಗಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಪ್ರವಾದಿಯವರನ್ನು ಅರಿತಾಗ ಇಸ್ಲಾಂ ಸ್ವೀಕರಿಸಿದ ಚರಿತ್ರೆಯಿದೆ. ಪ್ರವಾದಿಯನ್ನು

ಮಳೆಗೆ ಗುಡ್ಡ ಕುಸಿತ : ಮನೆ ಗೋಡೆ ಕುಸಿದು ಮಹಿಳೆಗೆ ಗಾಯ

ಮಂಗಳೂರು : ಕರಾವಳಿ ಭಾಗದಲ್ಲಿ ಕಳೆದ ಕೆಲದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಕೂಡ ಬಿಡದೇ ಮಳೆ ಸುರಿದಿದೆ. ಇದರಿಂದ ಸೋಮವಾರ ಬೆಳಗ್ಗೆ 5.30ರ ವೇಳೆಗೆ ಮಂಗಳೂರು ಹೊರವಲಯದಮಲ್ಲೂರು ಜಂಕ್ಷನ್ ಸಮೀಪ ಝುಬೇರ್ ಎಂಬುವವರ ಮನೆಯ ಹಿಂಭಾಗವಿದ್ದ ಭಾರೀ ಗಾತ್ರದ ಗುಡ್ಡ ಮನೆಯ ಮೇಲೆ ಕುಸಿದು ಬಿದ್ದು ಮನೆಯಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯವಾಗಿದೆ.ಘಟನೆಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಬೀಪಾತುಮ್ಮ (72) ಎಂದು

ಕೃಷ್ಣಾಪುರ 4ನೇ ಬ್ಲಾಕ್- ಕೈಕಂಬ ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣ: ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿಪೂಜೆ

ಕರ್ನಾಟಕ ಸರಕಾರದ ವಿಶೇಷ ಅನುದಾನದ ಮೂಲಕ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕೃಷ್ಣಾಪುರ 4 ನೇ ಬ್ಲಾಕಿನ ಕೈಕಂಬವನ್ನು ಸಂಪರ್ಕಿಸುವ ರಸ್ತೆಯನ್ನು 20 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣ ಮಾಡುವ ಯೋಜನೆಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಭಾಗದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಸ್ಥಳೀಯರು ಶಾಸಕರಿಗೆ ಮನವಿ ಅರ್ಪಿಸಿದರು.ಕಾರ್ಯಕ್ರಮದಲ್ಲಿ ಭಾಜಪಾ ಉತ್ತರ ಮಂಡಲ ಅಧ್ಯಕ್ಷರಾದ