ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ 68ನೇ ಎಸ್ ಜಿಎಫ್ಐ (ಸ್ಕೂಲ್ ಗೇಮ್ಸ್) ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಎರಡನೇ ದಿನದ ಸ್ಪರ್ಧೆಯಲ್ಲಿ ಅಂಡರ್ 17 ಬಾಲಕಿಯರ ವಿಭಾಗದ 4 x 100 ಫ್ರಿಸ್ಟೈಲ್ ರಿಲೇ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ ನ ಸದಸ್ಯೆ ಕು| ಪೂರ್ವಿ ಎಂ. ಇವರು ಕಂಚಿನ ಪದಕವನ್ನು ಗಳಿಸಿರುತ್ತಾರೆ.
ದೆಹಲಿಯಲ್ಲಿ ನಡೆದ 67ನೇ ಸ್ಕೂಲ್ ಗೇಮ್ಸ್ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್-2023-24ರ ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್‌ನ ಚಿಂತನ್ ಎಸ್. ಶೆಟ್ಟಿ ಅವರು, 1 ಚಿನ್ನ ಹಾಗೂ 4 ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜನವರಿ 3ರಿಂದ 9ರ ವರೆಗೆ ದೆಹಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಈಜು ಸಂಕೀರ್ಣದಲ್ಲಿ ನಡೆದ ಸ್ಕೂಲ್ ಗೇಮ್ಸ್ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರೀಯ ಈಜು